ಶಾಲೆಯಲ್ಲಿ ಮಕ್ಕಳಿಗೆ ಆಹಾರ ವ್ಯರ್ಥ ಮಾಡದಿರುಲು ಕಲಿಸಲಾಗುವುದು !

ಪ್ರತಿ ವರ್ಷ, ಪ್ರತಿಯೊಬ್ಬ ಭಾರತೀಯನೂ ತಲಾ ೫೦ ಕೆಜಿ ಆಹಾರವನ್ನು ವ್ಯರ್ಥ ಮಾಡುತ್ತಾನೆ ! – ವರದಿ

ನವದೆಹಲಿ : ಕೇಂದ್ರ ಸರಕಾರವು ಶಾಲಾ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲೇ ಆಹಾರವನ್ನು ವ್ಯರ್ಥ ಮಾಡದಂತೆ ಪಾಠ ಕಲಿಸಲು ನಿರ್ಧರಿಸಿದೆ. ತಟ್ಟೆಯಲ್ಲಿ ಉಳಿದಿರುವ ಆಹಾರದ ಮಹತ್ವವನ್ನು ಮಕ್ಕಳಿಗೆ ವಿವರಿಸಲಾಗುವುದು. ಇದಕ್ಕಾಗಿ ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೂ ಸೂಚಿಯನ್ನು ಹೊರಡಿಸಿದೆ.

‘ದ ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ’ ೨೦೨೧ ರಲ್ಲಿ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಭಾರತದಲ್ಲಿ ಪ್ರತಿ ವ್ಯಕ್ತಿ ಪ್ರತಿ ವರ್ಷ ೫೦ ಕೆಜಿ ಆಹಾರವನ್ನು ವ್ಯರ್ಥ ಮಾಡುತ್ತಾನೆ. ಇದು ಗದ್ದೆಯಲ್ಲಿ ಧಾನ್ಯವು ಬೆಳೆಯುವುದರಿಂದ ಹಿಡಿದು ಆಹಾರದ ತಟ್ಟೆಗೆ ಬೀಳುವವರೆಗೆ ಇದೆ. ಗೋಧಿ ಮತ್ತು ತರಕಾರಿಗಳು ಮಾರುಕಟ್ಟೆಗೆ ಬರುವವರೆಗೆ ಹೆಚ್ಚಿನ ಪ್ರಮಾಣದಲ್ಲಿ ವ್ಯರ್ಥವಾಗುತ್ತವೆ. ಅನೇಕ ಜನರು ತಟ್ಟೆಯಲ್ಲಿರುವ ಅನ್ನ ಕೂಡ ಬಿಸಾಡಿ ಹಾಕುತ್ತಾರೆ. ಆಗಲೂ ಆಹಾರ ವ್ಯರ್ಥವಾಗುತ್ತಿದೆ ಎಂದು ವರದಿ ಹೇಳಿದೆ.

ಸಂಪಾದಕೀಯ ನಿಲುವು

‘ಅನ್ನವು ಪೂರ್ಣ ಬ್ರಾಹ್ಮವಾಗಿದೆ’, ಎಂಬುವುದು ಹಿಂದೂ ಧರ್ಮದ ಬೋಧನೆಯಾಗಿದೆ. ಹಿಂದೂಗಳು ಇದನ್ನು ಮರೆತಿದ್ದರಿಂದ ಅವರಿಗೆ ಶಿಕ್ಷಣ ನೀಡಬೇಕಾಗುತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !