Gujarat Land Grabbing Case : ಗುಜರಾತ್‌ದ ಸರ್ದಾರ ಪಟೇಲರ 150 ಗುಂಟೆ ಭೂಮಿಯನ್ನು ಕಬಳಿಸಿದ ಮೂವರಿಗೆ 2 ವರ್ಷ ಜೈಲು ಶಿಕ್ಷೆ!

13 ವರ್ಷಗಳ ನಂತರ ತೀರ್ಪು

ಕರ್ಣಾವತಿ – ಗುಜರಾತ್‌ದ ಖೇಡಾ ಜಿಲ್ಲೆಯ ಗಡವಾ ಗ್ರಾಮದಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ 150 ಗುಂಟೆ ಪಿತ್ರಾರ್ಜಿತ ಭೂಮಿಯನ್ನು ವಂಚನೆಯಿಂದ ಕಬಳಿಸಿದ ಪ್ರಕರಣದಲ್ಲಿ 3 ಆರೋಪಿಗಳಿಗೆ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಮೆಹಮದಾಬಾದ ನ್ಯಾಯಾಲಯದ ನ್ಯಾಯಾಧೀಶ ವಿಶಾಲ ತ್ರಿವೇದಿ ಅವರ ನ್ಯಾಯಾಲಯವು ಭೂಪೇಂದ್ರಭಾಯಿ ದೇಸಾಯಿಭಾಯಿ ದಾಭಿ, ದೇಸಾಯಿಭಾಯಿ ಜೆಹಾಭಾಯಿ ದಾಭಿ ಮತ್ತು ಪ್ರತಾಪಭಾಯಿ ಶಕರಭಾಯಿ ಚೌಹಾಣ ಅವರಿಗೆ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಈ ಪ್ರಕರಣದ ವಿಚಾರಣೆಯ ಸಮಯದಲ್ಲಿ ಹಿರಾಭಾಯಿ ದಾಭಿ ನಿಧನರಾದರು. ಪ್ರಕರಣ ದಾಖಲಾದ ಸುಮಾರು 13 ವರ್ಷಗಳ ನಂತರ ನ್ಯಾಯಾಲಯದ ತೀರ್ಪು ಬಂದಿದೆ.

1. ಎಲ್ಲಾ ದೋಷಿಗಳು 2008 ರಲ್ಲಿ ಕಂದಾಯ ದಾಖಲೆಗಳಲ್ಲಿ ತಿರುಚಿ ಹೆಸರನ್ನು ಬದಲಾಯಿಸಲು ಪ್ರಯತ್ನಿಸಿದ್ದರು; ಆದರೆ ಅದು ವಿಫಲವಾಯಿತು.

2. 1935 ರಿಂದ ಖೇಡಾ ಜಿಲ್ಲೆಯ ಗಡವಾ ಗ್ರಾಮದ ಈ ಭೂಮಿ ಶ್ರೀ ಗುಜರಾತ ಪ್ರಾಂತ ಸಮಿತಿಯ ಮುಖ್ಯಸ್ಥ ವಲ್ಲಭಭಾಯಿ ಝಾವರಭಾಯಿ ಪಟೇಲ ಅವರ ಹೆಸರಿನಲ್ಲಿತ್ತು. 1951 ರಿಂದ 2009-10 ರವರೆಗಿನ ದಾಖಲೆಗಳಲ್ಲಿ, ಅದರ ಮಾಲೀಕರು ವಲ್ಲಭಭಾಯಿ ಪಟೇಲ್ ಎಂದು ಉಲ್ಲೇಖಿಸಲಾಗಿದೆ.

3. 2010 ರಲ್ಲಿ ಸರಕಾರಿ ದಾಖಲೆಗಳ ಗಣಕೀಕರಣ ಮಾಡುವಾಗ ವಲ್ಲಭಭಾಯಿ ಪಟೇಲ ಅವರ ಹೆಸರಿನಿಂದ ‘ಶ್ರೀ ಗುಜರಾತ ಪ್ರಾಂತ ಸಮಿತಿ ಮುಖ್ಯಸ್ಥ’ ಎಂಬ ಪದಗಳನ್ನು ತೆಗೆದುಹಾಕಲಾಯಿತು. ಇದರ ಲಾಭ ಪಡೆದ ವಂಚಕರು ಬ್ಯಾಂಕಿನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರು. ವಿಚಾರಣೆಯ ಸಮಯದಲ್ಲಿ ಈ ಹಗರಣ ಬೆಳಕಿಗೆ ಬಂದಿತು.

ಸಂಪಾದಕೀಯ ನಿಲುವು

  • ಭಾರತದಲ್ಲಿ ಮಹಾಪುರುಷರ ಮಾಲಿಕತ್ವದ ಭೂಮಿಯನ್ನೇ ಕಬಳಿಸುತ್ತಿದ್ದರೆ, ಸಾಮಾನ್ಯ ಜನರ ಗತಿಯೇನು?, ಇದರ ಬಗ್ಗೆ ಯೋಚಿಸದೇ ಇರುವುದು ಒಳ್ಳೆಯದು!
  • 13 ವರ್ಷಗಳ ನಂತರ ಸಿಗುವ ನ್ಯಾಯವು ಅನ್ಯಾಯವೇ ಆಗಿದೆ, ಹೀಗೆ ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನಿದೆ?