ಪುಣೆಯಲ್ಲಿ ವಕ್ಫ್ ಆಸ್ತಿಗಳ ಅಕ್ರಮ ಮಾರಾಟ ಮತ್ತು ತೆರಿಗೆ ವಂಚನೆ: ಕೋಟ್ಯಂತರ ರೂಪಾಯಿಗಳ ಭೂಮಿ ಹಗರಣ !

  • ಸಾಮಾಜಿಕ ಕಾರ್ಯಕರ್ತ ಸಲೀಂ ಮುಲ್ಲಾ ಅವರಿಂದ ‘ಇಡಿ’ಗೆ ದೂರು

  • ಮುಖ್ಯ ಸೂತ್ರಧಾರ ಅಮೀನ ನೂರ್ ಮಹಮ್ಮದ ಶೇಖ್ ಬಂಧನಕ್ಕೆ ಆಗ್ರಹ

ಪುಣೆ – ವಕ್ಫ್ ಆಸ್ತಿಗಳ ಅಕ್ರಮ ಮಾರಾಟ ಮತ್ತು ತೆರಿಗೆ ವಂಚನೆ ಮಾಡಿ ಪುಣೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಹಗರಣ ನಡೆದಿದೆ ಎಂದು ಆರೋಪಿಸಲಾಗಿದೆ. 2016 ರ ಸರಕಾರಿ ಆದೇಶದ ಪ್ರಕಾರ, ಇನಾಮ ಭೂಮಿಯನ್ನು ದೇವಸ್ಥಾನ (ವಕ್ಫ್) ಆಸ್ತಿಯೆಂದು ದಾಖಲಿಸುವ ನಿರ್ದೇಶನವಿದ್ದು, ಇದರಿಂದ ಅವುಗಳ ಅಕ್ರಮ ಮಾರಾಟವನ್ನು ತಡೆಯಬಹುದು; ಆದರೆ ಜಿಲ್ಲಾಧಿಕಾರಿ, ವಕ್ಫ್ ಮಂಡಳಿಯ ಅಧಿಕಾರಿಗಳು ಮತ್ತು ಸದಸ್ಯರು ಈ ಆದೇಶವನ್ನು ಗಾಳಿಗೆ ತೂರಿ ದೊಡ್ಡ ಅವ್ಯವಹಾರವನ್ನು ಮುಂದುವರಿಸಿದರು. ವಕ್ಫ್ ಮಂಡಳಿಯ ಅಧಿಕಾರಿಗಳು, ಸದಸ್ಯರು ಮತ್ತು ಅಪರಾಧ ಗುಂಪಿನ ಸಹಭಾಗಿತ್ವದಲ್ಲಿ ಈ ಹಗರಣ ನಡೆದಿದ್ದು, ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಆದಾಯ ತೆರಿಗೆ ಇಲಾಖೆಯು ತಕ್ಷಣ ತನಿಖೆ ನಡೆಸಬೇಕು. ಈ ಪ್ರಕರಣದ ಮುಖ್ಯ ಸೂತ್ರಧಾರ ಅಮೀನ ನೂರ್ ಮಹಮ್ಮದ ಶೇಖ, ವಕ್ಫ್ ಮಂಡಳಿಯ ಸದಸ್ಯರು, ಆಡಳಿತಾಧಿಕಾರಿಗಳು ಮತ್ತು ಅಪರಾಧ ಗುಂಪಿನ ಮುಖ್ಯಸ್ಥರನ್ನು ತಕ್ಷಣ ಬಂಧಿಸಬೇಕು. ಲೂಟಿ ಮಾಡಿದ ಹಣವನ್ನು ಮರಳಿ ಪಡೆದು ಅದನ್ನು ಮುಸ್ಲಿಂ ಸಮುದಾಯದ ಶಾಲೆಗಳು, ಆಸ್ಪತ್ರೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಬಳಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ‘ಮಹಾರಾಷ್ಟ್ರ ವಕ್ಫ್ ಲಿಬರೇಶನ್ ಅಂಡ್ ಪ್ರೊಟೆಕ್ಷನ್ ಟಾಸ್ಕ್ ಫೋರ್ಸ್’ನ ಅಧ್ಯಕ್ಷ ಸಲೀಂ ಮುಲ್ಲಾ ಅವರು ಮಾರ್ಚ್ 26 ರಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. (ಈ ಹಗರಣದ ಬಗ್ಗೆ ಆಡಳಿತವು ತನಿಖೆ ನಡೆಸಿ ಸತ್ಯವನ್ನು ಜನರ ಮುಂದೆ ತರಬೇಕು, ಎಂದು ಆಶಯ ! – ಸಂಪಾದಕರು)

ಸಲೀಂ ಮುಲ್ಲಾ ಅವರು ಬಹಿರಂಗಪಡಿಸಿದ ಗಂಭೀರ ವಾಸ್ತವ

1. ಬಡ ಮತ್ತು ಅಗತ್ಯವಿರುವ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಟ್ರಸ್ಟ್‌ಗಳನ್ನು ಸೃಷ್ಟಿಸಿ ಅಕ್ರಮ ವ್ಯವಹಾರಗಳನ್ನು ಮರೆಮಾಚಲಾಗಿದೆ. ಹೆಚ್ಚಿನ ಮೌಲ್ಯದ ವಕ್ಫ್ ಭೂಮಿಯನ್ನು ‘ರಿಯಲ್ ಎಸ್ಟೇಟ್’ (ಸ್ಥಿರ ಆಸ್ತಿ ಖರೀದಿ-ಮಾರಾಟ ಮಾಡುವ ವ್ಯವಹಾರ) ಉದ್ಯಮಿಗಳಿಗೆ ನಕಲಿ ಒಪ್ಪಂದಗಳ ಮೂಲಕ ಮಾರಾಟ ಮಾಡಲಾಗಿದೆ. ಟ್ರಸ್ಟ್‌ನ ಖಾತೆಗಳ ಮೂಲಕ ‘ಮನಿ ಲಾಂಡರಿಂಗ್’ (ಅಪರಾಧ ಕೃತ್ಯಗಳಿಂದ ಗಳಿಸಿದ ಹಣವನ್ನು ಕಾನೂನುಬದ್ಧವಾಗಿ ಪರಿವರ್ತಿಸುವ ಪ್ರಕ್ರಿಯೆ) ನಡೆದಿದ್ದು, ಆ ಹಣವನ್ನು ಕಾನೂನುಬದ್ಧ ಆಸ್ತಿಗಳಲ್ಲಿ ಹೂಡಿಕೆ ಮಾಡಿ ಸರಕಾರಿ ತನಿಖಾ ಸಂಸ್ಥೆಗಳನ್ನು ದಾರಿ ತಪ್ಪಿಸಲಾಗಿದೆ.

2. ವಕ್ಫ್ ಮಂಡಳಿಯ ಕೆಲವು ಅಧಿಕಾರಿಗಳು ಈ ಅವ್ಯವಹಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಬಡವರ ಹಕ್ಕಿನ ಭೂಮಿಯನ್ನು ಕಬಳಿಸಲು ಸಹಾಯ ಮಾಡಿದ್ದಾರೆ. ಪುಣೆಯ ವಕ್ಫ್ ಮಂಡಳಿಯ ಸದಸ್ಯರೊಬ್ಬರು ತಮ್ಮ ಸಂಬಂಧಿಕರನ್ನು ಮಂಡಳಿಯಲ್ಲಿ ನೇಮಿಸಿ ನಿರ್ಧಾರಗಳಲ್ಲಿ ಅವ್ಯವಹಾರ ನಡೆಸಿದ್ದು ಬೆಳಕಿಗೆ ಬಂದಿದೆ.

3. ಹಗರಣದಲ್ಲಿ ಅನೇಕ ಪ್ರಮುಖ ಧಾರ್ಮಿಕ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಮೀಸಲಿಟ್ಟ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಅದರಲ್ಲಿ ಬಾಣೇರ ಮಸೀದಿ, ಉದನ ಶಾ ವಲಿ ದರ್ಗಾ, ಆದಮ್ ಶಾ ವಲಿ ದರ್ಗಾ, ಛೋಟಾ ಶೇಖ್ ಸಲ್ಲಾ ದರ್ಗಾ, ಬಡಾ ಶೇಖ್ ಸಲ್ಲಾ ದರ್ಗಾ, ಹಜರತ್ ಅಬ್ಬಾಸ್ ಕಾ ಆಲಮ್ (ಪಂಜಾ), ಈ ಆಸ್ತಿಗಳು ಸೇರಿವೆ.

ನಕಲಿ ಟ್ರಸ್ಟ್ ಮೂಲಕ ವಕ್ಫ್ ಭೂಮಿಯನ್ನು ಕಬಳಿಸಿದರು !

ಅಮೀನ ನೂರ ಮಹಮ್ಮದ ಶೇಖ್ ಅವರ ಮಲಮಗ ಅಸೀಮ್ ಅಮೀನ್ ಶೇಖ್ ಮತ್ತು ಅವರ ಸಹಚರರು ಎಂದು ತಿಳಿದುಬಂದಿದೆ. ಈ ಗುಂಪು ನಕಲಿ ಟ್ರಸ್ಟ್, ನಕಲಿ ಸಂಸ್ಥೆಗಳು ಮತ್ತು ವ್ಯವಹಾರಗಳ ಮೂಲಕ ವಕ್ಫ್ ನ ಅಮೂಲ್ಯ ಭೂಮಿಯನ್ನು ಕಬಳಿಸಿದೆ. ಈ ವ್ಯವಹಾರದಲ್ಲಿ ವಕ್ಫ್ ಮಂಡಳಿಯ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ತಿಳಿದುಬಂದಿದೆ. ಅಮೀನ ನೂರ ಮಹಮ್ಮದ ಶೇಖ್ ಅವರ ‘ರಾಹತ್ ಪ್ರಾಪರ್ಟೀಸ್’ ಎಂಬ ಸಂಸ್ಥೆಯಿದ್ದು, ಉದಾನಶಾ ವಾಲಿ ಮಸೀದಿಯ ನಿರ್ಮಾಣದ ಹೆಸರಿನಲ್ಲಿ 6 ಕೋಟಿ ರೂಪಾಯಿಗಳ ಅವ್ಯವಹಾರ ನಡೆಸಲಾಗಿದೆ. ಇಲ್ಲಿಯವರೆಗೆ ಈ ಮಸೀದಿಯನ್ನು ನಿರ್ಮಿಸಲಾಗಿಲ್ಲ. ಈ ಹಣವನ್ನು ಅಮೀನ ನೂರ ಮಹಮ್ಮದ ಶೇಖ್ ಅವರು ಕ್ಯಾಂಪ್ ಮತ್ತು ನಾನಾ ಪೇಠ ಪ್ರದೇಶಗಳಲ್ಲಿ ಖಾಸಗಿ ಆಸ್ತಿಗಳನ್ನು ಖರೀದಿಸಲು ಬಳಸಿದ್ದಾರೆ.