ಅಮೇರಿಕಾದ ನಾರ್ಥ ಕೆರೊಲಿನಾ ವಿಶ್ವವಿದ್ಯಾಲಯ ಸಿಖ್ ವಿದ್ಯಾರ್ಥಿಗಳಿಗೆ ಕೃಪಾಣ(ಚಿಕ್ಕ ಚೂರಿ) ಇಟ್ಟುಕೊಳ್ಳಲು ಅನುಮತಿ !

ವಿದ್ಯಾಪೀಠದ ಕುಲಪತಿ ಶೆರಾನ್ ಎಲ್. ಗ್ಯಾಬರ ಮತ್ತು ಮುಖ್ಯಾಧಿಕಾರಿ ಬ್ಯ್ಯಾಂಡನ ಎಲ್. ವುಲ್ಫ್ ಇವರು, ಕೃಪಾಣ ಇಟ್ಟುಕೊಂಡಿದ್ದ ವಿದ್ಯಾರ್ಥಿಯನ್ನು ಬಂಧಿಸಿದಕ್ಕಾಗಿ ನಾವು ವಿಷಾದಿಸುತ್ತೇವೆ. ಹೊಸ ವಿಶ್ವವಿದ್ಯಾಲಯದ ನಿಯಮಗಳಿಗಾಗಿ ತೆಗೆದುಕೊಂಡಿರುವ ನಿರ್ಣಯವನ್ನು ತಕ್ಷಣದಿಂದಲೇ ಜಾರಿಗೊಳಿಸಲಾಗಿದೆಯೆಂದು ಹೇಳಿದರು.

ಚರ್ಚ್‌ನ ಪಾದ್ರಿಗಳಿಗೆ ಸರಕಾರಿ ಬೊಕ್ಕಸದಿಂದ ಏಕೆ ವೇತನ ನೀಡಬೇಕು ?

ಆಂಧ್ರಪ್ರದೇಶ ಉಚ್ಚ ನ್ಯಾಯಾಲಯವು ಮುಖ್ಯಮಂತ್ರಿ ಜಗನ ಮೋಹನ ರೆಡ್ಡಿಯವರ ನಾಯಕತ್ವದಲ್ಲಿರುವ ರಾಜ್ಯ ಸರಕಾರದಿಂದ ಚರ್ಚ್‌ನ ಪಾದ್ರಿಗಳಿಗೆ (ಧರ್ಮ ಪ್ರಚಾರಕರಿಗೆ) ನೀಡುತ್ತಿರುವ ವೇತನದ ವಿಷಯದಲ್ಲಿ ಪ್ರಶ್ನೆ ಚಿಹ್ನೆಯನ್ನು ಎತ್ತಿದ್ದಾರೆ.

ಪತಂಜಲಿಯ ೫ ಔಷಧಿಗಳ ಮೇಲೆ ಹೇರಿದ ನಿಷೇಧವನ್ನು ಉತ್ತರಾಖಂಡ ಸರಕಾರವು ತಪ್ಪಾಗಿದೆ ಎಂದು ಹೇಳಿ ಹಿಂತೆಗೆದುಕೊಂಡಿತು !

ಉತ್ತರಾಖಂಡದ ಭಾಜಪಾ ಸರಕಾರದ ‘ಆಯುರ್ವೇದ ಮತ್ತು ಯುನಾನಿ ಪರವಾನಗಿ ಪ್ರಾಧಿಕಾರ’ವು ಕೇರಳದ ಡಾ. ಕೆ.ವಿ. ಬಾಬು ಅವರ ದೂರಿನ ಮೇರೆಗೆ ಯೋಗಋಷಿ ರಾಮದೇವ ಬಾಬಾ ಅವರ ಪತಂಜಲಿ ಸಂಸ್ಥೆಯ ದಿವ್ಯ ಫಾರ್ಮಸಿಯಲ್ಲಿ ಸುಳ್ಳು ಜಾಹೀರಾತು ಮಾಡಿದ್ದಾರೆ ಎಂದು ೫ ಔಷಧಗಳನ್ನು ನಿಷೇಧಿಸಲಾಗಿತ್ತು.

ಆಫಝಲ್ ಖಾನನ ಗೊರಿಯ ಹತ್ತಿರ ಇರುವ ಅಕ್ರಮ ಕಟ್ಟಡ ನೆಲಸಮ !

ಜಿಲ್ಲೆಯಲ್ಲಿನ ಮಹಾಬಲೇಶ್ವರ ತಾಲೂಕಿನಲ್ಲಿನ ಪ್ರತಾಪಗಡ ಕೋಟೆಲ್ಲಿ ಅಫಝಲ್ ಖಾನನ ಗೊರಿಯ ಹತ್ತಿರ ಇರುವ ಕಾನೂನು ಬಾಹಿರ ಕಟ್ಟಡವನ್ನು ಪೊಲೀಸ ಬಂದೋಬಸ್ತಿನಲ್ಲಿ ತೆರವುಗೊಳಿಸಲು ನವಂಬರ್ ೧೦ ರಿಂದ ಶಿವಪ್ರತಾಪ ದಿನದಂದು ಬೆಳಗಿನ ಜಾವದಿಂದ ಪ್ರಾರಂಭ ಮಾಡಲಾಯಿತು.

ಭ್ರಷ್ಟಾಚಾರಿ ಜನರು ದೇಶವನ್ನು ಹಾಳು ಮಾಡುತ್ತಿದ್ದಾರೆ ! – ಸರ್ವೋಚ್ಚ ನ್ಯಾಯಾಲಯ

ಭ್ರಷ್ಟಾಚಾರಿಗಳು ದೇಶವನ್ನು ಹಾಳು ಮಾಡುತ್ತಿದ್ದಾರೆ. ಪ್ರತಿಯೊಂದು ಸರಕಾರಿ ಕಚೇರಿಯಲ್ಲಿ ಏನು ನಡೆಯುತ್ತದೆ ?, ಅದನ್ನು ನೀವು ನೋಡುತ್ತೀರಾ. ಅವರ ಮೇಲೆ ಯಾರು ಕ್ರಮ ಕೈಗೊಳ್ಳುತ್ತಾರೆ ? ಜನರು ಆರಿಸಿ ಕಳಿಸಿರುವ ಪ್ರತಿನಿಧಿಗಳನ್ನು ಕೊಂಡುಕೊಳ್ಳಲಾಗುತ್ತದೆ, ಇದರ ವಿಡಿಯೋ ನೋಡಿದ್ದಿರಾ.

ಮತಾಂತರಗೊಂಡಿರುವ ಕ್ರೈಸ್ತರು ಮತ್ತು ಮುಸಲ್ಮಾನರಿಗೆ ಮೀಸಲಾತಿಯ ಲಾಭ ನೀಡಲು ಸಾಧ್ಯವಿಲ್ಲ !

ಮತಾಂತರ ಗೊಳಿಸಿ ಕ್ರೈಸ್ತ ಮತ್ತು ಮುಸಲ್ಮಾನರಾಗಿರುವ ದಲಿತರಿಗೆ ಪರಿಶಿಷ್ಟ ಜಾತಿಯ ಅನುಸೂಚಿಯಿಂದ ಹೊರಗಿಡುವುದು ಯೋಗ್ಯವಾಗಿದೆ ಎಂದು ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದೆ. ಈ ಕ್ರೈಸ್ತ ಮತ್ತು ಮುಸಲ್ಮಾನರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸಿಗುವ ಲಾಭ ದೊರೆಯಬೇಕೆಂದು ಒತ್ತಾಯಿಸುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ.

ಹಿಂದೂದ್ವೇಷಿ ‘ವೀರ್ ದಾಸ್’ ವಿವಾದಿತನ ಕಾಮಿಡಿಯನ್ ನ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮ ರದ್ದು ಮಾಡಿ !

ಮಲ್ಲೇಶ್ವರಂನ ಚೌಡಯ್ಯ ಮೆಮೊರಿಯಲ್ ಹಾಲ್ ನಲ್ಲಿ ಇದೇ ನವೆಂಬರ್ 10 ರಂದು ಆಯೋಜಿಸಿರುವ ವೀರ್ ದಾಸ್ ನ ಕಾಮಿಡಿ ಕಾರ್ಯಕ್ರಮವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಶ್ರೀರಾಮ ಸೇನೆಯಿಂದ ವೈಯಾಲಿಕವಲ್ ಪೋಲಿಸ್ ಠಾಣೆಯಲ್ಲಿ ದೂರನ್ನು ನೀಡಲಾಯಿತು.

‘ಕೇಂದ್ರ ಸರಕಾರವು ಮಧ್ಯಪ್ರವೇಶಿಸಿ ರಾಜಧಾನಿಯ ವಾಯು ಮಾಲಿನ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು !’ (ಅಂತೆ)

ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್