ರಾಮನಾಥಿ, ಗೋವಾದ ಸನಾತನದ ಆಶ್ರಮದಲ್ಲಿ ಭಾವಪೂರ್ಣ ವಾತಾವರಣದಲ್ಲಿ ಬ್ರಹ್ಮಧ್ವಜ ಪೂಜೆ !

ರಾಮನಾಥಿ (ಗೋವಾ) – ಹಿಂದೂ ಹೊಸ ವರ್ಷದ ಆರಂಭದ ಸಂದರ್ಭದಲ್ಲಿ, ಅಂದರೆ ಯುಗಾದಿ ಸಂದರ್ಭದಲ್ಲಿ, ಇಲ್ಲಿನ ಸನಾತನದ ಆಶ್ರಮದಲ್ಲಿ ಮಾರ್ಚ್ 30 ರಂದು ಬ್ರಹ್ಮಧ್ವಜ ಪೂಜೆಯನ್ನು ಮಾಡಿ ಹೊಸ ವರ್ಷವನ್ನು ಸ್ವಾಗತಿಸಲಾಯಿತು.

ಸೂರ್ಯೋದಯದ ಸಮಯದಲ್ಲಿ, ಮಂಗಳಕರ ವಾತಾವರಣದಲ್ಲಿ, ವಿಧಿ ವಿಧಾನಗಳ ಪ್ರಕಾರ ಬ್ರಹ್ಮಧ್ವಜ ಪೂಜೆಯ ನಂತರ ಪಂಚಾಂಗಸ್ಥ ಗಣಪತಿ ಪೂಜೆ ಮತ್ತು ನೂತನ ಸಂವತ್ಸರ ಫಲಶ್ರವಣ (ಹೊಸ ವರ್ಷವು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹೇಗೆ ಇರುತ್ತದೆ ಎಂಬುದರ ಮಾಹಿತಿಯನ್ನು ಆಲಿಸುವುದು) ಮಾಡಲಾಯಿತು. ಸನಾತನದ ಪುರೋಹಿತ ಪಾಠಶಾಲೆಯ ಪುರೋಹಿತರಾದ ಶ್ರೀ ಸಿದ್ದೇಶ ಕರಂದೀಕರ ಅವರು ಬ್ರಹ್ಮಧ್ವಜವನ್ನು ಪೂಜಿಸಿದರು. ಈ ಸಂದರ್ಭದಲ್ಲಿ, ‘ಹೇ ಬ್ರಹ್ಮದೇವ, ನೀನು ನಮ್ಮೆಲ್ಲಾ ಸಾಧಕರಿಗೆ ಸಾಧನೆ ಮಾಡಲು ಮತ್ತು ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಶಕ್ತಿ, ಬುದ್ಧಿ, ಚೈತನ್ಯ ಮತ್ತು ಆಧ್ಯಾತ್ಮಿಕ ಬಲವನ್ನು ನೀಡಬೇಕು’ ಎಂದು ಪ್ರಾರ್ಥಿಸಲಾಯಿತು.