Hindus Exodus In Bhopal : ಮಧ್ಯಪ್ರದೇಶ: ಭೋಪಾಲ್ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಿಂದ ಹಿಂದೂಗಳ ಸ್ಥಳಾಂತರ

ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಕಳವಳ ವ್ಯಕ್ತ!

ಭೋಪಾಲ (ಮಧ್ಯಪ್ರದೇಶ) – ಹಳೆಯ ಭೋಪಾಲನ ಕೊಹೆಫಿಜಾ ಮತ್ತು ಶಾಹಜಹಾನಾಬಾದ್ ನಂತಹ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲದೆ ಸಿಂಧಿ ಕಾಲನಿಯನ್ನೂ ಒಳಗೊಂಡಂತೆ ಅನೇಕ ವಸಾಹತುಗಳಿಂದ ಹಿಂದೂ ಕುಟುಂಬಗಳ ವಲಸೆಯ ಸುದ್ದಿಗಳು ಬಹಳ ಸಮಯದಿಂದ ಬರುತ್ತಿದ್ದರೂ ಈಗ ರಾಷ್ಟ್ರೀಯ ಸ್ವಯಂಸೇವಕ ಸಂಘವು ಈ ಸಮಸ್ಯೆಯನ್ನು ನಿಲ್ಲಿಸಲು ಪ್ರಯತ್ನಗಳನ್ನು ಪ್ರಾರಂಭಿಸಿದೆ.

೧. ಸಂಘಕ್ಕೆ ಬಂದ ಆಂತರಿಕ ಮಾಹಿತಿಯ ಪ್ರಕಾರ, ಕಳೆದ ಹಲವು ವರ್ಷಗಳಿಂದ ಕೊಹೆಫಿಜಾದಲ್ಲಿ ನಿರಂತರವಾಗಿ ವಲಸೆ ನಡೆಯುತ್ತಿದೆ. 2 ವರ್ಷಗಳ ಹಿಂದೆ ಭೋಪಾಲ್ ನ ಭಾಜಪ ಶಾಸಕ ರಾಮೇಶ್ವರ ಶರ್ಮಾ ಅವರು ಜಿಲ್ಲಾಡಳಿತಕ್ಕೆ ಪತ್ರ ಬರೆದು ಕಾಲನಿಯ ಭೂಮಿ ಮತ್ತು ಮನೆಗಳ ಖರೀದಿ-ಮಾರಾಟದ ತನಿಖೆ ನಡೆಸುವಂತೆ ಒತ್ತಾಯಿಸಿದಾಗ ಈ ವಿಷಯ ಚರ್ಚೆಗೆ ಬಂದಿತ್ತು.

೨. ಶಾಸಕರು ಮಾಹಿತಿ ನೀಡಿದ ಪ್ರಕಾರ, ಕೊಹೆಫಿಜಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹೇಶ್ವರಿ, ಬ್ರಾಹ್ಮಣ, ಜೈನ ಮತ್ತು ಸಿಂಧಿ ಕುಟುಂಬಗಳು ವಲಸೆ ಹೋಗಿವೆ. 5 ಸಾವಿರ ಮನೆಗಳ ಈ ವಸಾಹತುವಿನಲ್ಲಿ ಹಿಂದೆ ಶೇ. 80 ಹಿಂದೂ ಕುಟುಂಬಗಳಿದ್ದವು, ಈಗ ಕೇವಲ ಶೇ. 40ರಷ್ಟು ಮಾತ್ರ ಉಳಿದಿವೆ. ವಲಸೆ ಹೋದವರು ಭೋಪಾಲ್ ನಿಂದ ಲಾಲ್ಘಾಟ್ ಅಥವಾ ಹತ್ತಿರದ ಇತರ ಪ್ರದೇಶಗಳಲ್ಲಿ ನೆಲೆಸಿದ್ದಾರೆ.

೩. ಮಧ್ಯ ಭಾರತದ ಪ್ರಾಂತ್ಯ ಸಂಘಚಾಲಕರಾದ ಅಶೋಕ ಪಾಂಡೆ ಅವರು, ಸಂಘದ ಜನರು ಇಂತಹ ವಸಾಹತುಗಳಿಗೆ ಹೋಗಿ ಭವಿಷ್ಯದಲ್ಲಿ ಯಾವುದೇ ಅನಿರೀಕ್ಷಿತ ಭಯಕ್ಕೆ ಹೆದರಿ ಬದುಕುವುದು ಸರಿಯಲ್ಲ ಎಂದು ಜನರಿಗೆ ತಿಳಿಸುತ್ತಾರೆ. ಹಿಂದೂಗಳು ವಲಸೆ ಹೋಗುವ ಅಗತ್ಯವಿಲ್ಲ ಮತ್ತು ಅವರು ಯಾರಿಗೂ ಭಯಪಡಬೇಕಾಗಿಲ್ಲ. ಎಲ್ಲಾ ಹಿಂದೂಗಳು ಅವರೊಂದಿಗಿದ್ದಾರೆ ಮತ್ತು ಸಂಘವೂ ಕೂಡ ಅವರೊಂದಿಗೆ ನಿಂತಿದೆ ಎಂದು ಭರವಸೆ ನೀಡಿದರು.

೪. ಸಂಘವು ಭೋಪಾಲ್ ನ ವಿವಿಧ ಸಮಸ್ಯೆಗಳ ಬಗ್ಗೆ ಸಮೀಕ್ಷೆ ನಡೆಸಿತು. ಅದರಲ್ಲಿ ಲವ್ ಜಿಹಾದ್, ಧಾರ್ಮಿಕ ಅರಿವಿನ ಕೊರತೆ, ಮೌಲ್ಯ ಶಿಕ್ಷಣದ ಕೊರತೆ, ಅಸ್ವಚ್ಛತೆ, ಹಿಂದೂ ಕುಟುಂಬಗಳ ವಲಸೆ ಮುಂತಾದ 103 ರೀತಿಯ ಸಮಸ್ಯೆಗಳು ಬೆಳಕಿಗೆ ಬಂದವು. ಇವೆಲ್ಲದರಲ್ಲಿ ಭೋಪಾಲ್ ನಿಂದ ಹಿಂದೂಗಳ ವಲಸೆ ಹೋಗುತ್ತಿರುವುದೇ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಯಿತು.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಸುಮಾರು 20 ವರ್ಷಗಳ ಕಾಲ ಭಾಜಪ ಸರಕಾರವಿದ್ದರೂ ರಾಜ್ಯದ ರಾಜಧಾನಿಯಲ್ಲಿ ಇಂತಹ ಪರಿಸ್ಥಿತಿ ಇರುವುದು ಹಿಂದೂಗಳಿಗೆ ಅಪೇಕ್ಷಿತವಲ್ಲ. ಇದನ್ನು ಗಂಭೀರವಾಗಿ ಪರಿಗಣಿಸುವ ಆವಶ್ಯಕತೆಯಿದೆ !