ಶಾಸಕರಿಗೆ ಸಭಾಗೃಹದಲ್ಲಿ ಅಪರಾಧಿ ಕೃತ್ಯಗಳನ್ನು ಮಾಡಲು ವಿನಾಯಿತಿಯಿಲ್ಲ ! – ಕೇರಳ ಸರಕಾರದ ಕಿವಿಹಿಂಡಿದ ಸರ್ವೋಚ್ಚ ನ್ಯಾಯಾಲಯ

೨೦೧೫ನೇ ಇಸವಿಯಲ್ಲಿ ಕೇರಳದ ವಿಧಾನಸಭೆಯಲ್ಲಿ ಗೊಂದಲವೆಬ್ಬಿಸಿದ ಶಾಸಕರ ಮೇಲೆ ಕಾರ್ಯಾಚರಣೆಯನ್ನು ನಡೆಸಿದ ಪ್ರಕರಣ

ಶಾಸಕರ ಮೇಲಿನ ಕಾರ್ಯಾಚರಣೆಯನ್ನು ಹಿಂಪಡೆಯಬೇಕೆಂಬ ಕೇರಳ ಸರಕಾರದ ಅರ್ಜಿ ತಿರಸ್ಕೃತ !

ಆರೋಪಿ ಶಾಸಕರ ವಿರುದ್ಧ ಖಟ್ಲೆ ನಡೆಯಲಿದೆ !

* ಅಪರಾಧ ಘಟಿಸಿದ ನಂತರ ಅಪರಾಧಿಗೆ ಶಿಕ್ಷೆಯಾಗಲು ತಡವಾದಷ್ಟು ಇತರ ಅಪರಾಧಿಗಳ ಮನೋಧೈರ್ಯ ವೃದ್ಧಿಯಾಗುತ್ತದೆ ! ಇದನ್ನು ಗಮನದಲ್ಲಿಟ್ಟು ಕೇಂದ್ರ ಸರಕಾರವು ಅಪರಾಧಿಗಳ ವಿರುದ್ಧದ ಎಲ್ಲ ಖಟ್ಲೆಗಳನ್ನು ಶೀಘ್ರಗತಿಯಲ್ಲಿ ನಡೆಸಿ ಅವರಿಗೆ ಶಿಕ್ಷೆಯಾಗುವಂತೆ ಪ್ರಯತ್ನಿಸಬೇಕು !

* ಇಂತಹ ಜನತಾದ್ರೋಹಿ ಶಾಸಕರ ಸದಸ್ಯತ್ವವನ್ನು ಶಾಶ್ವತವಾಗಿ ರದ್ದುಗೊಳಿಸುವ ಕಾರ್ಯಾಚರಣೆಯಾದಲ್ಲಿ ಇತರ ಶಾಸಕರಲ್ಲಿಯೂ ಭಯ ನಿರ್ಮಾಣವಾಗುವುದು ! ಪ್ರಜಾಪ್ರಭುತ್ವದಲ್ಲಿ ಇದು ಸಾಧ್ಯವಿದೆಯೇ ?

ನವದೆಹಲಿ – ಆಯ್ಕೆಯಾಗಿ ಬಂದಿರುವ ಶಾಸಕರು ಕಾನೂನಿಗಿಂತಲೂ ಮೇಲಿನವರಾಗಲು ಸಾಧ್ಯವಿಲ್ಲ, ಹಾಗೆಯೇ ಅವರಿಗೆ ಅಪರಾಧಿ ಕೃತ್ಯಗಳನ್ನು ಮಾಡಲು ಯಾವುದೇ ವಿನಾಯಿತಿಯಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಕೇರಳ ಸರಕಾರದ ಕಿವಿ ಹಿಂಡಿದೆ.

ಕೇರಳ ವಿಧಾನಸಭೆಯಲ್ಲಿ ೨೦೧೫ನೇ ಇಸವಿಯಲ್ಲಿ ಗೊಂದಲವೆಬ್ಬಿಸಿದ ಶಾಸಕರ ವಿರುದ್ಧ ನಡೆಸಲಾಗುವ ಶಿಸ್ತುಕ್ರಮವನ್ನು ಹಿಂಪಡೆಯಬೇಕೆಂಬ ಕೇರಳ ಸರಕಾರದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ. (ಅಪರಾಧಿ ಕೃತ್ಯಗಳನ್ನು ಮುಚ್ಚಿಹಾಕುವ ಕೇರಳದ ಸಾಮ್ಯವಾದಿ ಸರಕಾರ ! ಇಂತಹ ಸರಕಾರವು ಜನತೆಗೆ ಎಂದಾದರೂ ಕಾನೂನುಬದ್ಧ ಆಡಳಿತವನ್ನು ನೀಡಬಲ್ಲುದೇ ? – ಸಂಪಾದಕರು) 

ಸರ್ವೋಚ್ಚ ನ್ಯಾಯಾಲಯದ ಈ ನಿರ್ಣಯದ ನಂತರ ಕೇರಳದಲ್ಲಿನ ಉಪದ್ರವಿ ಶಾಸಕರ ವಿರುದ್ಧ ಖಟ್ಲೆಯನ್ನು ನಡೆಸುವ ಮಾರ್ಗವು ಮುಕ್ತವಾಗಿದೆ.

ಈ ಅರ್ಜಿಯ ಬಗ್ಗೆ ಜುಲೈ ೨೮ ರಂದು ನಡೆದ ಆಲಿಕೆಯಲ್ಲಿ ನ್ಯಾಯಾಲಯವು ಕೇರಳ ಸರಕಾರವನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯವು ಹೀಗೆ ಹೇಳಿದೆ,

೧. ಶಾಸಕರಿಗೆ ಜನತೆಯ ಕಾರ್ಯಗಳಿಗಾಗಿ ವಿಶೇಷಾಧಿಕಾರವನ್ನು ನೀಡಲಾಗಿದೆಯೇ ಹೊರತು ವಿಧಾನಸಭೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ಮಾಡಲಿಕ್ಕಲ್ಲ. ಶಾಸಕರ ವಿಶೇಷಾಧಿಕಾರವು ಅವರಿಗೆ ಅಪರಾಧದ ಸಂದರ್ಭದಲ್ಲಿ ಕಾನೂನು ಸಂರಕ್ಷಣೆಯನ್ನು ನೀಡುವುದಿಲ್ಲ.

೨. ಉಪದ್ರವಿ ಶಾಸಕರ ವಿರುದ್ಧ ದಾಖಲಾದ ಅಪರಾಧ, ಹಾಗೆಯೇ ಅವರ ಮೇಲಿನ ಕಾರ್ಯಾಚರಣೆಯನ್ನು ಹಿಂದೆ ಪಡೆಯುವುದರ ಹಿಂದೆ ಯಾವ ರೀತಿಯ ಜನಹಿತವಿದೆ ?

೩. ಈ ಪ್ರಕರಣದಲ್ಲಿನ ನ್ಯಾಯಾಲಯದ ನಿರ್ಣಯವು ಈ ‘ಸಭಾಗೃಹದಲ್ಲಿ ಉಪದ್ರವ ಮಾಡಿದರೆ ಆಗುವ ಪರಿಣಾಮವೇನು ? ಶಾಸಕರ ವಿಶೇಷಾಧಿಕಾರಗಳ ಲಕ್ಷ್ಮಣರೇಖೆಯು ಎಲ್ಲಿಯ ವರೆಗೆ ಇರಬೇಕು ? ಯಾವ ವಿಷಯದಲ್ಲಿ ರಾಜಕೀಯ ವಿರೋಧವನ್ನು ಮಾಡಬೇಕು ?’ ಎಂಬುದರ ಉದಾಹರಣೆಯಾಗಲಿದೆ.