ನವ ದೆಹಲಿ – ದೇಶದ್ರೋಹದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಒಂದು ಪ್ರಕರಣದ ಬಗ್ಗೆ ಉತ್ತರ ನೀಡಿರುವ ಕೇಂದ್ರ ಸರಕಾರವು, ದೇಶದ್ರೋಹ ಕಾನೂನಿನಲ್ಲಿ ಪುನರ್ ವಿಚಾರ ಮತ್ತು ವಿಚಾರಣೆ ನಡೆಸುವ ನಿರ್ಣಯ ನಾವು ತೆಗೆದುಕೊಂಡಿದ್ದೇವೆ. ಆದ್ದರಿಂದ ಎಲ್ಲಿಯವರೆಗೆ ನಮ್ಮ ವಿಚಾರಣೆ ಮುಗಿಯುವುದಿಲ್ಲ ಅಲ್ಲಿಯ ವರೆಗೆ ಈ ಪ್ರಕರಣದ ವಿಚಾರಣೆ ನಡೆಸಬಾರದು ಎಂದು ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯವನ್ನು ವಿನಂತಿಸಿದೆ.
Sedition Law : राजद्रोहाच्या कलमाबाबत केंद्र सरकार पुनर्विचार करणार, सर्वोच्च न्यायालयात माहितीhttps://t.co/6Al6jsy1k4
@centralgoverment #SupremeCourtofIndia #seditionlaw #marathinews #lokshahi
— Lokshahi News (@news_lokshahi) May 9, 2022
ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿರುವ ಪ್ರಮಾಣಪತ್ರದಲ್ಲಿ ಕೇಂದ್ರ ಸರಕಾರ, ದೇಶದ್ರೋಹಕ್ಕೆ ಸಂಬಂಧಪಟ್ಟ ಭಾರತೀಯ ದಂಡ ಸಂಹಿತೆಯ ಕಲಂ ‘೧೨೪ ಅ’ ಇದರ ನ್ಯಾಯಬದ್ಧತೆಯ ತಪಾಸಣೆ ನಡೆಸಿ ಪುನರ್ ವಿಚಾರ ಮಾಡಲಾಗುವುದು ಎಂದು ತಿಳಿಸಿದೆ.