• ಹಿಂದೂಗಳ ಅಂಗಡಿಗಳ ಮೇಲೆ ದಾಳಿ• ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನಿಯೋಜನೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ಭಾಜಪ ಪತ್ರ |
ಮಾಲದಾ (ಬಂಗಾಳ) – ಮಾಲದಾ ಜಿಲ್ಲೆಯ ಮೋಥಾಬಾರಿ ಪ್ರದೇಶದಲ್ಲಿ ಮತಾಂಧ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ನಡೆಸಿದ್ದು ಈ ದಾಳಿಯ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಮತಾಂಧ ಮುಸ್ಲಿಮರು ಬೀದಿಗಿಳಿದು ಹಿಂದೂಗಳ ಅಂಗಡಿಗಳು ಮತ್ತು ಮನೆಗಳ ಮೇಲೆ ದಾಳಿ ಮಾಡುತ್ತಿರುವುದು ಕಂಡುಬರುತ್ತದೆ. ಈ ಪ್ರಕರಣದಲ್ಲಿ ಪೊಲೀಸರು 34 ಜನರನ್ನು ಬಂಧಿಸಿದ್ದಾರೆ. ಸದ್ಯ ಮಾಲದಾದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
1. ಪೊಲೀಸರ ಪ್ರಕಾರ, ಮಾರ್ಚ್ 26 ರಂದು ಒಂದು ಮೆರವಣಿಗೆಯನ್ನು ನಡೆಸಲಾಗಿದ್ದು, ಆ ಮೆರವಣಿಗೆಯು ಅಲ್ಲಿನ ಒಂದು ಮಸೀದಿಯ ಬಳಿಯಿಂದ ಹಾದು ಹೋಗುವಾಗ ಕೆಲವರು ಮಸೀದಿಯ ಬಳಿ ಪಟಾಕಿ ಸಿಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಕೆಲವರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಬಳಿಕ ಇದ್ದಕ್ಕಿದ್ದಂತೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಧ್ವಂಸಗೊಳಿಸಲಾಯಿತು. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿ ಅಶ್ರುವಾಯು ಸಿಡಿಸಿದರು. ನೆರೆದ ಜನಸಮೂಹವು ಅಲ್ಲಿನ ಸಾರ್ವಜನಿಕ ವಾಹನಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಿತು.
2. ವಿರೋಧ ಪಕ್ಷದ ನಾಯಕರಾಗಿರುವ ಭಾಜಪ ಶಾಸಕ ಸುವೆಂದು ಅಧಿಕಾರಿ ಅವರು ಈ ದಾಳಿಯ ಕೆಲವು ವಿಡಿಯೋಗಳನ್ನು ಬಿಡುಗಡೆ ಮಾಡಿ, ಮೋಥಾಬಾರಿಯಲ್ಲಿ ಹಿಂದೂಗಳ ಅಂಗಡಿಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಅವರು ಅಲ್ಲಿನ ರಾಜ್ಯಪಾಲರಾದ ಸಿ.ವಿ. ಆನಂದ ಬೋಸ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅವರು ಮೋಥಾಬಾರಿ ಪ್ರದೇಶದಲ್ಲಿ ಹಿಂದೂಗಳ ಸುರಕ್ಷತೆಗಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯನ್ನು ನಿಯೋಜಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದಾರೆ. ಈ ಪ್ರದೇಶದಲ್ಲಿ ಹಿಂದೂಗಳಿಗೆ ಅಪಾಯ ಹೆಚ್ಚಾಗಿದ್ದು, ಅವರ ಸುರಕ್ಷತೆಗಾಗಿ ತಕ್ಷಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಸುವೆಂದು ಅಧಿಕಾರಿ ಆಗ್ರಹಿಸಿದ್ದಾರೆ.
3. ಕೇಂದ್ರ ರಾಜ್ಯ ಸಚಿವ ಡಾ. ಸುಕಾಂತ ಮಜುಂದಾರ ಅವರು ಕೂಡ ಈ ಘಟನೆಗಳ ವಿಡಿಯೋಗಳನ್ನು ಬಿಡುಗಡೆ ಮಾಡಿ, “ಮೋಥಾಬಾರಿಯ ಭಯಾನಕ ದೃಶ್ಯಗಳು. ಹಿಂಸಾತ್ಮಕ ಗುಂಪು ಹಿಂದೂಗಳ ಮನೆಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಿದೆ. ಮಮತಾ ಬ್ಯಾನರ್ಜಿ ಮತ್ತು ಅವರ ಪೊಲೀಸರು ಏನು ಮಾಡುತ್ತಿದ್ದಾರೆ? ಅವರು ಮೌನವಾಗಿದ್ದಾರೆ. ಅವರ ನಾಚಿಕೆಗೇಡಿನ ಓಲೈಕೆಯ ರಾಜಕಾರಣದ ಫಲವೇ – ಈ ಅರಾಜಕತೆ, ಭಯ ಮತ್ತು ಹಿಂದೂಗಳ ಮೇಲಿನ ಅನ್ಯಾಯವಾಗಿದೆ !” ಎಂದು ಟೀಕಿಸಿದ್ದಾರೆ.
ಸಂಪಾದಕೀಯ ನಿಲುವುಬಂಗಾಳದಲ್ಲಿ ಇಂತಹ ಬೇಡಿಕೆಗಳನ್ನು ಮಾಡುವ ಬದಲು, ತೃಣಮೂಲ ಕಾಂಗ್ರೆಸ್ ಸರಕಾರವನ್ನು ವಿಸರ್ಜಿಸಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವಂತೆ ಕೇಂದ್ರದ ಭಾಜಪ ಸರಕಾರಕ್ಕೆ ಒತ್ತಾಯಿಸಬೇಕು, ಆಗ ಮಾತ್ರ ಹಿಂದೂಗಳು ಮತ್ತು ದೇಶವನ್ನು ರಕ್ಷಿಸಬಹುದು. |