‘ಸನಾತನದ ಎರಡನೆ ಬಾಲಸಂತರಾದ ಪೂ. ವಾಮನ ರಾಜಂದೇಕರ(ವಯಸ್ಸು 4 ವರ್ಷಗಳು) ಇವರು `ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ನಾವೆಲ್ಲರೂ ಹೇಗೆ ಪ್ರಯತ್ನಿಸಬೇಕಾಗಿದೆ? ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಶ್ರದ್ಧೆ ಮತ್ತು ಭಾವವನ್ನು ಹೇಗೆ ಇಡಬೇಕು?’ ಎನ್ನುವ ಸಂದರ್ಭದಲ್ಲಿ ಹಿಂದಿ ಭಾಷೆಯಲ್ಲಿ ನೀಡಿರುವ ಸಂದೇಶವನ್ನು ಧ್ವನಿಮುದ್ರಣ(ಆಡಿಯೋ ರೆಕಾರ್ಡಿಂಗ) ಮಾಡಲಾಗಿದೆ. ಅದರಲ್ಲಿ ಅವರ ಮಾತುಗಳು ಸಹಜ ಮತ್ತು ನಿರರ್ಗಳವಾಗಿದೆ. ಪೂ. ವಾಮನರು ಮೊದಲಿಗೆ ಹಿಂದೂ ರಾಷ್ಟ್ರ ಬರಲು ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಪ್ರಾರ್ಥಿಸಿದರು. ಅವರ ಹಿಂದೂ ರಾಷ್ಟ್ರದ ವಿಷಯದ ವಿಚಾರ ಮತ್ತು ಜ್ಞಾನವನ್ನು ನೋಡಿ ಆಶ್ಚರ್ಯಚಕಿತಗೊಂಡು ನಾನು ಶ್ರೀ ಗುರುಚರಣಗಳಲ್ಲಿ ನತಮಸ್ತಕಳಾದೆನು’. ಸೌ.ಮಾನಸಿ ರಾಜಂದೇಕರ(ಪೂ.ವಾಮನರ ತಾಯಿ, ಆಧ್ಯಾತ್ಮಿಕ ಮಟ್ಟ ಶೇ. 61) |
1. ಹಿಂದೂ ರಾಷ್ಟ್ರ ಬರಲು ಮಾಡಬೇಕಾದ ಪ್ರಯತ್ನಗಳ ವಿಷಯದಲ್ಲಿ ಪೂ.ವಾಮನರು ನೀಡಿದ ಮಾರ್ಗದರ್ಶನ
1 ಅ.ಹಿಂದೂ ರಾಷ್ಟ್ರ ಬರುವವರೆಗೆ ಪರಾತ್ಪರ ಗುರು ಡಾ. ಆಠವಲೆಯವರ ಸೇವೆ ಮತ್ತು ಸ್ಮರಣೆ ಮಾಡಿರಿ:` ಈಗ ನಾವೆಲ್ಲರೂ ನಾರಾಯಣನ ಚರಣಗಳಲ್ಲಿ ಲೀನರಾಗಿ ಅಧಿವೇಶನದ (ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ) ಸೇವೆಯನ್ನು ಮಾಡೋಣ. ಹಿಂದೂ ರಾಷ್ಟ್ರ ಖಂಡಿತವಾಗಿ ಬರಲಿದೆ. ಅಲ್ಲಿಯವರೆಗೆ ನಾವು ಬೇರೆಲ್ಲಿಯೂ ಹೋಗದೇ ಅತ್ಯಧಿಕ ಸಂಖ್ಯೆಯಲ್ಲಿ ಆಶ್ರಮದಲ್ಲಿದ್ದು ನಿರಂತರವಾಗಿ ಹಿಂದೂ ರಾಷ್ಟ್ರಕ್ಕಾಗಿ, ನಾರಾಯಣನ ಸೇವೆ ಮಾಡಬೇಕಾಗಿದೆ. ನಾವು ಪ್ರತಿಯೊಂದು ಕ್ಷಣ ನಾರಾಯಣನ ಸ್ಮರಣೆಯನ್ನು ಮಾಡಬೇಕಾಗಿದೆ. ನಮಗೆ ಏನು ಬೇಕಾಗಿದೆಯೋ, ಅದೆಲ್ಲವೂ ಹಿಂದೂ ರಾಷ್ಟ್ರದಲ್ಲಿ ಸಿಗಲಿಕ್ಕಿದೆ.
ಟಿ 1 : ಪೂ. ವಾಮನ್ ಪರಾತ್ಪರ ಗುರು ಡಾ. ಆಠವಲೆಯವರನ್ನು ‘ನಾರಾಯಣ’ ಎಂದು ಕರೆಯುತ್ತಾರೆ.
1 ಆ. ನಾವು ಪ್ರತಿದಿನ ಹಿಂದೂ ರಾಷ್ಟ್ರಕ್ಕೆ ಸೇವೆ ಮಾಡಿದರೆ ಮಾತ್ರ ನಾವು ಹಿಂದೂ ರಾಷ್ಟ್ರವನ್ನು ನೋಡಬಹುದು. ನಾವೆಲ್ಲರೂ ನಾರಾಯಣನ ಸೈನಿಕರಾಗಿದ್ದೇವೆ.
1 ಇ. ಹಿಂದೂ ರಾಷ್ಟ್ರಕ್ಕಾಗಿ ಸೇವೆ ಮಾಡುವಾಗ, ನಾವೆಲ್ಲರೂ ‘ನಾರಾಯಣನಿಗೆ ಏನು ಅಪೇಕ್ಷಿತವಿದೆಯೋ ಅದನ್ನು ಮಾಡಬೇಕು ಮತ್ತು ಹಿಂದೂ ರಾಷ್ಟ್ರದ ಸೇವೆ ಇರುವುದನ್ನೇ ನಾವು ಮಾಡಬೇಕಿದೆ. ನಾವು ಎಷ್ಟು ಹೆಚ್ಚು ಸೇವೆ ಮಾಡುತ್ತೇವೋ ಅಷ್ಟು ನಾವು ಹಿಂದೂ ರಾಷ್ಟ್ರದಲ್ಲಿ ಬದುಕಲು ಅರ್ಹರಾಗುತ್ತೇವೆ.
1 ಈ. ಹಿಂದೂ ರಾಷ್ಟ್ರದ ಸೇವೆ ಮಾಡುವ ಮೂಲಕ ನಾವು ಆಶ್ರಮದಲ್ಲಿ ಅಂದರೆ ವೈಕುಂಠದಲ್ಲಿ ವಾಸಿಸಬಹುದು. ‘ಬ್ರಹ್ಮೋತ್ಸವ’ (ಟಿಪ್ಪಣಿ 2) ಸಮಯದಲ್ಲಿ ನಾವೆಲ್ಲರೂ ನಾರಾಯಣನ ದರ್ಶನ ಪಡೆದಿದ್ದೇವೆ ಮತ್ತು ಅವರು ಹಿಂದೂ ರಾಷ್ಟ್ರವನ್ನು ತರಲಿದ್ದಾರೆ.
ಟಿಪ್ಪಣೆ 2 : ಮಹರ್ಷಿಗಳ ಆಜ್ಞೆಯ ಮೇರೆಗೆ, ಪರಾತ್ಪರ ಗುರು ಡಾ. ಆಠವಲೆ ಅವರ 81ನೇ ಜನ್ಮೋತ್ಸವವನ್ನು ‘ಬ್ರಹ್ಮೋತ್ಸವ’ದ ರೂಪದಲ್ಲಿ ಆಚರಿಸಲಾಯಿತು.
1 ಉ. ಹಿಂದೂ ರಾಷ್ಟ್ರದಲ್ಲಿ ನಾವು ಎಲ್ಲಾ ಸೇವೆಗಳನ್ನು ಮಾಡಬೇಕು. ಹಿಂದೂ ರಾಷ್ಟ್ರಕ್ಕೆ ಮಾಡಿದ ಸೇವೆಯೇ ನಾರಾಯಣನ ಸೇವೆಯಾಗಿದೆ.
1 ಊ. ನಮ್ಮ ಸಾಧನೆ ಮತ್ತು ಸೇವೆಯನ್ನು ಪೂರ್ಣಗೊಳಿಸಿದ ನಂತರ, ನಮ್ಮ ಮುಂದಿನ ಪ್ರಯಾಣವು ಮನೆಯ ಕಡೆಗೆ ಏಕಾಂಗಿಯಾಗಿರುವುದಿಲ್ಲ (ಅಂದರೆ ಮಾಯೆಯ ಪ್ರಯಾಣ) ಆದರೆ ನಾವು ಆಶ್ರಮದಲ್ಲಿ ಶಾಶ್ವತವಾಗಿ ಉಳಿಯುತ್ತೇವೆ (ಜನ್ಮ ಮತ್ತು ಮರಣ ಚಕ್ರಗಳಿಂದ ಮುಕ್ತರಾಗಿ).
1 ಎ. ನಾರಾಯಣನನ್ನು ನೋಡಿ ಮಕ್ಕಳ ಭಾವ ಜಾಗೃತವಾಗುತ್ತದೆ. ಹಿಂದೂ ರಾಷ್ಟ್ರದಲ್ಲಿ ಈ ಎಲ್ಲಾ ದೈವಿ ಬಾಲಕರು ಇರುವರು.
1 ಏ. ಹಿಂದೂ ರಾಷ್ಟ್ರದಿಂದಾಗಿ ನಾವೆಲ್ಲರೂ ತುಂಬಾ ಸಂತೋಷ ಮತ್ತು ಭಾವದ ಸ್ಥಿತಿಯಲ್ಲಿರುತ್ತೇವೆ.
‘ಇದನ್ನೆಲ್ಲಾ ನಾರಾಯಣನು ನನಗೆ ಹೇಳಿದ್ದು, ಅದಕ್ಕೆ ನಾನು ಅವರಿಗೆ ತುಂಬಾ ಕೃತಜ್ಞತೆ ಸಲ್ಲಿಸುತ್ತೇನೆ.’
– ಪೂ. ವಾಮನ್ ರಾಜಾಂದೆಕರ್ (ಸನಾತನ ಸಂಸ್ಥೆಯ ಎರಡನೇ ಬಾಲಸಂತ, ವಯಸ್ಸು 4), ಫೋಂಡಾ, ಗೋವಾ. (14.6.2023)