‘೮೪ ಲಕ್ಷ ಜೀವಯೋನಿಗಳಲ್ಲಿ ಮೋಕ್ಷಪ್ರಾಪ್ತಿಯನ್ನು ಮಾಡಿ ಕೊಡುವ ಮನುಷ್ಯಜನ್ಮವು ದುರ್ಲಭವಾಗಿದೆ, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇಂತಹ ದುರ್ಲಭ ಮನುಷ್ಯಜನ್ಮವು ಇಂದು ಪೃಥ್ವಿಯ ಮೇಲೆ ೭೦೦ ಕೋಟಿ ಜನರಿಗೆ ಪ್ರಾಪ್ತವಾಗಿದೆ; ಆದರೆ ನಿಜವಾಗಿ ಎಷ್ಟು ಜನರು ಮೋಕ್ಷದ ಮಾರ್ಗದಲ್ಲಿದ್ದಾರೆ ?
ಮೋಕ್ಷಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನದಿಂದ ಇಂದು ಪೃಥ್ವಿಯ ಮೇಲೆ ಆಧ್ಯಾತ್ಮಿಕ ಉನ್ನತಿಯ ಮಾರ್ಗವು ಸುಲಭವಾಗಿದೆ. ‘ಗುರುಗಳ ಮಾರ್ಗದರ್ಶನ ದಲ್ಲಿ ಸಾಧನೆಯನ್ನು ಮಾಡಿ ಮೋಕ್ಷಪ್ರಾಪ್ತಿ ಮಾಡಿಕೊಂಡಾಗಲೇ ಗುರುಋಣವು ತೀರುತ್ತದೆ, ಇಲ್ಲದಿದ್ದರೆ ಅದನ್ನು ತೀರಿಸಲು ಬರುವುದಿಲ್ಲ, ಎಂದು ಗುರುಗೀತೆಯಲ್ಲಿ ಹೇಳಲಾಗಿದೆ; ಆದ್ದರಿಂದಲೇ ಆಧ್ಯಾತ್ಮಿಕ ಉನ್ನತಿಗಾಗಿ ಶ್ರೀ ಗುರುಗಳ ಅವತಾರಿ ಕಾರ್ಯದಲ್ಲಿ ಉತ್ತಮ ‘ಸಮಷ್ಟಿ ಶಿಷ್ಯರಾಗಿ ಪಾಲ್ಗೊಳ್ಳಿರಿ ಮತ್ತು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳಿರಿ !
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರು, ಸನಾತನ ಸಂಸ್ಥೆ (೧೭.೪.೨೦೨೩)