ಜ್ಞಾನವಾಪಿ ಮಸೀದಿಯನ್ನು ಹಿಂದೂಗಳಿಗೆ ಒಪ್ಪಿಸಬೇಕು ! – ಸೊಹೆಲದೇವ ಪಕ್ಷದಿಂದ ಮುಸಲ್ಮಾನರಿಗೆ ಕರೆ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಹಿಂದೂಗಳ ಶ್ರದ್ಧೆಯನ್ನು ಗೌರವಿಸಿ ಶೃಂಗಾರಗೌರಿ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯನ್ನು ಮುಸಲ್ಮಾನರು ಹಿಂದೂಗಳಿಗೆ ಒಪ್ಪಿಸಬೇಕು. ಮುಸಲ್ಮಾನರಿಗಾಗಿ ವಾರಣಾಸಿಯಲ್ಲಿ ಅಸಂಖ್ಯ ಮಸೀದಿಗಳಿವೆ. ಜ್ಞಾನವಾಪಿ ಮಸೀದಿಯ ಬದಲಿಗೆ ಮುಸಲ್ಮಾನರಿಗೆ ಉತ್ತರಪ್ರದೇಶ ಸರಕಾರವು ಬೇರೆ ಜಾಗ ನೀಡಬೇಕು. ವಾರಣಾಸಿಯು ಸೌಹಾರ್ದತೆಗೆ ಪ್ರಸಿದ್ಧವಾಗಿದೆ. ನ್ಯಾಯಾಲಯವು ಎರಡೂ ಸಮಾಜದ ಶ್ರದ್ದೆಯನ್ನು ಗಮನಿಸಿ ತೀರ್ಪು ನೀಡಬೇಕು, ಎಂದು ಸೊಹೆಲದೇವ ಪಕ್ಷವು ಕರೆ ನೀಡಿದೆ. ಪಕ್ಷದ ವಕ್ತಾರರಾದ ಶಶೀಪ್ರತಾಪ ಸಿಂಹರವರು ಪ್ರಸಿದ್ಧಿಪತ್ರಕವನ್ನು ಹೊರಡಿಸಿದ್ದಾರೆ.