Delhi Tax Collection : ದೆಹಲಿ ಸರಕಾರವು 2024-25ರ ಆರ್ಥಿಕ ವರ್ಷದಲ್ಲಿ ತೆರಿಗೆಯಿಂದ 5 ಸಾವಿರ 68 ಕೋಟಿ ರೂಪಾಯಿಗಳನ್ನು ಗಳಿಸಿತು!

ಹಾಲು ಮಾರಾಟದಿಂದ ಕೇವಲ 200 ಕೋಟಿ ರೂಪಾಯಿಯ ಗಳಿಕೆ!

ನವದೆಹಲಿ – ದೆಹಲಿ ರಾಜ್ಯದ 2024-25ರ ಆರ್ಥಿಕ ವರ್ಷದಲ್ಲಿ ಮದ್ಯ ಮಾರಾಟದ ಮೇಲಿನ ಅಬಕಾರಿ ಸುಂಕ ಮತ್ತು ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ದಿಂದ 5 ಸಾವಿರದ 68 ಕೋಟಿ 92 ಲಕ್ಷ ರೂಪಾಯಿಗಳ ಆದಾಯ ಬಂದಿದೆ. ಅದೇ ಸಮಯದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್ಟಿ (ಸೇವೆ ಮತ್ತು ತೆರಿಗೆ) ಯಿಂದ 209 ಕೋಟಿ 90 ಲಕ್ಷ ರೂಪಾಯಿಗಳ ಆದಾಯ ಬಂದಿದೆ ಎಂದು ಸರಕಾರ ತಿಳಿಸಿದೆ. ಈ ಎರಡೂ ಅಂಕಿ ಸಂಖ್ಯೆಗಳು ಫೆಬ್ರವರಿವರೆಗಿನವು ಆಗಿದೆ. ದೆಹಲಿ ವಿಧಾನಸಭೆಯಲ್ಲಿ ಭಾಜಪ ಶಾಸಕ ಅಭಯ ವರ್ಮಾ ಕೇಳಿದ ಪ್ರಶ್ನೆಗೆ ಸರಕಾರ ಈ ಮಾಹಿತಿಯನ್ನು ನೀಡಿದೆ.

ಭಾಜಪವು ಆಮ್ ಆದ್ಮಿ ಪಕ್ಷದ ಮೇಲೆ ಮದ್ಯ ನೀತಿ ಹಗರಣದ ಆರೋಪ ಮಾಡುತ್ತಿರುವಾಗ ಈ ಅಂಕಿ ಸಂಖ್ಯೆಗಳು ಬಹಿರಂಗವಾಗಿವೆ. ಎಎಪಿಯ ನಾಯಕರು ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ ಸಿಸೋದಿಯಾ ಈ ಮದ್ಯ ಹಗರಣ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸೋಲಿಗೆ ಇದು ಒಂದು ದೊಡ್ಡ ಕಾರಣವಾಗಿದೆ.

ದೆಹಲಿಯಲ್ಲಿ ಪ್ರತಿದಿನ 5 ಲಕ್ಷ 82 ಸಾವಿರ ಲೀಟರ್ ಮದ್ಯ ಮಾರಾಟ !

ದೆಹಲಿಯಲ್ಲಿ 2023-24ರ ವರ್ಷದಲ್ಲಿ 21 ಕೋಟಿ 27 ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ, ಅಂದರೆ ಪ್ರತಿದಿನ ಸುಮಾರು 5 ಲಕ್ಷ 82 ಸಾವಿರ ಲೀಟರ್ ಮಾರಾಟವಾಗಿದೆ. 2022-23ರಲ್ಲಿ ಈ ಸಂಖ್ಯೆ 25 ಲಕ್ಷ 84 ಸಾವಿರ ಲೀಟರ್ ಅಷ್ಟು ಇತ್ತು.

2024-25ರಲ್ಲಿ 210 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಸರಕಾರವು 2023-24ರಲ್ಲಿ ಹಾಲಿನ ಮಾರಾಟದಿಂದ ಸುಮಾರು 300 ಕೋಟಿ ರೂಪಾಯಿ ಮತ್ತು 2022-23ರಲ್ಲಿ 365 ಕೋಟಿ ರೂಪಾಯಿಗಳನ್ನು ಗಳಿಸಿತ್ತು.

ಸಂಪಾದಕೀಯ ನಿಲುವು

ಈ ಅಂಕಿ ಸಂಖ್ಯೆಗಳು ಕೇವಲ ದೆಹಲಿ ರಾಜ್ಯಕ್ಕೆ ಮಾತ್ರ ಸೀಮಿತವಾಗಿದ್ದರೂ, ಇಡೀ ದೇಶದ ಅವಲೋಕನವನ್ನು ಮಾಡಿದರೆ, ಹಾಲಿನ ಬದಲು ಮದ್ಯದ ಮಾರಾಟದ ಅಂಕಿ ಸಂಖ್ಯೆಗಳು ಹೆಚ್ಚಾಗಿರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಇದರಿಂದ ಭಾರತ ಯಾವ ಸ್ಥಿತಿಗೆ ತಲುಪಿದೆ? ಮತ್ತು ಅದರ ಭವಿಷ್ಯ ಏನಾಗಲಿದೆ? ಎಂಬುದನ್ನು ಗಮನಿಸಬಹುದಾಗಿದೆ!