ಪಾಕಿಸ್ತಾನಿ ಸೇನೆಯಿಂದ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ; 10 ನಾಗರಿಕರೂ ಸಹ ಸಾವು !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸೇನೆಯು ಭಯೋತ್ಪಾದಕರ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ 12 ಭಯೋತ್ಪಾದಕರು ಸಾವನ್ನಪ್ಪಿದ್ದು ಹಾಗೂ 10 ಪಾಕಿಸ್ತಾನಿ ನಾಗರಿಕರೂ ಸಹ ಸಾವನ್ನಪ್ಪಿದ್ದಾರೆ. ಸತ್ತ ನಾಗರಿಕರಲ್ಲಿ ಕೆಲವು ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ.

ಈ ಸಂದರ್ಭದಲ್ಲಿ, ಪಾಕಿಸ್ತಾನ ಸರಕಾರವು, ಕಾರ್ಯಾಚರಣೆ ನಡೆಸಿದ ಪ್ರದೇಶವು ತುಂಬಾ ಇಕ್ಕಟ್ಟಾಗಿತ್ತು. ಇಲ್ಲಿನ ಪ್ರದೇಶಗಳಲ್ಲಿ ಭಯೋತ್ಪಾದಕರು ಇನ್ನೂ ಅಡಗಿಕೊಂಡಿದ್ದಾರೆ. ಅವರಿಗೆ ಸರಿಸಮಾನವಾಗಿ ಈ ಅಭಿಯಾನವನ್ನು ತರಾತುರಿಯಲ್ಲಿ ನಡೆಸಲಾಗುತ್ತಿರುವುದರಿಂದ ಇಂತಹ ತಪ್ಪುಗಳು ಆಗುತ್ತವೆ. ದಾಳಿಯಲ್ಲಿ ಗಾಯಗೊಂಡ ನಾಗರಿಕರಿಗೆ ವೈದ್ಯಕೀಯ ನೆರವು ನೀಡಲಾಗುವುದು ಮತ್ತು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು, ಎಂದು ಸ್ಪಷ್ಟಿಕರಣ ನೀಡಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನಿ ಸೇನೆಯು ಭಯೋತ್ಪಾದಕರ ಮೂಲಕ ಭಾರತದಲ್ಲಿ ಮುಗ್ಧ ಅಮಾಯಕರನ್ನು ಕೊಂದಿತು, ಈಗ ಅವರು ತಮ್ಮದೇ ನಾಗರಿಕರನ್ನು ಕೊಲ್ಲುತ್ತಿದ್ದಾರೆ, ಇದು ಅವರ ಕರ್ಮಗಳ ಫಲ ಎನ್ನಬೇಕಾಗುವುದು !