ಗುಪ್ತಚರ ಇಲಾಖೆ ಮತ್ತು ಕೇಂದ್ರ ತನಿಖಾ ದಳ ಇವು ನ್ಯಾಯವ್ಯವಸ್ಥೆಗೆ ಸಹಾಯ ಮಾಡುತ್ತಿಲ್ಲ ! – ಸರ್ವೋಚ್ಚ ನ್ಯಾಯಾಲಯದಿಂದ ಛೀಮಾರಿ

  • ಧನಬಾದ್‌ನಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಹತ್ಯೆ ಪ್ರಕರಣ

  • ಭದ್ರತಾ ವರದಿಯನ್ನು ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯದಿಂದ ನೋಟಿಸು ಜ್ಯಾರಿ

  • ನ್ಯಾಯಾಲಯಕ್ಕೆ ಸಹಾಯ ಮಾಡದವರನ್ನು ನ್ಯಾಯಾಲಯವು ಶಿಕ್ಷಿಸಬೇಕು ಎಂದು ಜನರಿಗೂ ಅನಿಸುತ್ತದೆ !
  • ನ್ಯಾಯಾಂಗಕ್ಕೆ ಸಹಾಯ ಮಾಡದಿರುವ ಭದ್ರತಾ ಪಡೆಗಳು ಸಾಮಾನ್ಯ ಜನರಿಗೆ ಏನು ಸಹಾಯ ಮಾಡಬಹುದು ?

ನವ ದೆಹಲಿ : ಗುಪ್ತಚರ ಇಲಾಖೆ ಮತ್ತು ಕೇಂದ್ರೀಯ ತನಿಖಾ ದಳ ಇವು ನ್ಯಾಯವ್ಯವಸ್ಥೆಗೆ ಸ್ವಲ್ಪವೂ ಸಹಾಯ ಮಾಡುತ್ತಿಲ್ಲ. ಯಾವಾಗ ನ್ಯಾಯಾಧೀಶರು ದೂರು ನೀಡುತ್ತಾರೆ, ಆಗ ಅವರು ಪ್ರತಿಕ್ರಿಯಿಸುವುದಿಲ್ಲ, ಎಂಬ ಪದಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿತು. ಜಾರಖಂಡ್‌ನ ಧನ್‌ಬಾದ್‌ನಲ್ಲಿ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಉತ್ತಮ ಆನಂದ ಅವರ ಹತ್ಯೆಯ ತನಿಖೆ ನಡೆಸುತ್ತಿರುವ ಸಿಬಿಐಗೆ ನ್ಯಾಯಾಧೀಶರ ಸುರಕ್ಷತೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ವರದಿಯನ್ನು ಸಲ್ಲಿಸಲು ಕೇಳಲಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆಯು ಆಗಸ್ಟ್ ೯ ರಂದು ನಡೆಯಲಿದೆ. ಸರ್ವೋಚ್ಚ ನ್ಯಾಯಾಲಯವು ರಾಜ್ಯಗಳಿಗೆ ನ್ಯಾಯಾಂಗ ಪ್ರಾಧಿಕಾರಗಳಿಗೆ ಒದಗಿಸಿರುವ ಭದ್ರತೆಯ ಕುರಿತು ವರದಿ ಸಲ್ಲಿಸುವಂತೆ ಹೇಳಿದೆ.