ಭಾರತದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್

ನವದೆಹಲಿ – ‘ಇಂಡಿಯನ್ ಎಕ್ಸ್‌ಪ್ರೆಸ್’ ಭಾರತದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉದ್ಯಮಿ ಗೌತಮ್ ಅದಾನಿ, ಉದ್ಯಮಿ ಮುಖೇಶ್ ಅಂಬಾನಿ, ಯೋಗಋಷಿ ರಾಮದೇವಬಾಬಾ, ಅಮಿತಾಭ್ ಬಚ್ಚನ್, ವಿರಾಟ್ ಕೊಹ್ಲಿ ಮುಂತಾದವರ ಹೆಸರುಗಳಿವೆ. ಹಾಗೆಯೇ ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರ ಹೆಸರೂ ಇದೆ. ಈ ಪಟ್ಟಿಯಲ್ಲಿ ದೇಶದಾದ್ಯಂತ ಪ್ರಸಿದ್ಧ ಉದ್ಯಮಿಗಳು ಮತ್ತು ಇತರ ಜನರ ಹೆಸರುಗಳಿವೆ.