ಪತಂಜಲಿಯ ೫ ಔಷಧಿಗಳ ಮೇಲೆ ಹೇರಿದ ನಿಷೇಧವನ್ನು ಉತ್ತರಾಖಂಡ ಸರಕಾರವು ತಪ್ಪಾಗಿದೆ ಎಂದು ಹೇಳಿ ಹಿಂತೆಗೆದುಕೊಂಡಿತು !

ಡೆಹ್ರಾಡೂನ್ (ಉತ್ತರಾಖಂಡ) – ಉತ್ತರಾಖಂಡದ ಭಾಜಪಾ ಸರಕಾರದ ‘ಆಯುರ್ವೇದ ಮತ್ತು ಯುನಾನಿ ಪರವಾನಗಿ ಪ್ರಾಧಿಕಾರ’ವು ಕೇರಳದ ಡಾ. ಕೆ.ವಿ. ಬಾಬು ಅವರ ದೂರಿನ ಮೇರೆಗೆ ಯೋಗಋಷಿ ರಾಮದೇವ ಬಾಬಾ ಅವರ ಪತಂಜಲಿ ಸಂಸ್ಥೆಯ ದಿವ್ಯ ಫಾರ್ಮಸಿಯಲ್ಲಿ ಸುಳ್ಳು ಜಾಹೀರಾತು ಮಾಡಿದ್ದಾರೆ ಎಂದು ೫ ಔಷಧಗಳನ್ನು ನಿಷೇಧಿಸಲಾಗಿತ್ತು. ಇದೀಗ ಸರಕಾರ ಇದು ತನ್ನದೇ ತಪ್ಪು ಎಂದು ಹೇಳಿ ಈ ನಿಷೇಧವನ್ನು ಹಿಂತೆಗೆದುಕೊಂಡಿದೆ.

ಈ ಬಗ್ಗೆ ಪತಂಜಲಿ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಇವರು ಈ ಮಾಹಿತಿ ನೀಡಿದ್ದಾರೆ. ಸರಕಾರದಿಂದ ಬಿಪಿಗ್ರಿಟ್, ಮಧುಗ್ರಿಟ್, ಥಾಯರೊಗ್ರಿಟ್, ಲಿಪಿಡೋಮ ಮತ್ತು ಐಗ್ರಿಟ್ ಗೋಲ್ಡ್ ಅನ್ನು ಸರಕಾರ ನಿಷೇಧಿಸಿತ್ತು.