೨೦೦೬ ರಲ್ಲಿ ಸಚಿನ್ ತೆಂಡೂಲ್ಕರ್ ಇವರನ್ನು ಕೊಲ್ಲುವ ಪ್ರಯತ್ನ ! – ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಸ್ವೀಕೃತಿ

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ ಇವರ ಸ್ವೀಕೃತಿ !

ನವದೆಹಲಿ – ಭಾರತದ ಕ್ರಿಕೆಟ್ ಆಟಗಾರ ಸಚಿನ ತೆಂಡೂಲ್ಕರ್ ಇವರನ್ನು ನಾನು ಕೊಲ್ಲುವ ಪ್ರಯತ್ನ ಮಾಡಿದ್ದೆ, ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಮತ್ತು ವೇಗದ ಬೌಲರ್ ಶೋಯೆಬ್ ಅಖ್ತರ್ ಇವರು ಸ್ವೀಕೃತಿ ನೀಡಿರುವ ಒಂದು ವಿಡಿಯೋ ಪ್ರಸಾರವಾಗಿದೆ. ಜೂನ್ ೨೦೨೨ ರಲ್ಲಿ ನೀಡಿರುವ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ೨೦೦೬ ರಲ್ಲಿ ಭಾರತ ಮತ್ತು ಪಾಕಿಸ್ತಾನ ಇವರಲ್ಲಿ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿರುವ ಮೂರನೇ ಟೆಸ್ಟ್ ಪಂದ್ಯದ ಬಗ್ಗೆ ಆತ ಮಾತನಾಡುತ್ತಿದ್ದನು.

ಅಖ್ತರ ಮಾತು ಮುಂದುವರಿಸಿ, ಒಂದು ಪಂದ್ಯದಲ್ಲಿ ನನಗೆ ನಿಜವಾಗಿಯೂ ಸಚಿನನಿಗೆ ಗಾಯಗೊಳಿಸಬೇಕಿತ್ತು ನಾನು ಅದಕ್ಕಾಗಿ ಪ್ರಯತ್ನಿಸುತ್ತಿದ್ದೆ. ಯಾವುದೇ ಪರಿಸ್ಥಿತಿಯಲ್ಲಿದ್ದರೂ ನಾನು ಅವರಿಗೆ ಗಾಯ ಗೊಳಿಸುವ ನನ್ನ ನಿಶ್ಚಯವಾಗಿತ್ತು. ಕ್ಯಾಪ್ಟನ್ ಇನಝಮಾಂ ಉಲ್ ಹಕ್ ಆಗ ನನಗೆ ಬೌಲಿಂಗ್ ಮಾಡಲು ಹೇಳಿದರು, ಆದರೂ ಕೂಡ ನನ್ನ ಪ್ರಯತ್ನ ಮುಂದುವರೆದಿತ್ತು. ನಾನು ಉದ್ದೇಶಪೂರ್ವಕವಾಗಿ ಸಚಿನ್ ನ ಟೋಪಿ ಮೇಲೆ ಚೆಂಡು ಹೊಡೆದನು. ಆಗ ಅವರಿಗೆ ಚೆಂಡು ತಾಗಿತು, ಆಗ ನಾನು ಸಚಿನ್ ಸತ್ತೇ ಹೋದರೆಂದು ತಿಳಿದಿದ್ದೆ; ಆದರೆ ಚೆಂಡು ಅವರ ಹಣೆಗೆ ಅಪ್ಪಳಿಸಿತು ಎಂದು ನಂತರ ತಿಳಿಯಿತು. ನಂತರ ನಾನು ಅವರಿಗೆ ಮತ್ತೊಮ್ಮೆ ಗಾಯಗೊಳಿಸುವ ಪ್ರಯತ್ನ ಮಾಡಿದೆ ಎಂದು ನಾನು ಇಂದು ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ.

ಮಹೇಂದ್ರ ಸಿಂಹ ಧೋನಿ ಇವರನ್ನು ಕೂಡ ಗಾಯಗೊಳಿಸುವ ಪ್ರಯತ್ನ ಮಾಡಿದ್ದೆ !

ಅಕ್ಟೋಬರ್ ೨೦೨೧ ದಲ್ಲಿ ಒಂದು ಚರ್ಚಾ ಕೂಟದಲ್ಲಿ ಮಾತನಾಡುವಾಗ ಶೋಯೆಬ್ ಅಖ್ತರ್ ಇವರು, ೨೦೦೬ ರಲ್ಲಿ ಭಾರತ ಮತ್ತು ಪಾಕಿಸ್ತಾನ ಇವರಲ್ಲಿ ಫೈಜಲಾಬಾದ್ ಇಲ್ಲಿಯ ಟೆಸ್ಟ್ ಪಂದ್ಯದಲ್ಲಿ ಬೋಲಿಂಗ್ ಮಾಡುವಾಗ ಭಾರತೀಯ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಹ ಧೋನಿ ಇವರನ್ನು ಉದ್ದೇಶಪೂರ್ವಕ ಶರೀರಕ್ಕೆ ತಾಗುವ ಹಾಗೆ ಬಾಲ್ ಎಸೆಯುತ್ತಿದ್ದೇನು ಎಂಬುದನ್ನು ಒಪ್ಪಿಕೊಂಡರು. ಧೋನಿ ಒಬ್ಬ ಒಳ್ಳೆಯ ಮನುಷ್ಯನಾಗಿದ್ದಾನೆ ಮತ್ತು ನಾನು ಅವರನ್ನು ಗೌರವಿಸುತ್ತೇನೆ. ನನಗೆ ಅದರ ಬಗ್ಗೆ ಬಹಳ ನೋವಾಗುತ್ತದೆ, ಧೋನಿಗೆ ಏನಾದರೂ ಚಂಡು ತಾಗಿದ್ದರೆ ಅವರು ಗಂಭೀರವಾಗಿ ಗಾಯಕೊಳ್ಳುತ್ತಿದ್ದರು.

(ಸೌಜನ್ಯ – Sportskeeda Cricket)

ಸಂಪಾದಕೀಯ ನಿಲುವು

ಕ್ರಿಕೆಟ್ ಜಿಹಾದ್ ನಡೆಸುವ ಪಾಕಿಸ್ತಾನಿಗಳ ಜೊತೆಗೆ ಕ್ರಿಕೆಟ್ ಆಡಬಾರದೆಂದು ಭಾರತ ಎಂದು ನಿರ್ಣಯ ತೆಗೆದುಕೊಳ್ಳುವುದು ?

ಭಾರತವು ಪಾಕಿಸ್ತಾನದ ಜೊತೆಗೆ ಆಡಲು ವಿರೋಧಿಸುವ ರಾಷ್ಟ್ರ ಪ್ರೇಮಿಗಳನ್ನು ಟೀಕಿಸಲಾಗುತ್ತದೆ ಈಗ ಮೌನ ಏಕೆ ?