Muslims Attack Hindu Houses, Shops, Fields : ಬಂಗಾಳದಲ್ಲಿ ಮತಾಂಧ ಮುಸಲ್ಮಾನರಿಂದ ಹಿಂದೂಗಳ ಮನೆಗಳು, ಅಂಗಡಿಗಳು ಮತ್ತು ಹೊಲಗಳಿಗೆ ಬೆಂಕಿ!

ಕೋಲಕಾತಾ (ಬಂಗಾಳ) – ಬಂಗಾಳದ ಮಾಲದಾದಲ್ಲಿ ಮತಾಂಧ ಮುಸಲ್ಮಾನರು ಹಿಂದೂಗಳ ಮೆರವಣಿಗೆಯ ಮೇಲೆ ದಾಳಿ ಮಾಡಿದ ನಂತರ ಈಗ ಮುರ್ಷಿದಾಬಾದ ಜಿಲ್ಲೆಯಲ್ಲಿ ಮತಾಂಧ ಮುಸಲ್ಮಾನರು ಹಿಂದೂಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದ್ದಾರೆ. ಇದಕ್ಕೆ ಸಂಬಂಧಿಸಿಂತೆ ಭಾಜಪ ಕೆಲವು ವಿಡಿಯೋಗಳನ್ನು ಪ್ರಸಾರ ಮಾಡಿದೆ. ಇದರಲ್ಲಿ ಮತಾಂಧ ಮುಸಲ್ಮಾನರು ಆಯ್ಕೆ ಮಾಡಿಕೊಂಡು ಹಿಂದೂಗಳ ಮನೆಗಳು, ಅಂಗಡಿಗಳು ಮತ್ತು ಹೊಲಗಳ ಮೇಲೆ ದಾಳಿ ಮಾಡಿ ಅವುಗಳನ್ನು ಸುಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.

೧. ಮಾರ್ಚ್ 29 ರಂದು ಮುರ್ಷಿದಾಬಾದ್ ಜಿಲ್ಲೆಯ ನೌದಾ ಪೊಲೀಸ್ ಠಾಣೆಯ ಗಡಿಯೊಳಗಿನ ಝೌಬೋನಾ ಗ್ರಾಮದಲ್ಲಿ ತಡರಾತ್ರಿಯಲ್ಲಿ ಮುಸಲ್ಮಾನರು ಹಿಂದೂಗಳ ಅಂಗಡಿಗಳು ಮತ್ತು ಹೊಲಗಳನ್ನು ಗುರಿಯಾಗಿಸಿಕೊಂಡರು. ಈ ಘಟನೆಯಿಂದ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

೨. ಕೇಂದ್ರ ರಾಜ್ಯ ಸಚಿವ ಮತ್ತು ಭಾಜಪ ಬಂಗಾಳ ಪ್ರದೇಶದ ಅಧ್ಯಕ್ಷ ಡಾ. ಸುಕಾಂತ ಮಜುಮದಾರ್ ಅವರು, ಝೌಬೋನಾ ಗ್ರಾಮದಲ್ಲಿ ಮುಸಲ್ಮಾನರ ಗುಂಪು ಹಿಂದೂಗಳ ಅಂಗಡಿಗಳನ್ನು ಲೂಟಿ ಮಾಡಿ, ಬೆಂಕಿ ಹಚ್ಚಲಾಗಿದೆ. ಕತ್ತಲೆಯ ಲಾಭ ಪಡೆದು ಹಿಂದೂ ರೈತರ ಹೊಲಗಳನ್ನು ಸುಡಲು ಪ್ರಯತ್ನಿಸಲಾಗಿದೆ, ಎಂದು ದಾವೆ ಮಾಡಿದ್ದಾರೆ.

೩. ಭಾಜಪ ಶಾಸಕ ಶುಭೇಂದು ಅಧಿಕಾರಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಬಂಗಾಳದಲ್ಲಿ ಹಿಂದೂಗಳ ಮೇಲಿನ ದಾಳಿಗಳು ನಿರಂತರವಾಗಿ ಹೆಚ್ಚುತ್ತಿವೆ. ಮಮತಾ ಬ್ಯಾನರ್ಜಿ ಸರಕಾರ ಮತ್ತು ತೃಣಮೂಲ ಕಾಂಗ್ರೆಸ್ ಓಲೈಕೆಯ ರಾಜಕಾರಣ ಮಾಡುತ್ತಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಹಿಂದೂಗಳಂತೆಯೇ ಭಾರತದ ಬಂಗಾಳ ರಾಜ್ಯದ ಹಿಂದೂಗಳ ಪರಿಸ್ಥಿತಿ ಆಗಿದೆ. ಈ ಬಗ್ಗೆ ಕೇಂದ್ರ ಸರಕಾರವಾಗಲೀ ರಾಜ್ಯ ಸರಕಾರವಾಗಲೀ ಏನನ್ನೂ ಮಾಡುತ್ತಿಲ್ಲ! ಇದು ಅವರನ್ನು ಆಯ್ಕೆ ಮಾಡಿದ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ!