ಕೇಂದ್ರ ಹಾಗೂ ರಾಜ್ಯ ಸರಕಾರಗಳು ರಕ್ಷಣೆ ನೀಡುವುದರಲ್ಲಿ ವಿಫಲ !

ರಾಹುಲ ಭಟ್ಟರವರ ಕೊಲೆಯಿಂದ ಆಕ್ರೋಶಗೊಂಡ ಕಾಶ್ಮೀರಿ ಹಿಂದೂಗಳ ಆರೋಪ

ಜಮ್ಮೂ – ಜಿಹಾದಿ ಉಗ್ರಗಾಮಿಗಳು ಕಾಶ್ಮೀರದ ಬಡಗಾವ ಜಿಲ್ಲೆಯಲ್ಲಿನ ಚದೂರಾದಲ್ಲಿ ರಾಹುಲ ಭಟ್ಟ ಎಂಬ ಹಿಂದೂ ಸರಕಾರಿ ನೌಕರನನ್ನು ತಹಸೀಲುದಾರರ ಕಛೇರಿಗೆ ನುಗ್ಗಿ ಕೊಲೆ ಮಾಡಿದ ನಂತರ ಅಲ್ಲಿ ಅಸಂತೋಷ ನಿರ್ಮಾಣವಾಗಿದೆ. ಇದರ ವಿರುದ್ಧ ಕಾಶ್ಮೀರದ ಹಿಂದೂಗಳು ಅಲ್ಲಲ್ಲಿ ಪ್ರತಿಭಟನೆ ನಡೆಸಿದರು ಹಾಗೂ ಕೇಂದ್ರ ಸರಕಾರ ಮತ್ತು ಜಮ್ಮೂ- ಕಾಶ್ಮೀರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಕಾಶ್ಮೀರೀ ಹಿಂದೂಗಳ ಮೇಲೆ ಸತತವಾಗಿ ದಾಳಿ ನಡೆಯುತ್ತಿರುವಾಗ ಕೇಂದ್ರ ಮತ್ತು ರಾಜ್ಯ ಸರಕಾರವು ಅವರಿಗೆ ರಕ್ಷಣೆ ನೀಡುವುದರಲ್ಲಿ ವಿಫಲವಾಗಿರುವುದಾಗಿ ಹಿಂದೂಗಳು ಆರೋಪಿಸಿದ್ದಾರೆ. ‘ಸುರಕ್ಷೆಯ ಭರವಸೆ ಸಿಗದೆ ಹೋದರೆ ಕೆಲಸಕ್ಕೆ ಹೋಗುವುದಿಲ್ಲ’, ಎಂದು ಹಿಂದೂಗಳು ಸ್ಪಷ್ಟವಾಗಿ ಹೇಳಿದರು. ಕಾಶ್ಮೀರಿ ಹಿಂದೂಗಳು ಬಾರಾಮುಲ್ಲಾ- ಶ್ರೀನಗರ ಮಹಾಮಾರ್ಗ ಹಾಗೂ ಜಮ್ಮೂ-ಶ್ರೀನಗರ ಮಹಾಮಾರ್ಗವನ್ನು ತಡೆದು ಕೇಂದ್ರ ಸರಕಾರ ಹಾಗೂ ಜಮ್ಮೂ-ಕಾಶ್ಮೀರದ ಲೆಫ್ಟಿನಂಟ್ ರಾಜ್ಯಪಾಲರಾದ ಮನೋಜ ಸಿನ್ಹಾರವರ ವಿರುದ್ಧ ಘೋಷಣೆ ಕೂಗಿದರು. ಆ ಸಮಯದಲ್ಲಿ ಅವರನ್ನು ತಡೆಯಲು ಪೊಲೀಸರು ಲಾಠೀಚಾರ್ಜ ನಡೆಸಿ ಆಶ್ರುವಾಯುವನ್ನು ಸಿಡಿಸಿದರು.

ರಾಜ್ಯಪಾಲರಾದ ಮನೋಜ ಸಿನ್ಹಾರವರು ಬರುವ ತನಕ ರಾಹುಲ್ ಭಟ್ಟರ ಮೃತದೇಹವನ್ನು ವಶಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಪ್ರತಿಭಟಿಸುತ್ತಿದ್ದ ಕಾಶ್ಮೀರೀ ಹಿಂದೂಗಳು ಸ್ಪಷ್ಟ ಮಾಡಿದರು; ಆದರೆ ಶಾಸಕಾಂಗವು ಅವರಿಗೆ ತಿಳುವಳಿಕೆ ನೀಡಿದ ಬಳಿಕ ರಾಹುಲರವರ ಮೃತದೇಹವನ್ನು ವಶಕ್ಕೆ ತೆಗೆದುಕೊಂಡರು. ಮೇ ೧೩ರಂದು ರಾಹುಲರವರ ಮೃತದೇಹದ ಅಂತ್ಯಸಂಸ್ಕಾರ ನಡೆಸಲಾಯಿತು.

ಸ್ಥಳಾಂತರದ ಅರ್ಜಿಯ ಬಗ್ಗೆ ಶಾಸಕಾಂಗವು ವಿಚಾರ ಮಾಡಲಿಲ್ಲ ! – ರಾಹುಲರವರ ತಂದೆಯ ಆರೋಪ

ರಾಹುಲ ಭಟ್ಟರವರ ತಂದೆಯವರು, ರಾಹುಲ ಕಳೆದ ಹಲವಾರು ತಿಂಗಳಿನಿಂದ ಸ್ಥಳಾಂತರಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರು; ಆದರೆ ಜಿಲ್ಲಾ ಶಾಸನವು ಅವರ ಅರ್ಜಿಯ ಬಗ್ಗೆ ವಿಚಾರ ಮಾಡಲಿಲ್ಲ. ಸರಕಾರೀ ಕಾರ್ಯಾಲಯದಲ್ಲಿ ಹಿಂದೂಗಳು ಸುರಕ್ಷಿತರಾಗಿರದಿದ್ದರೆ ಎಲ್ಲಿ ತಾನೆ ಇರುತ್ತಾರೆ ? ಕಾಶ್ಮೀರೀ ಹಿಂದೂಗಳಿಗೆ ಸಂರಕ್ಷಣೆ ನೀಡುವುದರಲ್ಲಿ ಸರಕಾರವು ವಿಫಲವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಸೇಡು ತೀರಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೆ ಹಿಂದುತ್ವದ ಮಾತನ್ನು ಆಡುವುದರ ಅರ್ಥವೇನು ? – ಕಾಂಗ್ರೆಸ ಮುಖಂಡ ಗುಲಾಮ ನಬೀ ಆಝಾದ

ರಾಹುಲ ಭಟ್ಟರವರ ಕೊಲೆಯ ವಿಷಯದಲ್ಲಿ ಕಾಂಗ್ರೆಸ ಮುಖಂಡ ಗುಲಾಮ ನಬೀ ಆಝಾದರವರು ‘ಮೋದಿ ಸರಕಾರವು ಇದನ್ನು ಸಹಜವಾಗಿ ನೋಡುತ್ತಿದ್ದು, ಅದನ್ನು ಹಾಗೆ ನೋಡುವುದು ಬೇಡ. ಒಂದುವೇಳೆ ಸರಕಾರವು ಭಯಪಟ್ಟಿದ್ದು ಸೇಡು ತೀರಿಸಿಕೊಳ್ಳಲು ಸಾಧ್ಯವಾಗದೆ ಇದ್ದರೆ, ಹಿಂದುತ್ವದ ವಿಷಯ ಮಾತನಾಡುವುದರ ಅರ್ಥವೇನು?’, ಎಂದು ಪ್ರಶ್ನಿಸಿದ್ದಾರೆ.

‘ಮೋದಿಯವರು ಕೇವಲ ಜಮ್ಮೂವಿಗಷ್ಟೇ ಏಕೆ ಹೋಗುತ್ತಾರೆ? ಅವರು ಶ್ರೀನಗರಕ್ಕೆ ಹೋಗಬೇಕು’ ಎಂದು ಕೂಡ ಸವಾಲು ಹಾಕಿದ್ದಾರೆ. (ಕಾಂಗ್ರೆಸ ಸರಕಾರವಿರುವಾಗ ಕಾಂಗ್ರೆಸ ಕಾಶ್ಮೀರದಲ್ಲಿರುವ ಜಿಹಾದಿ ಭಯೋತ್ಪಾದಕರನ್ನು ನಾಶ ಮಾಡಲು ಏನು ಮಾಡಿತು? ಸ್ವತಃ ಆಝಾದರವರು ಜಮ್ಮೂ-ಕಾಶ್ಮೀರದ ಮುಖ್ಯಮಂತ್ರಿಗಳಾಗಿರುವಾಗ ಅವರಾದರೂ ಏನು ಸಾಧಿಸಿದರು, ಎಂದು ಕೂಡ ಅವರು ಹೇಳಬೇಕು ! – ಸಂಪಾಕದರು)

ಸಂಪಾದಕೀಯ ನಿಲುವು

ಕೇಂದ್ರದಲ್ಲಿ ಕಳೆದ ೮ ವರ್ಷಗಳಲ್ಲಿ ಭಾಜಪದ ಸರಕಾರವಿರುವಾಗ ಹಾಗೂ ಅನುಚ್ಛೇದ ೩೭೦ನ್ನು ತೆಗೆದು ಹಾಕಿದ್ದರೂ ಕೂಡ ಕಾಶ್ಮೀರದಲ್ಲಿ ಇನ್ನೂ ಹಿಂದೂಗಳು ಅಸುರಕ್ಷಿತರಾಗಿದ್ದಾರೆ, ಎಂಬುದು ವಸ್ತುಸ್ಥಿತಿಯಾಗಿರುವುದರಿಂದ ಹಿಂದೂಗಳ ಆಕ್ರೋಶವನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ, ಎಂದೇ ಹಿಂದೂಗಳಿಗೆ ಅನಿಸುತ್ತದೆ !