ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft

ಬನಾಸಕಾಂಠಾ (ಗುಜರಾತ) – ಇಲ್ಲಿನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದ ಕಾಣಿಕೆ ಡಬ್ಬಿಯ ನೋಟು ಎಣಿಕೆಯ ಸಮಯದಲ್ಲಿ ನೌಕರನೊಬ್ಬ ನೋಟುಗಳನ್ನು ಕಳ್ಳತನ ಮಾಡುತ್ತಿರುವುದು ‘ಸಿಸಿಟಿವಿ’ ದೃಶ್ಯಾವಳಿಗಳಲ್ಲಿ ಈಗ ಹೊರಬಂದಿದೆ. ಈ ದೃಶ್ಯಾವಳಿಗಳು ೨ ತಿಂಗಳ ಹಿಂದಿನದ್ದಾಗಿದೆ. ಪೊಲೀಸರು ಈ ಪ್ರಕರಣದಲ್ಲಿ ಆರೋಪಿ ಚಿರಾಗ ಠಾಕೂರ ಸೇರಿದಂತೆ ೩ ನೌಕರರನ್ನು ಆ ಸಮಯದಲ್ಲಿ ಬಂಧಿಸಿದ್ದರು.

ಈ ನೌಕರರು ಗುತ್ತಿಗೆ ಆಧಾರದ ಮೇಲೆ ಇಲ್ಲಿ ಕೆಲಸ ಮಾಡುತ್ತಿದ್ದರು. ದೇವಸ್ಥಾನದ ಟ್ರಸ್ಟ್ ಈ ಗುತ್ತಿಗೆಯನ್ನು ರದ್ದುಗೊಳಿಸಿತ್ತು. ​ಈ ನೌಕರರು ನೋಟುಗಳನ್ನು ಎಣಿಸುವಾಗ ನೋಟುಗಳ ಕಂತೆಗಳನ್ನು ಕಾಲಿನ ಕೆಳಗೆ ಅಡಗಿಸಿಡುತ್ತಿರುವುದು ಈ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಹಣದ ಕಂತೆಗಳನ್ನು ಬಚ್ಚಿಟ್ಟ ನಂತರ ಚಿರಾಗ ಠಾಕೂರ ಶೌಚಾಲಯಕ್ಕೆ ಹೋಗುವ ನೆಪದಲ್ಲಿ ಹೊರಗೆ ಹೋಗುತ್ತಿದ್ದನು. ಅದೇ ಸಮಯದಲ್ಲಿ ಅವನ ಜೇಬಿನಿಂದ ೧ ಲಕ್ಷ ೪ ಸಾವಿರ ರೂಪಾಯಿಗಳ ಒಂದು ಕಂತೆ ಕೆಳಗೆ ಬಿದ್ದಿತು. ಅಲ್ಲಿ ಉಪಸ್ಥಿತರಿದ್ದ ಇತರ ನೌಕರರು ಇದನ್ನು ನೋಡಿದ ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಇದರ ನಂತರ ದೇವಸ್ಥಾನದ ಟ್ರಸ್ಟ್ ಆತನ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿತ್ತು.

ಸಂಪಾದಕೀಯ ನಿಲುವು

ದೇವಸ್ಥಾನದಲ್ಲಿ ಸೇವೆ ಮಾಡುವ ಪ್ರತಿಯೊಬ್ಬರೂ ಭಕ್ತರು ಮತ್ತು ಸಾಧಕರಾಗಿರುವುದು ಅತ್ಯಗತ್ಯವಾಗಿದೆ. ಅವರ ಹೊರತಾಗಿ ಬೇರೆ ಯಾರನ್ನೂ ದೇವಸ್ಥಾನದಲ್ಲಿ ಸೇವೆಗಾಗಿ, ಕೆಲಸಕ್ಕಾಗಿ ಇಟ್ಟುಕೊಳ್ಳಬಾರದು, ಎಂಬ ನಿಯಮವನ್ನು ಈಗ ಮಾಡಬೇಕಾಗಿದೆ !