ಉತ್ತರಪ್ರದೇಶದಲ್ಲಿ ಕಡಿಮೆ ಹಾಜರಾತಿಯಿಂದ ೨೪೦ ಮದರಸಾಗಳ ಅನುಮತಿ ರದ್ದು !

ಜಾತ್ಯಾತೀತ ದೇಶದಲ್ಲಿ ಸರಕಾರದ ಹಣದಿಂದ ಮುಸಲ್ಮಾನರಿಗೆ ಧಾರ್ಮಿಕ ಶಿಕ್ಷಣಕೊಡುವುದು, ಇದು ದೇಶದಲ್ಲಿನ ಬಹುಸಂಖ್ಯಾತ ಹಿಂದೂಗಳಿಗೆ ಅನ್ಯಾಯವಾಗಿದ್ದು, ಸಂವಿಧಾನವು ಜನರಿಗೆ ನೀಡಿರುವ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ !

೨೦೦೬ ರಲ್ಲಿ ಸಚಿನ್ ತೆಂಡೂಲ್ಕರ್ ಇವರನ್ನು ಕೊಲ್ಲುವ ಪ್ರಯತ್ನ ! – ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಸ್ವೀಕೃತಿ

ಭಾರತದ ಕ್ರಿಕೆಟ್ ಆಟಗಾರ ಸಚಿನ ತೆಂಡೂಲ್ಕರ್ ಇವರನ್ನು ನಾನು ಕೊಲ್ಲುವ ಪ್ರಯತ್ನ ಮಾಡಿದ್ದೆ, ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಮತ್ತು ವೇಗದ ಬೌಲರ್ ಶೋಯೆಬ್ ಅಖ್ತರ್ ಇವರು ಸ್ವೀಕೃತಿ ನೀಡಿರುವ ಒಂದು ವಿಡಿಯೋ ಪ್ರಸಾರವಾಗಿದೆ.

‘ಕೆನಡಾದಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಮುಚ್ಚಿರಿ !'(ಅಂತೆ) – ಕೆನಡಾದಲ್ಲಿ ಖಲಿಸ್ತಾನಿಗಳ ಬೇಡಿಕೆ

ಇಂತಹ ಬೇಡಿಕೆಗಳಿಗೆ ಯಾರಾದರೂ ಸೊಪ್ಪು ಹಾಕುತ್ತಾರೆಯೇ ? ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಅವರು ಈ ಖಲಿಸ್ತಾನಿಗಳ ವಿರುದ್ಧ ಕ್ರಮ ಕೈಕೊಂಡು ‘ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ’ ಎಂದು ತೋರಿಸಬೇಕು !

ಧಾರ್ಮಿಕ ಚಿಹ್ನೆಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳ ಅಧ್ಯಯನ ಮಾಡಿರಿ ! – ಶಾರ್ನ್ ಕ್ಲಾರ್ಕ್ , ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಶೋಧ ಪ್ರಬಂಧಕ್ಕೆ ಬ್ಯಾಂಕಾಕ್ ನಲ್ಲಿನ ಸಭೆಯಲ್ಲಿ ‘ಸರ್ವೋತ್ಕೃಷ್ಟ ಪ್ರಸ್ತುತಿ’ ಪ್ರಶಸ್ತಿಪ್ರದಾನ!

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಕಿವಿ ಹಿಂಡಿದ ಪ್ರಧಾನಿ ಮೋದಿ !

‘ಜಿ-20’ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಸನಾತನ ಧರ್ಮದ ವಿರುದ್ಧ ಮುಂದಿನ ೨೦೦ ವರ್ಷಗಳ ಕಾಲ ಮಾತನಾಡುತ್ತೇವೆ !(ಅಂತೆ) – ಉದಯನಿಧಿ ಸ್ಟಾಲಿನ್

ತಮಿಳುನಾಡಿನಲ್ಲಿ ಕಳೆದ ೧೦೦ ವರ್ಷಗಳಿಂದ ಸನಾತನ ಧರ್ಮದ ವಿರುದ್ಧ ಧ್ವನಿಯತ್ತಲಾಗಿದೆ. ನಾವು ಮುಂದಿನ ೨೦೦ ವರ್ಷಗಳ ಕಾಲ ಅದರ ವಿರುದ್ಧ ಮಾತನಾಡುತ್ತಿರುತ್ತೇವೆ, ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಇವರ ಪುತ್ರ ಮತ್ತು ರಾಜ್ಯದ ಕ್ರೀಡಾ ಸಚಿವ ಉದಯ ನಿಧಿ ಸ್ಟಾಲಿನ್ ಇವರು ಮತ್ತೊಮ್ಮೆ ಸನಾತನ ಧರ್ಮವನ್ನು ಟೀಕಿಸುತ್ತಾ ಪ್ರಚೋದನಕಾರಿ ಹೇಳಿಕೆ ನೀಡಿದರು.

‘ಭವಿಷ್ಯದಲ್ಲಿ ಭಾರತದಲ್ಲಿ ಹಿಂದೂ ಧರ್ಮ ಇರುವುದಿಲ್ಲವಂತೆ ! – ದೆಹಲಿಯ ಐಐಟಿ ಪ್ರಾಧ್ಯಾಪಕಿ ದಿವ್ಯಾ ದ್ವಿವೇದಿ

ಭೂತಕಾಲದಲ್ಲಿ ಭಾರತ ಇತ್ತು. ಅದರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಾತಿ ಆಧಾರದ ಮೇಲೆ ಅತ್ಯಾಚಾರ ಹಾಗೂ ತುಳಿತಕ್ಕೆ ಒಳಗಾದರು. ಭವಿಷ್ಯದಲ್ಲಿ ಭಾರತ ಇರುವುದು. ಅದರಲ್ಲಿ ಜಾತಿ ಆಧಾರದ ಮೇಲೆ ಆಗುವ ಭೇದಭಾವ ಇರುವುದಿಲ್ಲ ಹಾಗೂ ಹಿಂದೂ ಧರ್ಮ ಇರುವುದಿಲ್ಲ ಎಂದು ‘ದೆಹಲಿ ಐಐಟಿಯ ಪ್ರಾಧ್ಯಾಪಕಿ ಮಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

ಬಂಗಾಳದಲ್ಲಿ ಶ್ರೀ ಗಣೇಶೋತ್ಸವದ ಆಚರಣೆಯನ್ನು ನಿರಾಕರಿಸಿದ ಪ್ರಾಧಿಕಾರವನ್ನು ತರಾಟೆಗೆ ತೆಗೆದುಕೊಂಡ ಕೋಲಕಾತಾ ಉಚ್ಚ ನ್ಯಾಯಾಲಯ !

ರಾಜ್ಯದಲ್ಲಿನ ಆಸನಸೋಲದಲ್ಲಿರುವ ಸರಕಾರಿ ಭೂಮಿಯಲ್ಲಿ ಆಸನಸೋಲ-ದುರ್ಗಾಪುರ ವಿಕಾಸ ಪ್ರಾಧಿಕಾರವು ಗಣೇಶೋತ್ಸವದ ಆಚರಣೆಗೆ ಅನುಮತಿಯನ್ನು ನಿರಾಕಸಿದ್ದರಿಂದ ಕೋಲಕಾತಾ ಉಚ್ಚ ನ್ಯಾಯಾಲಯವು ಪ್ರಾಧಿಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಅಮೇರಿಕಾದಲ್ಲಿ ಭೋಪಾಲ ಅನಿಲ ದುರಂತದ ವಿಷಯದ ಮರುಮಂಡಣೆ

ಭೋಪಾಲ ಅನಿಲ ದುರಂತದ ಅಂಶವನ್ನು ಅಮೇರಿಕಾದಲ್ಲಿ ಪುನಃ ಪ್ರಸ್ತುತಪಡಿಸಲಾಗಿದೆ. ಅಮೇರಿಕದಲ್ಲಿನ ೧೨ ಸಂಸದರು ದೇಶದ ನ್ಯಾಯ ವಿಭಾಗಕ್ಕೆ ಪತ್ರ ಬರೆದು `ಡಾವು ಕೆಮಿಕಲ್’ ಸಂಸ್ಥೆಯ ಮೇಲೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಗದರ 2, ದ ಕಾಶ್ಮೀರ ಫೈಲ್ಸ್ ಮತ್ತು ದ ಕೇರಳ ಸ್ಟೋರಿ ಈ ಚಲನಚಿತ್ರಗಳಿಗೆ ದೊರೆತಿರುವ ಜನಪ್ರಿಯತೆ ನಿರಾಶಾದಾಯಕ ! – ನಟ ನಸರುದ್ದೀನ್ ಶಾಹ

ನಟ ನಸರುದ್ದೀನ್ ಶಾಹ ಇವರ ಅಸುಯೆ !