
ನವದೆಹಲಿ – ದೆಹಲಿಯ ಹೊಸ ಬಿಜೆಪಿ ಸರಕಾರವು ಚೈತ್ರ ಶುಕ್ಲ ಪ್ರತಿಪದದ ಮೊದಲ ದಿನವಾದ ನಾಳೆ ಹಿಂದೂ ಹೊಸ ವರ್ಷವನ್ನು ಬಹಳ ವೈಭವ ಮತ್ತು ವಿಜೃಂಭಣೆಯಿಂದ ಆಚರಿಸಲಿದೆ. ದೆಹಲಿ ಸರಕಾರ ಈ ದಿನವನ್ನು ರಾಷ್ಟ್ರೀಯ ಹಬ್ಬಗಳಂತೆ, ಅಂದರೆ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವ ದಿನದಂತೆ ಆಚರಿಸಲಿದೆ ಎಂದು ರಾಜ್ಯದ ಕಲೆ ಮತ್ತು ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾ ಅವರು ಮಾಹಿತಿ ನೀಡಿದರು.
ಕಪಿಲ್ ಮಿಶ್ರಾ ಮುಂದೆ ಮಾತನಾಡಿ, ಹೊಸ ವರ್ಷದಿಂದ ಪ್ರಾರಂಭವಾಗುವ ಕಾರ್ಯಕ್ರಮಗಳ ಸರಣಿಯು ಶ್ರೀ ರಾಮ ನವಮಿ, ಹನುಮಾನ್ ಜಯಂತಿ ಮತ್ತು ನಂತರ ಡಾ. ಅಂಬೇಡ್ಕರ್ ಜಯಂತಿಯಂದು ಕೊನೆಗೊಳ್ಳಲಿದೆ. ಸರಕಾರದ ಎಲ್ಲಾ ಇಲಾಖೆಗಳು ಈ ನಿಮಿತ್ತ ಕಾರ್ಯಕ್ರಮಗಳನ್ನು ಆಯೋಜಿಸಲಿವೆ ಎಂದಿದ್ದಾರೆ.