ರಾಜಕೀಯ ನಾಯಕರು ಹಣ ಕೊಟ್ಟು ಸಭೆಗಳಿಗೆ ಜನದಟ್ಟನೆ ಮಾಡಿಸುತ್ತಾರೆ ! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಮೇ ೧೪ ರಂದು ಪಾಟಲಿಪುತ್ರದಲ್ಲಿ (ಬಿಹಾರ) ಶಾಸ್ತ್ರಿಯವರ ಸಭೆಗೆ ೭ ಲಕ್ಷ ಹಿಂದೂ ಭಕ್ತರ ಸಹಭಾಗ !

ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಛತ್ತರ್‌ಪುರ (ಮಧ್ಯಪ್ರದೇಶ) – ಪ್ರಸ್ತುತ ಬಿಹಾರದ ರಾಜಧಾನಿ ಪಾಟಲಿಪುತ್ರದಲ್ಲಿ ಬಾಗೇಶ್ವರ ಧಾಮದ ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ರಾಮಕಥಾ ಹೇಳುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೇ ೧೪ ರಂದು ಅವರ ಸಭೆಯಲ್ಲಿ ೭ ಲಕ್ಷ ಹಿಂದೂ ಭಕ್ತರು ಭಾಗವಹಿಸಿದ್ದರು. ಈ ಕುರಿತು ಶಾಸ್ತ್ರಿಯವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ‘ನಾಯಕರು ಮತ್ತು ನಟರು ಜನರಿಗೆ ಹಣ ಕೊಟ್ಟು ಜನ ಒಗ್ಗುಡಿಸುತ್ತಾರೆ. ನಾಯಕರ ಸಭೆಯ ಸಮಯದಲ್ಲಿ ವಾಹನಗಳ ಮೇಲೆ ಹಣ ಖರ್ಚು ಮಾಡಿ ಜನ ದಟ್ಟನೆ ಮಾಡಿಸುತ್ತಾರೆ. ರಾಜಕೀಯ ಪಕ್ಷಗಳ ಸಭೆಗಳಿಗಿಂದ ಈ ಸಭೆಗೆ ದುಪ್ಪಟ್ಟು ಜನ ಬಂದಿದ್ದರು.’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇದು ರಾಜಕೀಯ ಪಕ್ಷಕ್ಕೂ ಮತ್ತು ಸಂತರ ನಡುವೆ ಇರುವ ವ್ಯತ್ಯಾಸ ! ಹೆಚ್ಚಿನ ರಾಜಕೀಯ ಪಕ್ಷಗಳು ಜನರಿಗೆ ಹಣ, ಸೌಕರ್ಯ ಇತ್ಯಾದಿಗಳ ಆಮಿಷವನ್ನು ತೋರಿಸುತ್ತವೆ, ಆದರೆ ಹಿಂದೂ ಸಾಧು-ಸಂತರು ಜನರಿಗೆ ಶಾಶ್ವತ ಆನಂದದ ಅನುಭೂತಿ ಕಡೆಗೆ ಕೊಂಡೊಯ್ಯಲು ಸಾಧನೆ ಹೇಳುತ್ತಾರೆ, ಇದನ್ನು ತಿಳಿಯಿರಿ !