ಆಫಝಲ್ ಖಾನನ ಗೊರಿಯ ಹತ್ತಿರ ಇರುವ ಅಕ್ರಮ ಕಟ್ಟಡ ನೆಲಸಮ !

  • ಹಿಂದುತ್ವನಿಷ್ಠರ ೨೦ ವರ್ಷದ ಹೋರಾಟಕ್ಕೆ ಗೆಲವು !

  • ಪೊಲೀಸ ಬಿಗಿ ಬಂದೋಬಸ್ತ್ : ಪರಿಸರದಲ್ಲಿ ನಿಷೇಧಾಜ್ಞೆ ಜಾರಿ !

  • ಪತ್ರಕರ್ತರಿಗೆ ಪ್ರವೇಶ ನಿಷೇಧ !

ಸಾತಾರ (ಮಹಾರಾಷ್ಟ್ರ) – ಜಿಲ್ಲೆಯಲ್ಲಿನ ಮಹಾಬಲೇಶ್ವರ ತಾಲೂಕಿನಲ್ಲಿನ ಪ್ರತಾಪಗಡ ಕೋಟೆಲ್ಲಿ ಅಫಝಲ್ ಖಾನನ ಗೊರಿಯ ಹತ್ತಿರ ಇರುವ ಕಾನೂನು ಬಾಹಿರ ಕಟ್ಟಡವನ್ನು ಪೊಲೀಸ ಬಂದೋಬಸ್ತಿನಲ್ಲಿ ತೆರವುಗೊಳಿಸಲು ನವಂಬರ್ ೧೦ ರಿಂದ ಶಿವಪ್ರತಾಪ ದಿನದಂದು ಬೆಳಗಿನ ಜಾವದಿಂದ ಪ್ರಾರಂಭ ಮಾಡಲಾಯಿತು. ಯಾವುದೇ ಆಹಿತಕರ ಘಟನೆ ನಡೆಯದೇ ಇರಲು ಪ್ರತಾಪಗಡದಲ್ಲಿ ಪೊಲೀಸ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಕಳೆದ ಅನೇಕ ವರ್ಷದಿಂದ ‘ಶಿವಾಜಿ ಮಹಾರಾಜ ಪ್ರತಾಪಭೂಮಿ ಮುಕ್ತಿ ಆಂದೋಲನ’ದ ಆಮಂತ್ರಿತರು ಹಾಗೂ ಭಾಜಪದ ನಾಯಕ ನಿತಿನ ಶಿಂದೆ ಸಹಿತ ಹಿಂದುತ್ವನಿಷ್ಠ ಸಂಘಟನೆಗಳು ಈ ಕಾನೂನ ಬಾಹಿರ ಕಾಮಗಾರಿ ತೆರವುಗೊಳಿಸಲು ಒತ್ತಾಯಿಸಿತ್ತಿದ್ದರು. ಅಂತಿಮವಾಗಿ ಅದಕ್ಕೆ ಗೆಲುವು ಸಿಕ್ಕಿದೆ.

೧. ಸಾತಾರಾ, ಪುಣೆ, ಸೋಲಾಪುರ, ಕೋಲ್ಲಾಪುರ ಮತ್ತು ಸಾಂಗ್ಲಿ ಈ ೪ ಜಿಲ್ಲೆಯಲ್ಲಿನ ೧ ಸಾವಿರ ೮೦೦ ಕ್ಕೂ ಹೆಚ್ಚಿನ ಪೊಲೀಸ್ ವಾಯಿಯ ಪೊಲೀಸ್ ಉಪವಿಭಾಗದ ಕಚೇರಿಯಲ್ಲಿ ನವೆಂಬರ್ ೯ ರ ರಾತ್ರಿಯೆ ಉಪಸ್ಥಿತರಿದ್ದರು.

೨. ಬೆಳಿಗ್ಗೆ ೬ ಗಂಟೆಯಿಂದ ಕಾನೂನು ಬಾಹಿರ ಕಟ್ಟಡ ತೆರವುಗೊಳಿಸಲು ಪ್ರಾರಂಭವಾಯಿತು. ಪ್ರತಾಪಗಡ, ಮಹಾಬಲೇಶ್ವರ, ವಾಯಿ, ಕರಾಡ ಮತ್ತು ಸಾತಾರಾ ಇಲ್ಲಿಯೂ ಕೂಡ ಹೆಚ್ಚಿನ ಸಂಖ್ಯೆಯ ಪೊಲೀಸರ ಬಂದೋಬಸ್ತ್ ಮಾಡಲಾಗಿತ್ತು. ಈ ಪರಿಸರದಲ್ಲಿ ನಿಷೇಧಾಜ್ಞೆಯ ಕಲಂ ೧೪೪ ಜಾರಿ ಮಾಡಲಾಗಿದೆ.

ಸಾತಾರಾದಲ್ಲಿನ ಜಿಲ್ಲಾಧಿಕಾರಿ ರೂಚೆಶ ಜಯವಂಶಿ, ಪೊಲೀಸ್ ಅಧಿಕಾರಿ ಸಮೀರ್ ಶೇಖ, ವಾಯಿ ಪ್ರಾಂತಾಧಿಕಾರಿ ರಾಜೇಂದ್ರ ಜಾಧವ, ಪೊಲೀಸ ಅಧಿಕ್ಷಕ ಡಾ. ಶೀತಲ ಜಾನವೇ-ಖರಾಡೆ, ಮಹಾಬಲೇಶ್ವರದ ತಹಸೀಲ್ದಾರ್ ಸುಷ್ಮಾ ಪಾಟೀಲ್-ಚೌದರಿ ಮುಂತಾದ ಹಿರಿಯ ಅಧಿಕಾರಿ ಘಟನಾ ಸ್ಥಳಕ್ಕೆ ಬಂದಿದ್ದರು. ಮಾಧ್ಯಮ ಪ್ರತಿನಿಧಿಗಳಿಗೆ ಪರಿಸರದಲ್ಲಿ ಪ್ರವೇಶ ನಿಷೇಧಿಸಲಾಗಿತ್ತು. ಅಫಝಲ್ ಖಾನನ ಗೋರಿಯ ಹತ್ತಿರ ಇರುವ ಪ್ರದೇಶದಲ್ಲಿ ಅನೇಕ ಕೊಠಡಿಗಳ ಕಾನೂನು ಬಾಹಿರ ಕಾಮಗಾರಿ ನಡೆಸಲಾಗಿತ್ತು. ಅಲ್ಲಿ ಉರುಸ್ ಕೂಡ ನಡೆಸಲಾಗುತ್ತಿತ್ತು.

ಸಂಪಾದಕೀಯ ನಿಲುವು

ಶಿವಾಜಿ ಮಹಾರಾಜ ಪ್ರೇಮಿಗಳೇ, ಎಲ್ಲಾ ಕಡೆ ಇರುವ ಕೋಟೆ ದುರ್ಗಗಳಲ್ಲಿ ಆಗಿರುವ ಅಕ್ರಮ ಕಾಮಗಾರಿ ತೆರವುಗೊಳಿಸುವುದಕ್ಕಾಗಿ ನಿರಂತರ ಹೋರಾಟ ನಡೆಸಬೇಕು !

ಅಕ್ರಮ ಕಾಮಗಾರಿ ನಡೆಸುವವರಿಗೆ ಮತ್ತು ಇಷ್ಟು ವರ್ಷ ಅದು ತೆರವುಗೊಳಿಸದೇ ಇರುವ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆಯಾಬೇಕು !