ಹಾಸಿಗೆಯಲ್ಲಿಯೇ ಊಟ ನೀಡಲಾಗುತ್ತದೆ !

ಸತ್ಯೇಂದ್ರ ಚೈನ್ ಇವರ ಸೆರೆಮನೆಯಲ್ಲಿನ ಇನ್ನೊಂದು ವಿಡಿಯೋ ಪ್ರಸಾರ !

ಆಮ್ ಆದ್ಮಿ ಪಕ್ಷದ ಸರಕಾರದಲ್ಲಿನ ಸಚಿವ ಸತ್ಯೇಂದ್ರ ಜೈನ

ನವದೆಹಲಿ – ದೆಹಲಿಯಲ್ಲಿನ ಆಮ್ ಆದ್ಮಿ ಪಕ್ಷದ ಸರಕಾರದಲ್ಲಿನ ಸಚಿವ ಸತ್ಯೇಂದ್ರ ಜೈನ ಇವರು ತಿಹಾರ ಜೈಲಿನಲ್ಲಿನ ಒಂದು ವಿಡಿಯೋ ಭಾಜಪದಿಂದ ಪ್ರಸಾರ ಮಾಡಲಾಗಿದೆ. ಈ ವಿಡಿಯೋದಲ್ಲಿ ಜೈನ ಇವರಿಗೆ ಹಾಸಿಗೆಯ ಮೇಲೆ ಊಟ ನೀಡಲಾಗುತ್ತದೆ ಮತ್ತು ಅವರು ಅಲ್ಲೇ ಕುಳಿತು ಊಟ ಮಾಡುತ್ತಿದ್ದಾರೆ, ಎಂದು ಕಾಣುತ್ತಿದೆ. ಈ ಹಿಂದೆ ಜೈನ್ ಇವರಿಗೆ ಜೈಲಿನಲ್ಲಿ ಅವರ ಮಾಲಿಶ್ ಮಾಡಲಾಗುತ್ತಿರುವ ಒಂದು ವಿಡಿಯೋ ಪ್ರಸಾರವಾಗಿತ್ತು. ಆರ್ಥಿಕ ಹಗರಣದ ಪ್ರಕರಣದಲ್ಲಿ ಜೈನ ಇವರನ್ನು ಬಂಧಿಸಲಾಗಿದೆ.

ಭಾಜಪವು ಈ ವಿಡಿಯೋ ಪ್ರಸಾರ ಮಾಡುತ್ತಾ, ಸತ್ಯೇಂದ್ರ ಜೈನ್ ಇವರಿಗೆ ಜೈಲಿನಲ್ಲಿ ರುಚಿಕರ ಭೋಜನ ನೀಡಲಾಗುತ್ತಿದೆ. ಕೇಜ್ರಿವಾಲ್ ಇವರು ಜೈಲಿನಲ್ಲಿ ವಿಐಪಿಯ ಮನೋರಂಜನೆಯ ಸೌಲಭ್ಯ ಒದಗಿಸಿದ್ದಾರೆ. ಸಚಿವ ಜೈನ್ ಇವರು ಜೈಲಿನಲ್ಲಿರದೇ ರೆಸಾರ್ಟ್‌ನಲ್ಲಿ ಕುಳಿತು ಊಟದ ಆನಂದ ಪಡೆಯುವ ಹಾಗೆ ಕಾಣುತ್ತಿದೆ.

ಸಂಪಾದಕೀಯ ನಿಲುವು

ಸೆರೆಮನೆಯಲ್ಲಿ ಕೈದಿಯಾಗಿರುವ ಸಚಿವರಿಗೆ ವಿಶೇಷ ಸೌಲಭ್ಯ ನೀಡುವ ಪೊಲೀಸ ವ್ಯವಸ್ಥೆಗೆ ಸಂಬಂಧಿತ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು !