ಹಿಂದಿ ಭಾಷೆಗಿಂತ ಇಂಗ್ಲಿಷ್ ಗೆ ಹೆಚ್ಚು ಬೆಲೆಯಿದೆ ! – ತಮಿಳುನಾಡಿನ ಶಿಕ್ಷಣ ಸಚಿವರು

ಚೆನ್ನೈ (ತಮಿಳುನಾಡು) – ಹಿಂದಿ ಭಾಷೆಗಿಂತ ಇಂಗ್ಲಿಷ್ ಭಾಷೆಗೆ ಹೆಚ್ಚು ಬೆಲೆಯಿದೆ, ಆದ್ದರಿಂದ ಹಿಂದಿ ಇದು ಐಚ್ಛಿಕವಾಗಬೇಕು. ಆದರೆ ಅನಿವಾರ್ಯ ಆಗಬಾರದು. ಯಾರು ಹಿಂದಿ ಮಾತನಾಡುತ್ತಾರೆ, ಅವರು ಕ್ಷುಲ್ಲಕ ಕೆಲಸದಲ್ಲಿದ್ದಾರೆ (ನೌಕರಿ). ಹಿಂದಿ ಮಾತನಾಡುವ ಜನರು ನಮ್ಮ ಕಡೆ ಪಾನಿಪುರಿ ಮಾರುತ್ತಾರೆ, ಎಂಬ ಸಂತಾಪಜನಕ ಹೇಳಿಕೆ ತಮಿಳುನಾಡಿನ ಶಿಕ್ಷಣ ಸಚಿವರು ಪೋನಮುಡಿ ನೀಡಿದರು. ಕೊಯಿಮತ್ತೂರ್ ಇಲ್ಲಿಯ ಭಾರತೀಯರ್ ವಿದ್ಯಾಪೀಠದ ದೀಕ್ಷಾಂತ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಪೋನಮುಡಿ ಮಾತು ಮುಂದುವರೆಸುತ್ತಾ, ಇಂಗ್ಲಿಷ್ ಇದು ಅಂತಾರಾಷ್ಟ್ರೀಯ ಭಾಷೆ, ಮೊದಲಿನಿಂದ ಕಲಿಸಲಾಗುತ್ತಿದೆ. ಹಿಂದಿ ಏಕೆ ಕಲಿಯಬೇಕು ? ತಮಿಳನಾಡು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಮುಂದೆ ಇದೆ. ತಮಿಳು ವಿದ್ಯಾರ್ಥಿಗಳು ಯಾವುದೇ ಭಾಷೆ ಕಲಿಯಲು ಸಿದ್ಧರಿದ್ದಾರೆ.

ಸಂಪಾದಕೀಯ ನಿಲುವು

ಇಂಗ್ಲೀಷಿನ ತುಲನೆಯಲ್ಲಿ ಹಿಂದಿ ಹೆಚ್ಚು ಮಟ್ಟದಲ್ಲಿ ಸಾತ್ವಿಕವಾಗಿ ಇರುವಾಗ ಇಂತಹ ವಕ್ತವ್ಯ ನೀಡುವ ಸಚಿವರು ಎಷ್ಟು ಆಂಗ್ಲಮಯವಾಗಿದ್ದರೆ ಎಂದು ಸ್ಪಷ್ಟವಾಗುತ್ತದೆ.

ಈ ರೀತಿಯ ಹೇಳಿಕೆ ನೀಡಿ ಸಚಿವರು ರಾಜ್ಯದ ಜನರ ಮನಸ್ಸು ಕಲುಷಿತಗೊಳಿಸುತ್ತಿದ್ದಾರೆ. ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.