ಖಲಿಸ್ತಾನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿರಿ ! – ಪ್ರಧಾನಿ ಮೋದಿ
ನವ ದೆಹಲಿ – ‘ಜಿ-20’ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಆ ಸಮಯದಲ್ಲಿ, ಪ್ರಧಾನಮಂತ್ರಿ ಮೋದಿಯವರು ಕೆನಡಾದಲ್ಲಿ ಖಲಿಸ್ತಾನಿಗಳಿಂದ ಭಾರತೀಯ ರಾಯಭಾರಿ ಕಚೇರಿ ಮತ್ತು ಹಿಂದೂ ದೇವಸ್ಥಾನಗಳ ಮೇಲೆ ನಡೆಯುವ ದಾಳಿಯನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಉಪಾಯಯೋಜನೆ ತೆಗೆದುಕೊಳ್ಳುವಂತೆ ಕೆನಡಾ ಪ್ರಧಾನಮಂತ್ರಿಯವರಿಗೆ ಹೇಳಿದರು. ಖಲಿಸ್ತಾನಿ ಚಟುವಟಿಕೆಗಳಿಂದ ಭಾರತ ಮತ್ತು ಕೆನಡಾ ದೇಶಗಳಿಗೆ ಹಾನಿಯಾಗುತ್ತಿರುವುದರಿಂದ ಇಂತಹ ಘಟನೆಗಳನ್ನು ತಡೆಯಬೇಕು ಎಂದು ಪ್ರಧಾನಮಂತ್ರಿ ಮೋದಿಯವರು ಟ್ರುಡೊಗೆ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವಾಲಯ ಒಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಅದರಲ್ಲಿ, ಭಾರತ ಸರಕಾರ ಕೆನಡಾದ ಟ್ರುಡೊ ಸರಕಾರದ ನೀತಿಯನ್ನು ಖಂಡಿಸಿದೆ ಎಂದು ಹೇಳಲಾಗಿದೆ.
‘ಕೆಲವು ಜನರ ಅಯೋಗ್ಯ ಕೃತ್ಯಗಳಿಂದ ಎಲ್ಲರೊಂದಿಗೆ ಸಮಾನವಾಗಿ ವ್ಯವಹರಿಸಲು ಸಾಧ್ಯವಿಲ್ಲವಂತೆ !’ – ಜಸ್ಟಿನ್ ಟ್ರುಡೊ
ಇದು ನಿಜವಾಗಿದ್ದರೂ, ಆ `ಕೆಲವು ಜನರು’ಇದ್ದಾರೆ ಅವರ ವಿರುದ್ಧ ಕೆನಡಾ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ವಿಷಯದ ಬಗ್ಗೆ ಟ್ರುಡೊ ಏಕೆ ಮಾತನಾಡುವುದಿಲ್ಲ ?
ಪ್ರಧಾನಮಂತ್ರಿ ಮೋದಿಯವರನ್ನು ಭೇಟಿಯಾದ ನಂತರ ಕೆನಡಾದ ಪ್ರಧಾನಮಂತ್ರಿ ಟ್ರುಡೊ ಇವರು, “ನಾವು ಕೆನಡಾದಲ್ಲಿ ಶಾಂತಿಯುತ ಪ್ರತಿಭಟನೆಯ ಸ್ವಾತಂತ್ರ್ಯವನ್ನು ಯಾವಾಗಲೂ ರಕ್ಷಿಸುತ್ತೇವೆ ಮತ್ತು ದ್ವೇಷವನ್ನು ವಿರೋಧಿಸಲು ಯಾವಾಗಲೂ ದೃಢವಾಗಿ ನಿಲ್ಲುತ್ತೇವೆ.” ಕೆಲವು ಜನರ ಅಯೋಗ್ಯ ಕೃತ್ಯಗಳ ಕಾರಣದಿಂದ ಎಲ್ಲರೊಂದಿಗೆ ಸಮಾನವಾಗಿ ವ್ಯವಹರಿಸಲು ಸಾಧ್ಯವಿಲ್ಲ. ನಾವು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ನಮ್ಮ ಸರಕಾರ ಖಲಿಸ್ತಾನಿ ಭಯೋತ್ಪಾದನೆಯನ್ನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ. ಕೆಲವು ಜನರ ಕೃತ್ಯಗಳು ಸಂಪೂರ್ಣ ಸಮುದಾಯ ಅಥವಾ ಕೆನಡಾದ ಕೃತ್ಯವಾಗುವುದಿಲ್ಲ ಎಂದು ಹೇಳಿದರು. (ಟ್ರೂಡೋ ಅವರು ತಾವು ಹೇಳುತ್ತಿರುವುದನ್ನು ಇನ್ನೂ ಏಕೆ ಕಾರ್ಯಗತಗೊಳಿಸಿಲ್ಲ ?, ಎನ್ನುವುದನ್ನು ಅವರು ಹೇಳಬೇಕಾಗಿತ್ತು ! – ಸಂಪಾದಕರು)
ಭಾರತದ ಬಗ್ಗೆ ಟ್ರೂಡೊ ಅವರು ಮಾತನಾಡುತ್ತಾ, ಭಾರತವು ವಿಶ್ವದ ಅಸಾಮಾನ್ಯ ಮತ್ತು ಪ್ರಮುಖ ಅರ್ಥವ್ಯವಸ್ಥೆಯಾಗಿದೆಯೆಂದು ಹೇಳಿದರು.
Khalistan referendum held in Canada as PM Modi raises concerns with Trudeauhttps://t.co/8mKMcrCPhm
— HinduPost (@hindupost) September 11, 2023