ಭಾರತದ ಮತ್ತು ರಷ್ಯಾದ ಸಂಬಂಧಗಳು ಅಗತ್ಯಕ್ಕೆ ತಕ್ಕಂತೆ! – ಅಮೇರಿಕಾ

ವಾಷಿಂಗ್ಟನ ಡಿ ಸಿ (ಅಮೇರಿಕಾ) – ಭಾರತಕ್ಕೆ ಸಂಬಂಧಿಸಿದಂತೆ ಅದು ರಷ್ಯಾದೊಂದಿಗೆ ದಶಕಗಳ ಹಳೆಯ ಸಂಬಂಧವನ್ನು ಹೊಂದಿದೆ. ನಾವು ಭಾರತದ ಪಾಲುದಾರರಾಗುವ ಸ್ಥತಿಯಲ್ಲಿಲ್ಲದ ಸಮಯದಲ್ಲಿ ಭಾರತವು ರಷ್ಯಾವನ್ನು ತನ್ನ ಆದ್ಯತೆಯ ಪಾಲುದಾರರನ್ನಾಗಿ ಮಾಡಿಕೊಂಡಿದೆ ಎಂದು ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ ಇವರು ಸಂಸದ ವಿಲಿಯಂ ಹ್ಯಾಗರ್ಟಿ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಭಾರತ- ಅಮೇರಿಕಾದ ಸಹಭಾಗಿತ್ವವು ಬಹಳ ಪ್ರಾಮುಖ್ಯತೆಯನ್ನು ಪಡೆಯುವ ಮತ್ತು ಮುಂದೆ ನಡೆಯಲು ಆಧಾರವಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ಲಿಂಕನ ಹೇಳಿದರು.