|
ನಾಗಪುರ – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುಗಾದಿಯ ಶುಭ ಮುಹೂರ್ತದಲ್ಲಿ ನಾಗಪುರಕ್ಕೆ ಭೇಟಿ ನೀಡಲಿದ್ದಾರೆ. 2014 ರಲ್ಲಿ ಅವರು ಪ್ರಧಾನಮಂತ್ರಿಯಾದ ನಂತರ ಮೊದಲ ಬಾರಿಗೆ ರೇಶಿಮಬಾಗನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಮೃತಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ, ಮತ್ತು ಎರಡನೇ ಬಾರಿಗೆ ಅಲ್ಲಿನ ದೀಕ್ಷಾಭೂಮಿಗೆ ಭೇಟಿ ನೀಡಲಿದ್ದಾರೆ. 2017 ರಲ್ಲಿ ಅವರು ದೀಕ್ಷಾಭೂಮಿಗೆ ಆಗಮಿಸಿದ್ದರು. ಮಾರ್ಚ್ 30 ರಂದು ಬೆಳಿಗ್ಗೆ 9 ಗಂಟೆಗೆ ಅವರು ರೇಶಿಮಬಾಗ್ ನ ಸ್ಮೃತಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ನಂತರ ದೀಕ್ಷಾಭೂಮಿಯಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಸ್ಮಾರಕಕ್ಕೆ ಗೌರವ ಸಲ್ಲಿಸಲಿದ್ದಾರೆ. ಅಲ್ಲಿಂದ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ ನಡೆಸುತ್ತಿರುವ ಮಾಧವ ನೇತ್ರಾಲಯದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮೋದಿ ಅವರು ರಕ್ಷಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಮಾನಿ ಸೋಲಾರ ಇಂಡಸ್ಟ್ರೀಸ್ ನಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಇದು ಪ್ರಧಾನಿ ಅವರ 5 ಗಂಟೆಗಳ ನಾಗಪುರ ಪ್ರವಾಸವಾಗಿದೆ.
೧. ಮಾಧವ ನೇತ್ರಾಲಯದ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ.ಸರಸಂಘಚಾಲಕ ಡಾ.ಮೋಹನ ಜಿ ಭಾಗವತ ಅವರು ಒಂದೇ ವೇದಿಕೆಯಲ್ಲಿ ಸೇರಲಿದ್ದಾರೆ.
2. ಸಂಘದ ಸ್ಥಾಪನೆಯಾಗಿ 100 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಮೋದಿ ಸ್ಮೃತಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ.
3. ಮುಂಬಯಿಯ ಚೈತ್ಯಭೂಮಿ ಮತ್ತು ನಾಗಪುರದ ದೀಕ್ಷಾ ಭೂಮಿ ಈ ಎರಡೂ ಸ್ಥಳಗಳು ಬೌದ್ಧ ಧರ್ಮೀಯರಿಗೆ ಅತ್ಯಂತ ಪವಿತ್ರವಾದ ಸ್ಥಳಗಳಾಗಿವೆ. ಹಾಗಾಗಿ ಮೋದಿ ಅವರು ದೀಕ್ಷಾ ಭೂಮಿಗೂ ಸಹ ಭೇಟಿ ನೀಡಲಿದ್ದಾರೆ.