ಚಿತ್ತಗಾಂವ (ಬಾಂಗ್ಲಾದೇಶ) – ಇಲ್ಲಿ ರಾಜೇಶ ಚೌಧರಿ ಮತ್ತು ಹೃದಯ ದಾಸ ಈ ಇಬ್ಬರು ಹಿಂದೂ ಯುವಕರನ್ನು ಬಾಂಗ್ಲಾದೇಶದ ರಾಷ್ಟ್ರಧ್ವಜದ ಮೇಲೆ ಭಗವಾ ಧ್ವಜವನ್ನು ಹಾರಿಸಿರುವ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ನ್ಯೂ ಮಾರ್ಕೆಟನಲ್ಲಿರುವ ಆಜಾದಿ ಸ್ತಂಭದ ಮೇಲಿರುವ ರಾಷ್ಟ್ರಧ್ವಜದ ಮೇಲೆ ಭಗವಾ ಧ್ವಜ ಹಾರಿಸಿರುವ ಪ್ರಕರಣದಲ್ಲಿ 19 ಜನರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 25 ರಂದು ಸನಾತನ ಜಾಗರಣ ಮಂಚ್ ಇಲ್ಲಿನ ಲಾಲದಿಘಿ ಮೈದಾನದಲ್ಲಿ ಮೆರವಣಿಗೆಯನ್ನು ಆಯೋಜಿಸಿತ್ತು.
ಆಗ ಅಲ್ಲಿ ಭಗವಾ ಧ್ವಜವನ್ನು ಹಚ್ಚಲಾಗಿತ್ತು. ಈ ಧ್ವಜದಲ್ಲಿ ‘ಆಮ್ಹಿ ಸನಾತನಿ’ ಎಂದು ಬರೆದಿತ್ತು. ಈ ಘಟನೆಯ ನಂತರ ಕೋತವಾಲಿ ಪೊಲೀಸ್ ಠಾಣೆಯಲ್ಲಿ ಫಿರೋಜ ಖಾನ ಇವರು ದೂರನ್ನು ದಾಖಲಿಸಿದ್ದನು. ಬಾಂಗ್ಲಾದೇಶದಲ್ಲಿ ರಾಷ್ಟ್ರಧ್ವಜದ ಮೇಲೆ ಇತರೆ ಯಾವುದೇ ಬಣ್ಣದ ಧ್ವಜವನ್ನು ಹಾರಿಸುವುದು ನಿಯಮಗಳ ಉಲ್ಲಂಘನೆಯಾಗಿದೆ.
ಸಂಪಾದಕೀಯ ನಿಲುವುಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರ ದಾಳಿ ಮಾಡಿದ ನಂತರ ಈಗ ಸರಕಾರವು ಈ ಪದ್ಧತಿಯಿಂದ ಹಿಂದೂಗಳನ್ನು ಕಿರುಕುಳ ನೀಡಲು ಪ್ರಯತ್ನಿಸುತ್ತಿದೆ. ಭಾರತ ಸರಕಾರ ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗಾಗಿ ಏನಾದರೂ ಮಾಡುವುದೇ ? |