ದೆಹಲಿಯಲ್ಲಿನ ಧಾರ್ಮಿಕ ಸ್ಥಳಗಳಲ್ಲಿನ ಭೋಂಗಾಗಳ ಮೇಲೆ ಕಾರ್ಯಾಚರಣೆಯನ್ನು ಮಾಡಲು ಕೇಂದ್ರ ಸರಕಾರಕ್ಕೆ ಹೇಳಬೇಕು !

ಭಾಜಪಕ್ಕೆ ಆಮ ಆದಮಿ ಪಕ್ಷದ ಸಲಹೆ

ನವದೆಹಲಿ – ದೆಹಲಿ ರಾಜ್ಯದಲ್ಲಿನ ಧಾರ್ಮಿಕ ಸ್ಥಳಗಳಲ್ಲಿರುವ ಭೋಂಗಾಗಳನ್ನು ತೆಗೆಯುವ ಬಗ್ಗೆ ಭಾಜಪವು ಮನವಿ ಮಾಡಿದಾಗ ಅಧಿಕಾರದಲ್ಲಿರುವ ಆಮ ಆದಮಿ ಪಕ್ಷದಿಂದ ಅದಕ್ಕೆ ಒಪ್ಪಿಗೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಭಾಜಪವು ದೆಹಲಿ ಪೊಲೀಸರನ್ನು ಸಂಪರ್ಕಿಸಬೇಕು; ಏಕೆಂದರೆ ಈ ಪ್ರಶ್ನೆಯು ದೆಹಲಿಯ ಪೊಲೀಸರ ಅಧೀನದಲ್ಲಿದೆ ಹಾಗೂ ಕೇಂದ್ರದಲ್ಲಿ ಭಾಜಪದ ಸರಕಾರವಿರುವುದರಿಂದ ದೆಹಲಿಯ ಪೊಲೀಸರು ಅವರ ನಿಯಂತ್ರಣದಲ್ಲಿದ್ದಾರೆ, ಎಂದೂ ಆಪ ಹೇಳಿದೆ.