ಅಪರಿಚಿತ ವ್ಯಕ್ತಿಗಳಿಂದ ಜಲೌನ್‌ನಲ್ಲಿನ (ಉತ್ತರ ಪ್ರದೇಶ) ಶೌಚಾಲಯಗಳಿಗೆ ಮೊಘಲ್ ಆಕ್ರಮಣಕಾರರ ಹೆಸರುಗಳನ್ನು ಬರೆದರು !

ಜಲೌನ್ (ಉತ್ತರ ಪ್ರದೇಶ) – ಅಪರಿಚಿತ ವ್ಯಕ್ತಿಗಳು ಇಲ್ಲಿಯ ೭ ಸಾರ್ವಜನಿಕ ಶೌಚಾಲಯಗಳಿಗೆ, ಮೊಹಮ್ಮದ್ ಖಿಲ್ಜಿ, ಘಜ್ನಿ, ಹುಮಾಯೂನ್, ಅಕ್ಬರ್, ಔರಂಗಜೇಬ್ ಮತ್ತು ಇತರ ಮೊಘಲ್ ಆಕ್ರಮಣಕಾರರ ಹೆಸರನ್ನು ನೀಡಿರುವ ಬಗ್ಗೆ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಈ ಶೌಚಾಲಯಗಳ ಮೇಲೆ ಈ ಹೆಸರುಗಳನ್ನು ಬರೆಯಲಾಗಿತ್ತು.

ಈ ಮಾಹಿತಿಯನ್ನು ಪಡೆದ ನಂತರ, ಆಡಳಿತವು ಅದನ್ನು ಗಮನಿಸಿ ಹೆಸರುಗಳನ್ನು ಅಳಿಸಿತು. ಹೆಸರು ಬರೆದವರನ್ನು ಹುಡುಕಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.