ಯುಗಾದಿಯ ಶುಭಮುಹೂರ್ತದಲ್ಲಿ ರಾಮನಾಥಿ (ಗೋವಾ)ಯಲ್ಲಿನ ಸನಾತನ ಆಶ್ರಮದಿಂದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಪ್ರಚಾರಕ್ಕೆ ಪ್ರಾರಂಭ!

ಸನಾತನ ಸಂಸ್ಥೆಯ ರಜತ ಮಹೋತ್ಸವ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ೮೩ ನೇ ಜನ್ಮೋತ್ಸವದ ನಿಮಿತ್ತ…

ರಾಮನಾಥಿ (ಗೋವಾ) – ಸನಾತನ ಸಂಸ್ಥೆಯ ರಜತ ಮಹೋತ್ಸವ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ೮೩ ನೇ ಜನ್ಮೋತ್ಸವದ ನಿಮಿತ್ತ ಮೇ ೧೭ ರಿಂದ ೧೯, ೨೦೨೫ ರ ವರೆಗೆ ಗೋವಾ ರಾಜ್ಯದಲ್ಲಿ ಭವ್ಯ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ನಡೆಯಲಿದೆ. ಈ ಮಹೋತ್ಸವದ ಪ್ರಚಾರವನ್ನು ಯುಗಾದಿಯ ಶುಭಮುಹೂರ್ತದಲ್ಲಿ ರಾಮನಾಥಿ (ಗೋವಾ) ಯಲ್ಲಿನ ಸನಾತನ ಆಶ್ರಮದಿಂದ ಪ್ರಾರಂಭಿಸಲಾಯಿತು.

ಆಶ್ರಮದ ಪ್ರವೇಶದ್ವಾರದಲ್ಲಿ ಅಳವಡಿಸಲಾಗಿದ್ದ ಮಹೋತ್ಸವದ ಫಲಕವನ್ನು ೩೦ ಮಾರ್ಚ್ ರಂದು ಉದ್ಘಾಟಿಸಲಾಯಿತು. ಬಾಂದಿವಡೆ ಗ್ರಾಮದ ಸರಪಂಚರಾದ ಶ್ರೀ. ರಾಮಚಂದ್ರ ನಾಯ್ಕ ಅವರು ತೆಂಗಿನಕಾಯಿ ಒಡೆದು ಈ ಫಲಕವನ್ನು ಉದ್ಘಾಟಿಸಿದರು. ಅದಕ್ಕೂ ಮೊದಲು ಫಲಕದ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ವ್ಯವಸ್ಥಾಪಕೀಯ ವಿಶ್ವಸ್ಥರಾದ ಶ್ರೀ. ವೀರೇಂದ್ರ ಮರಾಠೆ ಸೇರಿದಂತೆ ಸಾಧಕರು ಉಪಸ್ಥಿತರಿದ್ದರು. ಈ ಮಹೋತ್ಸವದಲ್ಲಿ ದೇಶಾದ್ಯಂತ ಗಣ್ಯರು ಸೇರಿದಂತೆ ಸಾಧಕರು ಭಾಗವಹಿಸಲಿದ್ದಾರೆ.