ಮತಾಂತರಗೊಂಡಿರುವ ಕ್ರೈಸ್ತರು ಮತ್ತು ಮುಸಲ್ಮಾನರಿಗೆ ಮೀಸಲಾತಿಯ ಲಾಭ ನೀಡಲು ಸಾಧ್ಯವಿಲ್ಲ !

  • ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಪಾದನೆ

  • ಕೇಂದ್ರ ಸರಕಾರದ ಶ್ಲಾಘನೀಯ ಧೋರಣೆ !

ನವದೆಹಲಿ – ಮತಾಂತರ ಗೊಳಿಸಿ ಕ್ರೈಸ್ತ ಮತ್ತು ಮುಸಲ್ಮಾನರಾಗಿರುವ ದಲಿತರಿಗೆ ಪರಿಶಿಷ್ಟ ಜಾತಿಯ ಅನುಸೂಚಿಯಿಂದ ಹೊರಗಿಡುವುದು ಯೋಗ್ಯವಾಗಿದೆ ಎಂದು ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದೆ. ಈ ಕ್ರೈಸ್ತ ಮತ್ತು ಮುಸಲ್ಮಾನರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸಿಗುವ ಲಾಭ ದೊರೆಯಬೇಕೆಂದು ಒತ್ತಾಯಿಸುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಇದರ ಬಗ್ಗೆ ಕೇಂದ್ರ ಸರಕಾರ ಸಾಮಾಜಿಕ ನ್ಯಾಯ ಸಚಿವಾಲಯದಿಂದ ಅದರ ಅಭಿಪ್ರಾಯ ಮಂಡಿಸಿದೆ. ಸರಕಾರ, ಅಂಕಿ ಅಂಶಗಳ ಪ್ರಕಾರ, ಕ್ರೈಸ್ತ ಮತ್ತು ಮುಸಲ್ಮಾನ ಈ ಧರ್ಮಗಳಲ್ಲಿ ಜಾತಿಯ ಆಧಾರದಲ್ಲಿ ಭೇದ ಭಾವ ಮಾಡುವುದಿಲ್ಲ ಅಥವಾ ಮತಾಂತರಗೊಂಡಿರುವ ಹಿಂದುಳಿದಿರುವವರ ಮೇಲೆ ದೌರ್ಜನ್ಯ ಆಗುತ್ತಿದೆ ಹೀಗೆ ಏನು ಆಗದೇ ಇರುವುದರಿಂದ ಮತಾಂತರರಿಗೆ ಈ ಕಾರಣದಿಂದಾಗಿ ಮೀಸಲಾತಿಯ ಲಾಭ ನೀಡಲಾಗುವುದಿಲ್ಲ. ಸಂವಿಧಾನದಲ್ಲಿನ (ಪರಿಶಿಷ್ಟ ಜಾತಿ) ಆದೇಶ ೧೯೫೦ ರಲ್ಲಿ ಇದಕ್ಕೆ ಸಂಬಂಧಿತ ಯಾವುದೇ ಉಲ್ಲೇಖ ಇಲ್ಲ ಎಂದು ಹೇಳಿದೆ.

೧. ಕೇಂದ್ರ ಸರಕಾರ, ದೌರ್ಜನ್ಯ ಮತ್ತು ಅಸ್ಪೃಶ್ಯತೆ ಇಂದಾಗಿ ಹಿಂದುಗಳಲ್ಲಿನ ಜಾತಿಗಳು ಆರ್ಥಿಕ ಮತ್ತು ಸಾಮಾಜಿಕ ದೃಷ್ಟಿಯಿಂದ ಹಿಂದುಳಿದಿದ್ದಾರೆ. ಹೀಗೆ ಕ್ರೈಸ್ತ ಮತ್ತು ಮುಸಲ್ಮಾನ ಧರ್ಮದಲ್ಲಿ ಇಲ್ಲ. ಆದ್ದರಿಂದಲೇ ಅಂತಹವರು ಕ್ರೈಸ್ತ ಮತ್ತು ಮುಸಲ್ಮಾನ ಧರ್ಮಕ್ಕೆ ಮತಾಂತರಗೊಳ್ಳುವ ನಿರ್ಣಯ ತೆಗೆದುಕೊಂಡ್ಡಿದ್ದಾರೆ ಆದಕಾರಣ ಅವರಿಗೆ ಈ ವ್ಯವಸ್ಥೆಯಿಂದ ಸ್ವಾತಂತ್ರ್ಯ ಸಿಗಲಿದೆ, ಎಂದು ಕೇಂದ್ರ ಸರಕಾರ ಹೇಳಿದೆ.

೨. ಈ ಸಮಯದಲ್ಲಿ ರಂಗನಾಥ ಮಿಶ್ರ ಆಯೋಗದ ವರದಿ ಕೂಡ ಕೇಂದ್ರ ಸರಕಾರ ತಿರಸ್ಕರಿಸಿದೆ. ಈ ವರದಿಯಲ್ಲಿ ಮತಾಂತರಗೊಂಡಿರುವವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದರ್ಜೆ ನೀಡಲು ಶಿಫಾರಸು ಮಾಡಲಾಗಿತ್ತು. ಈ ಆಯೋಗ ವಸ್ತುಸ್ಥಿತಿಯ ಅಭ್ಯಾಸ ಮಾಡದೆ ಈ ಶಿಫಾರಸು ಮಾಡಿದೆ ಎಂದು ಸರಕಾರ ಹೇಳಿದೆ.

ಸಂಪಾದಕೀಯ ನಿಲುವು

‘ಹಿಂದೂಗಳಲ್ಲಿನ ಜಾತಿ ವ್ಯವಸ್ಥೆಯಿಂದ ನಮ್ಮ ಮೇಲೆ ದೌರ್ಜನ್ಯ ಆಗುತ್ತದೆ’, ಎಂದು ಹೇಳುತ್ತಾ ಮತಾಂತರಗೊಂಡಿರುವವರು ಧರ್ಮ ಬದಲಾಯಿಸ ಬೇಕು ಮತ್ತು ಮೊದಲು ಸಿಗುವ ಲಾಭ ಕೂಡ ಬೇಕಿದೆ ! ಇದು ಅವರ ದ್ವೀಮುಖ ನೀತಿಯಾಗಿದೆ !

ಹಿಂದೂಗಳಲ್ಲಿನ ಹಿಂದುಳಿದ ವರ್ಗದವರಿಗೆ ವಿವಿಧ ಆಮೀಷ ಒಡ್ಡಿ ಮತ್ತು ‘ನಮ್ಮಲ್ಲಿ ಜಾತಿ ವ್ಯವಸ್ಥೆ ಇಲ್ಲ’, ಎಂದು ಹೇಳುತ್ತಾ ಮತಾಂತರಗೊಳಿಸುವ ಕ್ರೈಸ್ತ ಮಿಷಿನರಿಗಳು ಹೇಗೆ ಮೋಸ ಮಾಡುತ್ತಾರೆ, ಇದರಿಂದ ಅದು ಸ್ಪಷ್ಟವಾಗುತ್ತದೆ !