ಚರ್ಚ್‌ನ ಪಾದ್ರಿಗಳಿಗೆ ಸರಕಾರಿ ಬೊಕ್ಕಸದಿಂದ ಏಕೆ ವೇತನ ನೀಡಬೇಕು ?

ಆಂದ್ರಪ್ರದೇಶ ಉಚ್ಚ ನ್ಯಾಯಾಲಯವು ಅಲ್ಲಿಯ ಕ್ರೈಸ್ತ ಪರ ವೈ.ಎಸ್.ಆರ್. ಕಾಂಗ್ರೆಸ್ ಸರಕಾರಕ್ಕೆ ಪ್ರಶ್ನೆ

ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶ ಉಚ್ಚ ನ್ಯಾಯಾಲಯವು ಮುಖ್ಯಮಂತ್ರಿ ಜಗನ ಮೋಹನ ರೆಡ್ಡಿಯವರ ನಾಯಕತ್ವದಲ್ಲಿರುವ ರಾಜ್ಯ ಸರಕಾರದಿಂದ ಚರ್ಚ್‌ನ ಪಾದ್ರಿಗಳಿಗೆ (ಧರ್ಮ ಪ್ರಚಾರಕರಿಗೆ) ನೀಡುತ್ತಿರುವ ವೇತನದ ವಿಷಯದಲ್ಲಿ ಪ್ರಶ್ನೆ ಚಿಹ್ನೆಯನ್ನು ಎತ್ತಿದ್ದಾರೆ. ‘ಚರ್ಚ್‌ನ ಪಾದ್ರಿಗಳಿಗೆ ನೀಡಲಾಗುತ್ತಿರುವ ವೇತನಗಳು ಸರಕಾರಿ ಬೊಕ್ಕಸದಿಂದ ಏಕೆ ನೀಡಬೇಕು ?’, ಎಂದು ಉಚ್ಚ ನ್ಯಾಯಾಲಯವು ಸರಕಾರಕ್ಕೆ ಪ್ರಶ್ನಿಸಿದೆ. ‘ಧಾರ್ಮಿಕ ಕಾರ್ಯಕ್ಕಾಗಿ ನಿಧಿ ನೀಡುವುದು, ಇದು ಬೇರೆಯೇ ಆಗಿದೆ; ಆದರೆ ಓರ್ವ ಧರ್ಮಪ್ರಚಾರಕರಿಗೆ ವೇತನ ನೀಡುವುದು, ಇದು ಬೇರೆ ಅಂಶವಾಗಿದೆ’, ಎಂದೂ ಸಹ ಉಚ್ಚ ನ್ಯಾಯಾಲಯವು ಹೇಳಿದೆ.
ರಾಜ್ಯ ಸರಕಾರ ಕ್ರೈಸ್ತ ಪಾದ್ರಿಗಳಿಗೆ ವೇತನ ನೀಡುತ್ತಿರುವ ವಿಷಯದ ನಿರ್ಣಯವನ್ನು ಪ್ರಶ್ನಿಸಿ ವಿಜಯವಾಡಾದ ವಿಜಯ ಕುಮಾರ ಇವರು ಉಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯವು ಸರಕಾರಕ್ಕೆ ಈ ವಿಷಯದಲ್ಲಿ ಉತ್ತರವನ್ನು ಕೋರಿದೆ. ಸಾಮಾಜಿಕ ಮಾಧ್ಯಮದಿಂದಲೂ (ಸೋಶಿಯಲ್ ಮೀಡಿಯಾದಿಂದಲೂ) ‘ಪಾದ್ರಿಗಳಿಗೆ ಜನತೆಯ ಹಣದಿಂದ ವೇತನವನ್ನು ಹೇಗೆ ನೀಡಲಾಗುತ್ತಿದೆ?’, ಎಂದು ಆಂಧ್ರಪ್ರದೇಶ ಸರಕಾರವನ್ನು ಪ್ರಶ್ನಿಸಲಾಗುತ್ತಿದೆ.

೧. ವಿಜಯ ಕುಮಾರ ಇವರ ಪರವಾಗಿ ಯುಕ್ತಿವಾದ ಮಾಡುವಾಗ ನ್ಯಾಯವಾದಿ ಪಿ. ಶ್ರೀ. ರಘುರಾಮ ಇವರು ನ್ಯಾಯಾಲಯದಲ್ಲಿ, ದೇವಸ್ಥಾನದ ಮುಖ್ಯ ಅರ್ಚಕರಿಗೆ ಭಕ್ತರು ನೀಡಿರುವ ದೇಣಿಗೆಯಿಂದ ವೇತನವನ್ನು ನೀಡಲಾಗುತ್ತದೆ. ಇದೇ ರೀತಿ ಮಸೀದಿಯ ಇಮಾಮರಿಗೂ ವೇತನ ನೀಡಲಾಗುತ್ತಿದೆ; ಆದರೆ ಚರ್ಚ್‌ನ ಪಾದ್ರಿಗಳಿಗೆ ನೇರ ಸರಕಾರಿ ಬೊಕ್ಕಸದಿಂದ ವೇತನವನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

೨. ರಾಜ್ಯ ಸರಕಾರದ ವತಿಯಿಂದ ಯುಕ್ತಿವಾದ ಮಂಡಿಸುವಾಗ, ಹಿರಿಯ ನ್ಯಾಯವಾದಿ ಎಸ್. ಶ್ರೀರಾಮ ಇವರು ‘ಸಂವಿಧಾನದ ಕಲಂ ೨೭ ಅನುಸಾರ ರಾಜ್ಯ ಸರಕಾರ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಅನುದಾನವನ್ನು ನೀಡಬಹುದು’, ಎಂದು ನ್ಯಾಯಾಲಯಕ್ಕೆ ಹೇಳಿದರು.

೩. ಇದಕ್ಕೆ ಉಚ್ಚ ನ್ಯಾಯಾಲಯವು, ಧಾರ್ಮಿಕ ಉತ್ಸವಗಳ ಮೇಲೆ ಖರ್ಚು ಮಾಡುವುದು ಮತ್ತು ವೇತನ ನೀಡುವುದು ಈ ಎರಡೂ ಪ್ರತ್ಯೇಕ ವಿಷಯಗಳಾಗಿವೆ. ಪಾದ್ರಿಗಳಿಗೆ ವೇತನ ನೀಡುವುದು ಇದು ಧಾರ್ಮಿಕ ಉತ್ಸವಕ್ಕಾಗಿ ಖರ್ಚು ಮಾಡುವುದು ಎನ್ನಲು ಸಾಧ್ಯವಿಲ್ಲ ಎಂದು ಹೇಳಿದೆ.

೪. ಆಂಧ್ರಪ್ರದೇಶದಲ್ಲಿ ಕ್ರೈಸ್ತ ಮಿಷಿನರಿ ಮತಾಂತರದಲ್ಲಿ ತೊಡಗಿರುವ ವಾರ್ತೆಗಳು ಬೆಳಕಿಗೆ ಬರುತ್ತಿವೆ. ‘ಯುವಜನ ಶ್ರಮಿಕ ರಿಥೂ ಕಾಂಗ್ರೆಸ್’ನ ಶಾಸಕ ಕೃಷ್ಣಮ್ ರಾಜು ಇವರು ಆಂಧ್ರಪ್ರದೇಶದಲ್ಲಿ ಮತಾಂತರದಲ್ಲಿ ತೊಡಗಿರುವ ಕ್ರೈಸ್ತ ಮಿಷಿನರಿಗಳ ವಿರುದ್ಧ ಧ್ವನಿ ಎತ್ತಿದ್ದರು. ರಾಜೂ ಇವರು ಅವರ ಪಕ್ಷದವರಿಂದಲೇ ಅವರಿಗೆ ಜೀವಕ್ಕೆ ಅಪಾಯ ಇರುವ ಕಾರಣವನ್ನು ನೀಡುತ್ತಾ ಕೇಂದ್ರೀಯ ಭದ್ರತೆಯನ್ನು ಒದಗಿಸುವಂತೆ ಕೋರಿದ್ದರು. ಶಾಸಕರಾದ ರಾಜೂ ಇವರು ಜೂನ ೨೦೨೦ ರಲ್ಲಿ, ಆಂಧ್ರಪ್ರದೇಶದಲ್ಲಿ ಮಿಷಿನರಿ ಜನರು ಬಹಿರಂಗವಾಗಿ ಮತಾಂತರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸರಕಾರಿ ಅಂಕಿ-ಅಂಶಗಳ ಅನುಸಾರ ಕ್ರೈಸ್ತರ ಸಂಖ್ಯೆ ಶೇ. ೨.೫ ಇದೆಯೆಂದು ಹೇಳಲಾಗುತ್ತಿದ್ದರೂ, ವಾಸ್ತವಿಕವಾಗಿ ಶೇ. ೨೫ ಕ್ಕಿಂತ ಕಡಿಮೆಯೇನಿಲ್ಲ ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಹಿಂದೂಗಳು ಯಾವುದಾದರೂ ಧಾರ್ಮಿಕ ಕೋರಿಕೆಯನ್ನು ಮಂಡಿಸಿದರೆ, ‘ಭಾರತ ಜಾತ್ಯತೀತ ದೇಶವಾಗಿದೆ’, ಎಂದು ಹೇಳುತ್ತಾರೆ ಮತ್ತು ಇನ್ನೊಂದೆಡೆ ಮುಸಲ್ಮಾನ, ಕ್ರೈಸ್ತರ ಮೇಲೆ ಧರ್ಮದ ಆಧಾರದಲ್ಲಿ ಸರಕಾರಿ ಯೋಜನೆ, ಸರಕಾರಿ ಹಣದ ಮಾಧ್ಯಮದಿಂದ ಖರ್ಚು ಮಾಡುವುದು, ಹೀಗೆ ಪ್ರತಿಯೊಂದು ಸರಕಾರದ ಒಂದು ಅಂಶದ ಕಾರ್ಯಕ್ರಮವಾಗಿರುತ್ತದೆ, ಇದು ಹಿಂದೂಗಳಿಗೆ ಯಾವಾಗ ಗಮನಕ್ಕೆ ಬರುತ್ತದೆ ?

‘ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ ಮೋಹನ ರೆಡ್ಡಿ ಸ್ವತಃ ಕ್ರೈಸ್ತರಾಗಿರುವುದರಿಂದಲೇ ಸರಕಾರಿ ಬೊಕ್ಕಸದಿಂದ ಪಾದ್ರಿಗಳಿ ಮೇಲೆ ಹಣ ಸುರಿಯುತ್ತಿದ್ದಾರೆ’, ಎಂದು ಯಾರಿಗಾದರೂ ಅನಿಸಿದರೆ ತಪ್ಪೇನಿದೆ ?

ಈಗ ಸರ್ವಧರ್ಮ ಸಮಭಾವದವರು ಏಕೆ ಸುಮ್ಮನಿದ್ದಾರೆ ?