ಹಿಂದೂ ಸಹೋದರಿಯರೇ, ನಿಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುವವರ ಕಣ್ಣು ಕೀಳಿ ! – ತುಲಸಿ ಪೀಠಾಧೀಶ್ವರ ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯ

ತುಲಸಿ ಪೀಠಾಧೀಶ್ವರ ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯರ ಕರೆ

ತುಲಸಿ ಪೀಠಾಧೀಶ್ವರ ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯ

ಆಗ್ರಾ (ಉತ್ತರಪ್ರದೇಶ) – ಲವ್ ಜಿಹಾದ್ ಮೂಲಕ ನಮ್ಮ ಹಿಂದೂ ಯುವತಿಯರನ್ನು ಇತರೆ ಧರ್ಮೀಯರು ತಮ್ಮ ಬಲೆಯಲ್ಲಿ ಸಿಲುಕಿಸುತ್ತಿದ್ದಾರೆ. ಸಹೋದರಿಯರೇ, ಯಾರು ನಿಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆಯೋ, ಅವರ ಕಣ್ಣು ತೆಗೆಯಿರಿ. ಬಳಿಕ ಮೊಕದ್ದಮೆ ತನಿಖೆಯಾಗುವುದು. ಅದನ್ನು ನಾನು ನೋಡಿಕೊಳ್ಳುತ್ತೇನೆ ಎಂದು 73 ವರ್ಷದ ತುಲಸಿ ಪೀಠಾದೀಶ್ವರ ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯರು ಇಲ್ಲಿನ ಒಂದು ಪ್ರವಚನದಲ್ಲಿ ಕರೆ ನೀಡಿದರು. ಈ ಪ್ರವಚನದ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗುತ್ತಿದೆ. ಸ್ವಾಮಿ ರಾಮಭದ್ರಾಚಾರ್ಯರು ದೃಷ್ಟಿಹೀನರಾಗಿದ್ದಾರೆ.

ಸ್ವಾಮಿ ರಾಮಭದ್ರಾಚಾರ್ಯರು ಮಂಡಿಸಿದ ವಿಷಯಗಳು

1. ಹಿಂದೂ ಯುವತಿಯರು ತಮ್ಮ ರಕ್ಷಣೆಗಾಗಿ ಕೈಗಳಲ್ಲಿ ಕಡಗಗಳನ್ನು ಹಾಕಿಕೊಳ್ಳಬೇಕು ಹಾಗೂ ಕಟ್ಯಾರ (ಚಿಕ್ಕ ಚೂರಿ) ಉಪಯೋಗಿಸಲು ಕಲಿತುಕೊಳ್ಳಬೇಕು. ಆಗ ನೀವು ರಾಣಿ ಲಕ್ಷ್ಮೀಬಾಯಿಯಾಗುವಿರಿ.

2. ನಾವು ಜಾತಿವಾದವನ್ನು ಹರಡುವುದಿಲ್ಲ. ಕುರ್ಚಿಗಾಗಿ ಬಾಯಿ ಬಿಡುವ ಮುಖಂಡರು ಜಾತಿವಾದವನ್ನು ಹರಡಿದ್ದಾರೆ. ಒಂದು ವೇಳೆ ನೀವು ತಾಯಿ ಹಾಲು ಕುಡಿದಿದ್ದರೆ, ಜಾತಿಯ ಆಧಾರದಲ್ಲಿ ನೀಡಲಾಗುತ್ತಿರುವ ಮೀಸಲಾತಿಯನ್ನು ರದ್ದುಗೊಳಿಸಿರಿ ಎಂದು ನಾನು ಕರೆ ನೀಡುತ್ತೇನೆ.

3. ಬ್ರಾಹ್ಮಣರು ಜಾತಿವಾದವನ್ನು ನಿರ್ಮಾಣ ಮಾಡಿದರು ಎಂದು ಹೇಳಲಾಗುತ್ತಿದೆ. ಆದರೆ ನಾವು ಜಾತಿವಾದವನ್ನು ನಿರ್ಮಾಣ ಮಾಡಿಲ್ಲ.

4. ಕೇವಲ ಮತ ರಾಜಕೀಯಕ್ಕಾಗಿ ಅಪ್ರಮಾಣಿಕ ಜನರು ದೇಶದಲ್ಲಿ ಬಿರುಕು ನಿರ್ಮಾಣ ಮಾಡಿದ್ದಾರೆ ಒಂದು ವೇಳೆ ಜಾತಿವಾದ ಹರಡಿದ್ದರೆ, ಮಾತಾ ಶಬರಿಯ ಎಂಜಲು ಬೋರೆಹಣ್ಣನ್ನು ಭಗವಾನ ಶ್ರೀರಾಮನು ತಿನ್ನುತ್ತಿದ್ದನೇ ? ಯಾವಾಗ ರಾಮಚರಿತಮಾನಸ ರಾಷ್ಟ್ರೀಯ ಗ್ರಂಥವಾಗುವುದೋ, ಆಗಲೇ ಸಮಾಜದಲ್ಲಿ ಸುಧಾರಣೆಯಾಗುವುದು ಎಂದು ಹೇಳಿದರು.

ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯರ ಪರಿಚಯ

ಉತ್ತರಪ್ರದೇಶದ ಜೌನಪುರ ಜಿಲ್ಲೆಯಲ್ಲಿ ಜನಿಸಿರುವ ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯರ ಮೊದಲಿನ ಹೆಸರು ಗಿರಿಧರ ಮಿಶ್ರಾ ಇತ್ತು. ಸ್ವಾಮಿ ರಾಮಾನಂದ ಸಂಪ್ರದಾಯದ 4 ನೇ ಜಗದ್ಗುರುಗಳ ಪೈಕಿ ರಾಮಾನಂದಾಚಾರ್ಯರು ಒಬ್ಬರಾಗಿದ್ದಾರೆ. 1988 ರಿಂದ ಅವರು ಈ ಸ್ಥಾನಯಲ್ಲಿ ವಿರಾಜಮಾನರಾಗಿದ್ದಾರೆ. 2 ತಿಂಗಳಿನ ಶಿಶುವಾಗಿರುವಾಗಲೇ ಅವರ ದೃಷ್ಟಿ ಹೊರಟು ಹೋಯಿತು. ಆದರೂ ಅವರು 22 ಭಾಷೆಗಳ ಮೇಲೆ ಪಾಂಡಿತ್ಯವನ್ನು ಹೊಂದಿದ್ದಾರೆ. ಮತ್ತು ಅವರು ಒಟ್ಟು 80 ಗ್ರಂಥಗಳನ್ನು ರಚಿಸಿದ್ದಾರೆ. ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಗುರುಗಳಾಗಿದ್ದಾರೆ. ಹಾಗೆಯೇ ಶ್ರೀರಾಮಮಂದಿರದ ಸಂದರ್ಭದ ಮೊಕದ್ದಮೆಯಲ್ಲಿ ಅವರು ನೀಡಿದ ಸಾಕ್ಷಿಯಿಂದಲೇ ಹಿಂದೂಗಳ ಪರವಾಗಿ ತೀರ್ಪು ಹೊರಬರಲು ಸಹಾಯಕವಾಗಿತ್ತು.