‘ಯಾರು ಸತ್ಕುಲದಲ್ಲಿ ಜನಿಸಿದ್ದಾರೆ, ಸದಾಚಾರಿಯಾಗಿದ್ದಾರೆ, ಶುದ್ಧ ಭಾವನೆಗಳನ್ನು ಹೊಂದಿದ್ದಾರೆ, ಇಂದ್ರಿಯಗಳನ್ನು ತಮ್ಮ ಹತೋಟಿಯಲ್ಲಿರಿಸಿದ್ದಾರೆ, ಯಾರು ಎಲ್ಲಾ ಶಾಸ್ತ್ರಗಳ ಸಾರವನ್ನು ಅರಿತಿದ್ದಾರೆ, ಪರೋಪಕಾರಿಯಾಗಿದ್ದಾರೆ. ಸದಾ ಭಗವಂತನ ಅನು ಸಂಧಾನದಲ್ಲಿರುತ್ತಾರೆ, ಯಾರ ವಾಣಿ ಚೈತನ್ಯಮಯವಾಗಿದೆ, ಯಾರಲ್ಲಿ ತೇಜಸ್ಸು ಮತ್ತು ಆಕರ್ಷಣಶಕ್ತಿಯಿದೆ, ಯಾರು ಶಾಂತವಾಗಿರುತ್ತಾರೋ; ಯಾರು ವೇದ, ವೇದಾರ್ಥಗಳನ್ನು ತಿಳಿದಿದ್ದಾರೆ; ಯೋಗಮಾರ್ಗದಲ್ಲಿ ಯಾರ ಪ್ರಗತಿಯಿದೆ. ಯಾರ ಹೃದಯವು ಈಶ್ವರನಂತಿದೆ (ಅವರ ಕಾರ್ಯಗಳು ಈಶ್ವರನ ಇಚ್ಛೆಯಿಂದ ಆಗುತ್ತವೆ) ಇಂತಹ ಗುಣಗಳು ಯಾರಲ್ಲಿವೆಯೋ ಅವರೇ ಶಾಸ್ತ್ರಸಮ್ಮತ ಗುರುಗಳಾಗಲು ಅರ್ಹರಾಗಿದ್ದಾರೆ. ಅಂತಹ ಗುರುಗಳ ದೀಕ್ಷೆ ಪಡೆದ ಶಿಷ್ಯನ ಮಾತ್ರವಲ್ಲದೆ ಇಡೀ ಜಗತ್ತಿನ ಹಿತವನ್ನುಂಟುಬಲ್ಲರು. (ಸಂದರ್ಭ : ಶಾರದಾತಿಲಕ) – ಪರಾತ್ಪರ ಗುರು (ದಿ.) ಪರಶರಾಮ ಪಾಂಡೆ ಮಹಾರಾಜರು (೩೦.೬.೨೦೧೮)