ಸತನಾ(ಮಧ್ಯಪ್ರದೇಶ)ದಲ್ಲಿ ದ್ವಿಚಕ್ರವನ್ನು ಸರಿಪಡಿಸಲು ಹೋಗಿದ್ದ ರೋಹಿತ್‌ನನ್ನು ನಿರ್ದಯವಾಗಿ ಹತ್ಯೆ ಗೈದ ಸಲಾಂ ಮತ್ತು ಸದ್ದಾಂ !

ದ್ವಿಚಕ್ರ ವಾಹನವನ್ನು ದುರುಸ್ತಿ ಮಾಡಲು ಹೋಗಿದ್ದ ರೋಹಿತ್ ಕುಶವಾಹಾ (ವಯಸ್ಸು ೧೯) ರನ್ನು ಸಲಾಂ ಖಾನ್ ಮತ್ತು ಸದ್ದಾಂ ಖಾನ್ ಇಬ್ಬರೂ ಸೇರಿ ಕ್ಲಚ್ ತಂತಿಯಿಂದ ಕತ್ತು ಹಿಸುಕಿ ಹತ್ಯೆಗೈದಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಗಲಭೆಕೋರರಿಗೆ ಕರ್ನಾಟಕ ಉಚ್ಚನ್ಯಾಯಾಲಯದಿಂದ ಜಾಮೀನು

ಕಳೆದ ವರ್ಷ ಆಗಸ್ಟ್‍ನಲ್ಲಿ ನಗರದ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪ್ರದೇಶದಲ್ಲಿ ಮತಾಂಧರು ನಡೆಸಿದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾದ ಗಲಭೆಕೋರರಿಗೆ ಕರ್ನಾಟಕ ಉಚ್ಚನ್ಯಾಯಾಲಯವು ಜಾಮೀನು ನೀಡಿದೆ. ಚಾರ್ಜ್‍ಶೀಟ್‍ಅನ್ನು ಸಲ್ಲಿಸಲು ವಿಳಂಬ ಮಾಡಿದ್ದಕ್ಕಾಗಿ ಗಲಭೆಕೋರರಿಗೆ ನ್ಯಾಯಾಲಯವು ಜಾಮೀನು ನೀಡಿತು.

ಕೈಯಲ್ಲಿ ಖಡ್ಗವನ್ನು ಹಿಡಿದು ಸುತ್ತಾಡುತ್ತಿದ್ದ ಮನೋರೋಗಿ ರಾಯ್ ಡಿಸೋಜ಼ ಪೊಲೀಸರ ಥಳಿತದಿಂದ ಸಾವು !

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಪೊಲೀಸರ ಥಳಿತದಿಂದ ರಾಯ್ ಡಿಸೋಜ಼ (ವಯಸ್ಸು ೫೦) ಈ ಮನೋರೋಗಿಯು ಮೃತಪಟ್ಟಿದ್ದಾರೆ. ಈ ಪ್ರಕರಣದಲ್ಲಿ ೮ ಪೊಲೀಸರನ್ನು ಕೂಡಲೇ ಅಮಾನತುಗೊಳಿಸುವಂತೆ ದಕ್ಷಿಣ ಪೊಲೀಸ್ ಅಧಿಕಾರಿ ಪ್ರವೀಣ ಮಧುಕರ ಪವಾರರು ಆದೇಶಿಸಿದ್ದಾರೆ.

ರೆವಾರಿ(ಹರಿಯಾಣ) ದಲ್ಲಿ ೧೦ ವರ್ಷದ ಬಾಲಕಿಯ ಮೇಲೆ ೭ ಬಾಲಕರಿಂದ ಸಾಮೂಹಿಕ ಅತ್ಯಾಚಾರ!

ಮಕ್ಕಳ ಕೈಯಲ್ಲಿ ಸ್ಮಾರ್ಟ್‍ಫೋನ್ ಬಂದಾಗಿನಿಂದ, ಅದನ್ನು ಅನೈತಿಕ ವಿಷಯಗಳಿಗೆ ಎಷ್ಟು ಬಳಸಲಾಗುತ್ತಿದೆ ಎಂಬುದು ಜಗಜ್ಜಾಹೀರಾಗಿದೆ. ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ ಅವರಿಗೆ ಸರಿಯಾದ ಸಂಸ್ಕಾರವನ್ನು ನೀಡಲು ವೈಫಲ್ಯ ಉಂಟಾದುದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಧರ್ಮಶಿಕ್ಷಣವು ಎಷ್ಟು ಅಗತ್ಯವಾಗಿದೆ ಎಂದು ಸ್ಪಷ್ಟವಾಗುತ್ತದೆ !

ಕೋಲಕಾತಾದ ಬಿಜೆಪಿ ಕಚೇರಿ ಬಳಿ ೫೧ ನಾಡಬಾಂಬ್‌ಗಳು ಪತ್ತೆ !

ಇಲ್ಲಿನ ಬಿಜೆಪಿ ಕಚೇರಿಯ ಬಳಿ ೫೧ ನಾಡಬಾಂಬ್‌ಗಳು ಪತ್ತೆಯಾಗಿವೆ. ಒಂದು ಚೀಲದಲ್ಲಿ ಈ ಬಾಂಬ್‌ಗಳನ್ನು ಇಡಲಾಗಿತ್ತು. ಈ ಮಾಹಿತಿ ಪಡೆದ ನಂತರ, ಬಾಂಬ್ ನಿಷ್ಕ್ರೀಯ ದಳವು ಸ್ಥಳಕ್ಕೆ ತಲುಪಿತು. ಈ ಎಲ್ಲಾ ಬಾಂಬ್‌ಗಳು ಕಡಿಮೆ ತೀವ್ರತೆಯ ಹೊಂದಿವೆ ಎಂದು ಹೇಳಲಾಗುತ್ತದೆ.

ಪೊಲೀಸರ ಮೇಲೆ ಹಲ್ಲೆ ನಡೆಸಿದ ಗೂಂಡಾನಿಗೆ ಪರಾರಿಯಾಗಲು ಅವಕಾಶ ನೀಡಿದ ಮಾಜಿ ಬಿಜೆಪಿ ಪದಾಧಿಕಾರಿಯ ಬಂಧನ

ಪೊಲೀಸರ ಮೇಲೆ ಹಲ್ಲೆ ನಡೆಸಿದ ಗೂಂಡಾನಿಗೆ ಪರಾರಿಯಾಗಲು ಅವಕಾಶ ನೀಡಿದ ಮಾಜಿ ಬಿಜೆಪಿ ಪದಾಧಿಕಾರಿ ನಾರಾಯಣ ಸಿಂಗ್ ಭದೌರಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ನಂತರ ಬಿಜೆಪಿ ಅವರನ್ನು ದಕ್ಷಿಣ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದೆ.

ಕೊರೊನಾ ಒಂದು ರೋಗವಲ್ಲ, ಅಲ್ಲಾನ ಎದುರು ಅಳುತ್ತಾ ಕ್ಷಮೆ ಕೇಳಿದರೆ ಅದು ನಾಶವಾಗುತ್ತದೆ !

ಮುಸಲ್ಮಾನ ಮತ್ತು ಕ್ರೈಸ್ತ ನಾಯಕರು ಕೊರೊನಾದ ನಾಶಕ್ಕಾಗಿ ದೇವರಿಗೆ ಶರಣಾಗುವ ಕರೆಯನ್ನು ನೀಡುತ್ತಾರೆ; ಆದರೆ ಯಾವುದೇ ಹಿಂದೂ ನಾಯಕನು ಇಂತಹ ಮನವಿಯನ್ನು ಮಾಡುವುದಿಲ್ಲ; ಏಕೆಂದರೆ ಅವರು ತಮ್ಮನ್ನು ಪ್ರಗತಿ(ಅಧೋಗತಿ)ಪರ ಹಾಗೂ ವಿಜ್ಞಾನನಿಷ್ಠರೆಂದು ತಿಳಿದುಕೊಳ್ಳುತ್ತಾರೆ !

ಆಂಧ್ರಪ್ರದೇಶ ಸರಕಾರ ಮತ್ತು ಪೊಲೀಸರಿಗೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ !

ವೈ.ಎಸ್.ಆರ್. ಕಾಂಗ್ರೆಸ್ ಸರಕಾರದ ಕ್ರೈಸ್ತಪ್ರೇಮವನ್ನು ಬಹಿರಂಗಪಡಿಸಿದ ತನ್ನದೇ ಪಕ್ಷದ ಸಂಸದನನ್ನು ಅಧಿಕಾರವನ್ನು ದುರುಪಯೋಗಿಸಿ ಬಂಧಿಸಿತು. ಇದು ಸರಕಾರದ ಮೊಗಲ್‍ಶಾಹಿ ಆಗಿದ್ದು ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವೇ ಆಗಿದೆ. ಇದಕ್ಕಾಗಿ ನ್ಯಾಯಾಲಯವು ಸಂಬಂಧಪಟ್ಟವರನ್ನು ಶಿಕ್ಷಿಸಬೇಕು !

ಕೊರೋನಾ ಲಸಿಕೆ ತುಂಬಿದ್ದ ಸಿರಿಂಜ್ ಅನ್ನು ಎಸೆದು ಬಿಡುತ್ತಿದ್ದ ಆರೋಗ್ಯ ಸಿಬ್ಬಂದಿ ನೇಹಾ ಖಾನ ಇವರ ಮೇಲೆ ಅಪರಾಧ ದಾಖಲು

ಜಮಾಲಪುರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಸದ ತೊಟ್ಟಿಯಲ್ಲಿ ಕೊರೊನಾ ಲಸಿಕೆ ತುಂಬಿದ ೨೯ ಸಿರಿಂಜ್‍ಗಳು ಪತ್ತೆಯಾಗಿವೆ. ಪೊಲೀಸರು ಇಲ್ಲಿಯ ವ್ಯಾಕ್ಸಿನೇಷನ್ ವಿಭಾಗದ ಮುಖ್ಯಸ್ಥೆ ನೇಹಾ ಖಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಕ್ಕಳ ಲೈಂಗಿಕತೆಯ ಪ್ರಸಾರ ಮಾಡುವ ‘ಬಾಂಬೆ ಬೇಗಮ್ಸ್’ ವೆಬ್ ಸರಣಿಯ ಮೇಲೆ ನಿರ್ಬಂಧ ಹೇರಿ ! – ಹಿಂದೂ ಜನಜಾಗೃತಿ ಸಮಿತಿ

‘ನೆಟ್‌ಫ್ಲಿಕ್ಸ್’ ಮತ್ತು ‘ಒಟಿಟಿ ಪ್ಲಾಟ್‌ಫಾರ್ಮ್’ಗಳಲ್ಲಿ ಪ್ರಸಾರವಾಗುತ್ತಿರುವ ‘ಬಾಂಬೆ ಬೇಗಮ್ಸ್’ ಎಂಬ ವೆಬ್ ಸರಣಿಯಲ್ಲಿ ಶಾಲೆಯ ವಿದ್ಯಾರ್ಥಿಗಳು ಅಶ್ಲೀಲ ಚಿತ್ರಗಳನ್ನು ನೋಡುವುದು, ಮಕ್ಕಳು ಮಾದಕ ಪದಾರ್ಥಗಳ ಸೇವನೆ ಮಾಡುವುದು ಇತ್ಯಾದಿ ಪ್ರಚೋದನಕಾರಿ ಹಾಗೂ ಆಕ್ಷೆಪಾರ್ಹ ದೃಶ್ಯಗಳನ್ನು ತೋರಿಸಲಾಗಿದೆ.