ಭ್ರಷ್ಟಾಚಾರಿ ಜನರು ದೇಶವನ್ನು ಹಾಳು ಮಾಡುತ್ತಿದ್ದಾರೆ ! – ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಭ್ರಷ್ಟಾಚಾರಿಗಳು ದೇಶವನ್ನು ಹಾಳು ಮಾಡುತ್ತಿದ್ದಾರೆ. ಪ್ರತಿಯೊಂದು ಸರಕಾರಿ ಕಚೇರಿಯಲ್ಲಿ ಏನು ನಡೆಯುತ್ತದೆ ?, ಅದನ್ನು ನೀವು ನೋಡುತ್ತೀರಾ. ಅವರ ಮೇಲೆ ಯಾರು ಕ್ರಮ ಕೈಗೊಳ್ಳುತ್ತಾರೆ ? ಜನರು ಆರಿಸಿ ಕಳಿಸಿರುವ ಪ್ರತಿನಿಧಿಗಳನ್ನು ಕೊಂಡುಕೊಳ್ಳಲಾಗುತ್ತದೆ, ಇದರ ವಿಡಿಯೋ ನೋಡಿದ್ದಿರಾ. ನಿಮಗೆ (ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಇವರನ್ನು ಉದ್ದೇಶಿಸಿ) ಇದೆಲ್ಲವೂ ಯೋಗ್ಯವಾಗಿದೆ, ಎಂದು ನಿಮಗೆ ಹೇಳುವುದಿದೆಯೇ ಮತ್ತು ದೇಶದ ವಿರೋಧದಲ್ಲಿಲ್ಲ ? ಇಂತಹ ಜನರ ಮೇಲೆ ಸರಕಾರದಿಂದ ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದಿಲ್ಲ, ಆದ್ದರಿಂದ ಅವರು ತಮ್ಮ ಭ್ರಷ್ಟಾಚಾರದ ಕಾರ್ಯ ಮುಂದುವರಿಸುತ್ತಾರೆ. ಇದೇ ಭ್ರಷ್ಟಾಚಾರದ ಮೂಲವಾಗಿದೆ’, ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಕೆಲವು ದಿನಗಳ ಹಿಂದೆ ತೆಲಂಗಾಣದಲ್ಲಿನ ಅಧಿಕಾರದಲ್ಲಿರುವ ಭಾರತ ರಾಷ್ಟ್ರ ಸಮಿತಿಯ ಶಾಸಕರನ್ನು ವಿಭಜಿಸಲು ಕೋಟ್ಯಾಂತರ ರೂಪಾಯಿ ನೀಡಲಾಗಿರುವ ವಿಡಿಯೋ ಪ್ರಸಾರಗೊಂಡಿತ್ತು. ಆ ವಿಡಿಯೋದ ಆಧಾರ ನೀಡುತ್ತಾ ಸರ್ವೋಚ್ಚ ನ್ಯಾಯಾಲಯವು ಮೇಲಿನಂತೆ ಟೀಕಿಸಿದೆ.

ಎಲಗಾರ ಪರಿಷತ್ ಮತ್ತು ಭೀಮ ಕೋರೆಗಾವ ಹಿಂಸಾಚಾರದ ಪ್ರಕರಣದಲ್ಲಿ ಆರೋಪಿ ಗೌತಮ ನವಲಾಖ ಇವರ ಮೇಲಿನ ವಿಚಾರಣೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಆ ಸಮಯದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಇವರು ಯುಕ್ತಿವಾದ ಮಂಡಿಸುತ್ತಾ, ‘ಇವರಂತಹ ಜನರು ದೇಶ ಹಾಳು ಮಾಡುತ್ತಿದ್ದಾರೆ’, ಎಂದು ಹೇಳಿದರು. ಇದರಿಂದ ‘ನಿಮಗೆ ತಿಳಿದುಕೊಳ್ಳಬೇಕಿದೆಯೇ ದೇಶವನ್ನು ಯಾರು ಹಾಳು ಮಾಡುತ್ತಿದ್ದಾರೆ ?’, ಎಂದು ಸರ್ವೋಚ್ಚ ನ್ಯಾಯಾಲಯ ಪ್ರಶ್ನಿಸುತ್ತಾ ಮೇಲಿನ ಹೇಳಿಕೆ ನೀಡಿದೆ.

ಸಂಪಾದಕೀಯ ನಿಲುವು

ಯಾವುದು ಜನರಿಗೆ ಅನೇಕ ವರ್ಷಗಳಿಂದ ಪ್ರತಿದಿನ ಕಾಣುತ್ತಿದೆ, ಅದೇ ಈಗ ಸರ್ವೋಚ್ಚ ನ್ಯಾಯಾಲಯ ಹೇಳುತ್ತಿದೆ. ಈ ಪರಿಸ್ಥಿತಿ ಎಲ್ಲಾ ಪಕ್ಷದ ಸರಕಾರಗಳಿಗೂ ತಿಳಿದಿದೆ, ಆದರು ಕೂಡ ಈ ಪರಿಸ್ಥಿತಿ ಬದಲಾಯಿಸುವುದಕ್ಕೆ ಯಾರು ದೃಢ ಮತ್ತು ಕಠಿಣ ಪ್ರಯತ್ನ ಮಾಡುವುದಿಲ್ಲ, ಇದು ಭಾರತೀಯರಿಗೆ ಲಾಜ್ಜಾಸ್ಪದವಾಗಿದೆ !