‘ಕೇಂದ್ರ ಸರಕಾರವು ಮಧ್ಯಪ್ರವೇಶಿಸಿ ರಾಜಧಾನಿಯ ವಾಯು ಮಾಲಿನ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು !’ (ಅಂತೆ)

ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್

ಹೊಸ ದೆಹಲಿ – ರಾಜಧಾನಿ ದೆಹಲಿಯಲ್ಲಿ ಹವಾಮಾನದ ಗುಣಮಟ್ಟವು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ಸಮಸ್ಯೆಗೆ, ಜನರು ಆಡಳಿತವನ್ನು ನಡೆಸುವ ಆಮ್ ಆದ್ಮಿ ಪಕ್ಷದ ಸರಕಾರವನ್ನು ಟೀಕಿಸುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸುವಾಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ದೆಹಲಿಯ ವಾಯುಮಾಲಿನ್ಯ ಮತ್ತು ಹವಾಮಾನದ ಗುಣಮಟ್ಟದ ಸಮಸ್ಯೆಯು ಕೇವಲ ರಾಜಧಾನಿಯ ಸಮಸ್ಯೆಯಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಈ ಸಮಸ್ಯೆ ಕೇವಲ ಪಂಜಾಬ್ ಮತ್ತು ದೆಹಲಿಯ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ವಾಯು ಮಾಲೀನ್ಯತೆಗೆ ದೆಹಲಿ ಮತ್ತು ಪಂಜಾಬ್‌ನಲ್ಲಿನ ಆಪ್ ಸರಕಾರವನ್ನು ದೋಷಿಸಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸಂಪಾದಕೀಯ ನಿಲುವು

  • ಇಂತಹ ಹೇಳಿಕೆಯನ್ನು ನೀಡುವುದೆಂದರೆ ಜನರಿಗಾಗುತ್ತಿರುವ ತೊಂದರೆಯ ಬಗ್ಗೆ ಯಾವುದೇ ರೀತಿಯ ಸಂವೇದನಾಶೀಲತೆ ಇಲ್ಲದಿರುವ ಲಕ್ಷಣವಾಗಿದೆ !
  • ಪ್ರತಿ ವರ್ಷ ದೆಹಲಿಯಲ್ಲಿ ವಾಸಿಸುವವರು ಮಾಲಿನ್ಯವನ್ನು ಎದುರಿಸುತ್ತಿರುವಾಗ ಅದಕ್ಕೆ ಕೇಂದ್ರ ಸರಕಾರದ ಸಹಾಯ ಪಡೆದುಕೊಂಡು ಸರಿಯಾದ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳದೆ ಕೇಜ್ರಿವಾಲ್ ಅವರು ಕೇವಲ ರಾಜಕೀಯ ಮಾಡುವುದು ಅವರ ಪ್ರಯತ್ನವಾಗಿದೆ ಎಂದು ಹೇಳಬಹುದು. ಕೇಂದ್ರ ಸರಕಾರವು ಕೂಡ ಇದರ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ !