ಇನ್ನುಮುಂದೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಮೇಲೆ ‘ಕ್ಯೂಆರ್ ಕೋಡ್’ ಕಾಣಲಿದೆ !

ಕಳ್ಳತನ ತಡೆಯುವುದಕ್ಕಾಗಿ ಕೇಂದ್ರ ಸರಕಾರದ ಮಹತ್ವದ ನಿರ್ಣಯ

(‘ಕ್ಯೂಆರ್ ಕೋಡ್’ ಎಂದರೆ ಸಾಂಕೇತಿಕ ಭಾಷೆಯಲ್ಲಿನ ಸಂಕ್ಷಿಪ್ತ ಸ್ವರೂಪದಲ್ಲಿನ ಸಂಗಣಕಿಯ ಮಾಹಿತಿ)

ಪೆಟ್ರೋಲಿಯಂ ಸಚಿವರಾದ ಹರದೀಪಸಿಂಹ ಪುರಿ

ನವ ದೆಹಲಿ – ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಇನ್ನು ಶೀಘ್ರದಲ್ಲೇ ‘ಕ್ಯೂಆರ್ ಕೋಡ್’ ಜೊತೆ ಜೋಡಿಸಲಾಗುವುದು, ಎಂದು ಪೆಟ್ರೋಲಿಯಂ ಸಚಿವರಾದ ಹರದೀಪಸಿಂಹ ಪುರಿ ಇವರು ನವಂಬರ್ ೧೭ ರಂದು ಮಾಹಿತಿ ನೀಡಿದರು. ಈ ‘ಕ್ಯೂಆರ್ ಕೋಡ್’ನಿಂದ ಗ್ಯಾಸ್ ಸಿಲಿಂಡರ್‌ನ ಖಚಿತ ಸ್ಥಳ ತಿಳಿಯುವುದರಿಂದ ಸಿಲಿಂಡರ್‌ಗಳ ಕಳ್ಳತನ ಕೂಡ ತಡೆಯಲು ಸಾಧ್ಯವಾಗುವುದು ಎಂದು ಹೇಳಿದರು.

ಹರದೀಪ ಸಿಂಹ ಪುರಿ ಮಾತು ಮುಂದುವರೆಸುತ್ತಾ, “ಹಳೆ ಮತ್ತು ಹೊಸ ಸಿಲಿಂಡರ್‌ಗಳ ಮೇಲೆ ‘ಕ್ಯೂಆರ್ ಕೋಡ್’ ಹಾಕಲಾಗುವುದು. ಈ ಕೋಡ್ ಯಾವಾಗ ಸಕ್ರಿಯವಾಗುವುದು, ಗ್ಯಾಸ್ ಸಿಲೆಂಡರ್ ಎಲ್ಲಿಯವರೆಗೆ ತಲುಪಿದೆ ? ಇದನ್ನು ಹುಡುಕಬಹುದು. ಗ್ಯಾಸ್ ಸಿಲಿಂಡರ್ ತಲುಪಿಸುವ ವ್ಯವಸ್ಥೆ ಸುಲಭವಾಗುವುದು.” ಎಂದು ಸಹ ಹೇಳಿದರು.

ಒಂದು ಆಂಗ್ಲ ವಾರ್ತಾ ಪತ್ರಿಕೆಯು ನೀಡಿರುವ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ ೨೦ ಸಾವಿರ ಗ್ಯಾಸ್ ಸಿಲಿಂಡರ್‌ಗಳಿಗೆ ‘ಕ್ಯೂಆರ್ ಕೋಡ್’ ನೀಡಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ೧೪.೨ ಕೆಜಿ ತೂಕದ ಎಲ್ಲಾ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳಿಗೆ ‘ಕ್ಯೂಆರ್ ಕೋಡ್’ ನೀಡಲಾಗುವುದು.