ಪೊಲೀಸರು ಕೊಟ್ಟಿರುವ ಮಾಹಿತಿಯಿಂದ ಸಮಾಚಾರವನ್ನು ಪ್ರಸಾರ ಮಾಡಿದರೆ ಅಪಕೀರ್ತಿ ಹೇಗೆ ಆಗುತ್ತದೆ? ಮುಂಬೈ ಉಚ್ಚ ನ್ಯಾಯಾಲಯ

ನಟಿ ಶಿಲ್ಪಾ ಶೆಟ್ಟಿ ಇವರು ತಮ್ಮ ಪತಿ ರಾಜ ಕುಂದ್ರಾ ಅವರ ಬಂಧನದ ಸಮಾಚಾರಗಳಿಂದ ಅಪಕೀರ್ತಿ ಆಗುತ್ತಿರುವ ಬಗ್ಗೆ ನ್ಯಾಯಾಲಯದಲ್ಲಿ ಮನವಿಯನ್ನು ದಾಖಲಿಸಿದ್ದಾರೆ.

ಮುಂಬೈ-ಮುಂಬೈ ಪೊಲೀಸರ ಅಪರಾಧಿ ಶಾಖೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಮಾಧ್ಯಮಗಳು ವಾರ್ತೆಯನ್ನು ಪ್ರಸಾರ ಮಾಡಿದರು. ಅದಕ್ಕೆ ಹೇಗೆ ಸವಾಲೊಡ್ಡಬಹುದು? ಪೊಲೀಸರ ಕೊಟ್ಟಿರುವ ಮಾಹಿತಿಯ ಪ್ರಕಾರ ವಾರ್ತೆಯನ್ನು ಮಾಡಿದರೆ ಅಪಕೀರ್ತಿ ಹೇಗೆ ಆಗುವುದು? ಎಂದು ಪ್ರಶ್ನೆಯನ್ನು ಮುಂಬೈ ಉಚ್ಚನ್ಯಾಯಾಲಯವು ಉಪಸ್ಥಿತಗೊಳಿಸಿತು. ಅಶ್ಲೀಲ ವಿಡಿಯೋ ಪ್ರಕರಣ ಉದ್ಯೋಗಪತಿ ರಾಜ ಕುಂದ್ರಾ ಇವರ ಬಂಧನದ ನಂತರ ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಿದ್ಧವಾಗಿರುವ ಮಾನಹಾನಿಕರ ಸಮಾಚಾರಗಳನ್ನು ನಿಷೇಧಿಸಬೇಕು ಎಂದು ರಾಜ ಕುಂದ್ರಾ ಇವರ ಪತ್ನಿ ಶಿಲ್ಪಾ ಶೆಟ್ಟಿ ಇವರು ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಮನವಿಯನ್ನು ಸಲ್ಲಿಸಿದ್ದರು.

ಇದರಲ್ಲಿ ಅವರು ಸಾಮಾಜಿಕ ಮಾಧ್ಯಮಗಳ ಜೊತೆಗೆ ವರ್ತಮಾನಪತ್ರಿಕೆಗಳು ಮತ್ತು ವಾರ್ತಾ ವಾಹಿನಿಗಳನ್ನು ಪ್ರತಿವಾದಿಯನ್ನಾಗಿಸಿದ್ದಾರೆ. ವರ್ತಮಾನಪತ್ರಿಕೆಗಳು ತಮ್ಮ ಮಾರಾಟ ಹೆಚ್ಚಾಗಬೇಕು ಅದಕ್ಕಾಗಿ ವರ್ತಮಾನಪತ್ರಿಕೆಗಳು ಇಂತಹ ಸುದ್ದಿಗಳನ್ನು ಅತಿರಂಜಿತವಾಗಿ ಪ್ರಸಿದ್ಧ ಮಾಡುತ್ತವೆ ಎಂದು ಶಿಲ್ಪಾ ಶೆಟ್ಟಿಯವರು ಆರೋಪಿಸಿದ್ದಾರೆ. ನ್ಯಾಯಾಲಯದಲ್ಲಿ ಆಗಿರುವ ವಿಚಾರಣೆಯ ವೇಳೆಯಲ್ಲಿ ನ್ಯಾಯಾಲಯವು ಶಿಲ್ಪಾ ಶೆಟ್ಟಿ ಇವರು ಸಾರ್ವಜನಿಕ ಜೀವನದಲ್ಲಿ ಇರುವರು. ಅವರ ವಿಷಯವಾಗಿ ಸಮಾಚಾರಗಳಲ್ಲಿ ಜನರಿಗೆ ಜನರು ಇಷ್ಟಪಡುತ್ತಾರೆ. ಮಾಧ್ಯಮಗಳು ಪೋಲಿಸರಿಂದ ಸಿಕ್ಕಿರುವ ಮಾಹಿತಿಯ ಆಧಾರದ ಮೇಲೆ ರಾಜ ಕುಂದ್ರಾ ಇವರ ತನಿಖೆಯ ವಿಷಯವಾಗಿ ಸಮಾಚಾರವನ್ನು ಪ್ರಸಿದ್ಧಿ ಮಾಡಿರಬಹುದು. ಇದರಿಂದ ಅಪಕೀರ್ತಿ ಹೇಗೆ ಆಗುವುದು? ಅಂದರೆ ಶಿಲ್ಪಾ ಶೆಟ್ಟಿ ಅವರ ಬಗ್ಗೆ ಏನನ್ನು ಮಾತಾಡಬೇಡಿ ಎಂದು ಹೇಳಿದ ಹಾಗೆ. ಪತಿಯ ವಿರುದ್ಧ ದಾಖಲಾಗಿರುವ ಆರೋಪದಲ್ಲಿ ನ್ಯಾಯಾಲಯವು ಯಾವುದೇ ರೀತಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.