ಅಮೇರಿಕಾದ ನಾರ್ಥ ಕೆರೊಲಿನಾ ವಿಶ್ವವಿದ್ಯಾಲಯ ಸಿಖ್ ವಿದ್ಯಾರ್ಥಿಗಳಿಗೆ ಕೃಪಾಣ(ಚಿಕ್ಕ ಚೂರಿ) ಇಟ್ಟುಕೊಳ್ಳಲು ಅನುಮತಿ !

ವಾಶಿಂಗ್ಟನ್ (ಅಮೇರಿಕಾ) – ಅಮೇರಿಕಾದ ನಾರ್ಥ ಕೆರೊಲಿನಾ ವಿಶ್ವವಿದ್ಯಾಲಯವು ಶಸ್ತ್ರಾಸ್ತ್ರ ನಿಯಮದಲ್ಲಿ ಬದಲಾವಣೆ ಮಾಡಿ ಸಿಖ್ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಲ್ಲಿ ಕೃಪಾಣ(ಚಿಕ್ಕ ಸೂರಿ) ಇಟ್ಟುಕೊಳ್ಳಲು ಅನುಮತಿ ನೀಡಿದೆ. ೨ ತಿಂಗಳ ಮೊದಲು ಒಬ್ಬ ಸಿಖ್ ವಿದ್ಯಾರ್ಥಿ ನಾರ್ಥ ಕೆರೊಲಿನಾ ವಿಶ್ವವಿದ್ಯಾಲಯಕ್ಕೆ ಕೃಪಾಣ ಇಟ್ಟುಕೊಂಡು ಹೋಗಿದ್ದನು. ಅವನಿಗೆ ಅದನ್ನು ತೆಗೆಯುವಂತೆ ಹೇಳಿದಾಗ ಅವನು ನಿರಾಕರಿಸಿದ ಕಾರಣ ಅವನನ್ನು ಬಂಧಿಸಲಾಗಿತ್ತು. ತದನಂತರ ಈ ಧೋರಣೆಯಲ್ಲಿ ಬದಲಾವಣೆ ಮಾಡಿ ಅನುಮತಿಯನ್ನು ನೀಡಲಾಗಿದೆ.

೧. ವಿದ್ಯಾಪೀಠದ ಕುಲಪತಿ ಶೆರಾನ್ ಎಲ್. ಗ್ಯಾಬರ ಮತ್ತು ಮುಖ್ಯಾಧಿಕಾರಿ ಬ್ಯ್ಯಾಂಡನ ಎಲ್. ವುಲ್ಫ್ ಇವರು, ಕೃಪಾಣ ಇಟ್ಟುಕೊಂಡಿದ್ದ ವಿದ್ಯಾರ್ಥಿಯನ್ನು ಬಂಧಿಸಿದಕ್ಕಾಗಿ ನಾವು ವಿಷಾದಿಸುತ್ತೇವೆ. ಹೊಸ ವಿಶ್ವವಿದ್ಯಾಲಯದ ನಿಯಮಗಳಿಗಾಗಿ ತೆಗೆದುಕೊಂಡಿರುವ ನಿರ್ಣಯವನ್ನು ತಕ್ಷಣದಿಂದಲೇ ಜಾರಿಗೊಳಿಸಲಾಗಿದೆಯೆಂದು ಹೇಳಿದರು.

೨. ಸಿಖ್ಖರ ೧೦ನೇ ಗುರು ಗೋವಿಂದ ಸಿಂಹ ಇವರು ಸಿಖ್ಖರಿಗಾಗಿ ೫ ವಿಷಯಗಳನ್ನು ಅನಿವಾರ್ಯಗೊಳಿಸಿದ್ದರು. ಇದರಲ್ಲಿ ಕೂದಲು, ಕಡಗ, ಕೃಪಾಣ, ಕಚೇರಾ(ಅಂತರ್ವಸ್ತ್ರ) ಮತ್ತು ಬಾಚಣಿಗೆ ಇವುಗಳ ಸಮಾವೇಶವಿದೆ.