ಕೇರಳದ ಉಚ್ಚ ನ್ಯಾಯಾಲಯದಿಂದ ರಾಜ್ಯದ ಕಮ್ಯುನಿಸ್ಟ ಸರಕಾರಕ್ಕೆ ಸ್ಪಷ್ಟೀಕರಣ ನೀಡುವಂತೆ ಆದೇಶ
|
ತಿರುವನಂತಪುರಮ್ (ಕೇರಳ) – ರಾಜ್ಯದ ನನ್ ಅಭಯಾ ಹತ್ಯೆಯ ಆರೋಪಿಗಳಿಗೆ ‘ಪೆರೋಲ್’(ಒಂದು ನಿರ್ದಿಷ್ಟ ಅವಧಿಗೆ ಕೈದಿಗೆ ಷರತ್ತುಬದ್ಧ ಬಿಡುಗಡೆ) ಮೇಲೆ ಬಿಡುಗಡೆ ಮಾಡಿದ ಬಗ್ಗೆ ಕೇರಳದ ಉಚ್ಚ ನ್ಯಾಯಾಲಯವು ರಾಜ್ಯದ ಕಮ್ಯುನಿಸ್ಟ ಸರಕಾರದ ಬಳಿ ಸ್ಪಷ್ಟೀಕರಣವನ್ನು ಕೇಳಿದೆ. ಈ ಅಪರಾಧಿಗಳಿಗೆ ನೀಡಿರುವ ಪೆರೋಲಾನ್ನು ಕೂಡಲೇ ಹಿಂಪಡೆಯುವಂತೆ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಈ ಸ್ಪಷ್ಟೀಕರಣವನ್ನು ಕೇಳಿದೆ.
Sister Abhaya Murder Case : Kerala High Court Seeks State’s Response On Plea Challenging Parole Granted To Convicts @hannah_mv_ https://t.co/ZiiYA0Rkyk
— Live Law (@LiveLawIndia) July 12, 2021
ಮಾರ್ಚ್ ೨೭ ೧೯೯೨ ರಂದು ರಾಜ್ಯದ ಕೊಟ್ಟಾಯಮ್‌ನಲ್ಲಿನ ಸೆಂಟ್ ಪಾಯಸ ಕಾನ್ವೆಂಟ್‌ನಲ್ಲಿದ್ದ ನನ್ ಅಭಯಾ ಇವರ ಶವವು ಒಂದು ಬಾವಿಯಲ್ಲಿ ಪತ್ತೆಯಾಗಿತ್ತು. ಅವರ ಸಾವಿನ ೨೮ ವರ್ಷಗಳ ನಂತರ ಸಿಬಿಐಯ ನ್ಯಾಯಾಲಯವು ಡಿಸೆಂಬರ ೨೩, ೨೦೨೦ ರಂದು ಪಾದ್ರಿ ಥಾಮಸ್ ಮತ್ತು ನನ್ ಸೇಫಿ ಇವರನ್ನು ಅಪರಾದಿಗಳೆಂದು ನಿರ್ಧರಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ನನ್ ಅಭಯಾಳು ಪಾದ್ರಿ ಥಾಮಸ್ ಹಾಗೂ ನನ್ ಸೇಫಿಯನ್ನು ಆಕ್ಷ್ಷೇಪಾರ್ಹ ಸ್ಥಿತಿಯಲ್ಲಿ ನೋಡಿದ್ದರಿಂದ ಅವರಿಬ್ಬರು ಆಕೆಯ ಹತ್ಯೆ ಮಾಡಿದ್ದರು. (ಇದರಿಂದ ಪಾದ್ರಿ ಮತ್ತು ನನ್ ಇವರ ಅಪರಾಧೀ ಮಾನಸಿಕತೆಯು ಕಂಡು ಬರುತ್ತದೆ ! – ಸಂಪಾದಕರು)