ಕೋಲಕಾತಾ (ಬಂಗಾಳ) – ರಾಜ್ಯದಲ್ಲಿನ ಆಸನಸೋಲದಲ್ಲಿರುವ ಸರಕಾರಿ ಭೂಮಿಯಲ್ಲಿ ಆಸನಸೋಲ-ದುರ್ಗಾಪುರ ವಿಕಾಸ ಪ್ರಾಧಿಕಾರವು ಗಣೇಶೋತ್ಸವದ ಆಚರಣೆಗೆ ಅನುಮತಿಯನ್ನು ನಿರಾಕಸಿದ್ದರಿಂದ ಕೋಲಕಾತಾ ಉಚ್ಚ ನ್ಯಾಯಾಲಯವು ಪ್ರಾಧಿಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯವು `ಆಸನಸೋಲ-ದುರ್ಗಾಪುರ ವಿಕಾಸ ಪ್ರಾಧಿಕಾರವು ಅನುಮತಿ ನೀಡಲು ನಿರಾಕರಿಸಿರುವ ನಿರ್ಣಯವು ಹಾಸ್ಯಾಸ್ಪದವಾಗಿದೆ. ಇದು ಸಂವಿಧಾನದ ಕಲಂ ೧೪ರ ಉಲ್ಲಂಘನೆಯಾಗಿದೆ. ಇಲ್ಲಿ ಹಿಂದೂಗಳದ್ದೇ ಹಬ್ಬವಾಗಿರುವ ದುರ್ಗಾ ಪೂಜೆಗೆ ಅನುಮತಿ ನೀಡಬಹುದಾದರೆ ಹಿಂದೂಗಳ ಇತರ ದೇವತೆಗಳ ಪೂಜೆಗೆ ಅನುಮತಿ ಅಥವಾ ಇತರ ಧರ್ಮೀಯರ ಹಬ್ಬಗಳಿಗೆ ಅನುಮತಿ ನೀಡಲು ಏಕೆ ಆಗುವುದಿಲ್ಲ ? ಜೀವನದ ಮೂಲಭೂತ ಅಧಿಕಾರಗಳ ಅನ್ವಯ ಯಾವುದೇ ವ್ಯಕ್ತಿಗೆ ಆತನ ವ್ಯಕ್ತಿಸ್ವಾತಂತ್ರ್ಯದಿಂದ ವಂಚಿತಗೊಳಿಸಬಾರದು’, ಎಂದು ಹೇಳಿದೆ.
೧. ಗಣೇಶೋತ್ಸವದ ಆಚರಣೆಗಾಗಿ ಅನುಮತಿ ಕೇಳಲಾದ ಭೂಮಿಯು ಆಸನಸೋಲ-ದುರ್ಗಾಪುರ ವಿಕಾಸ ಪ್ರಾಧಿಕಾರದ ಅಡಿಯಲ್ಲಿ ಬರುತ್ತದೆ. ಉತ್ಸವವನ್ನು ಆಚರಿಸುವವರಿಗೆ ಅನುಮತಿಯನ್ನು ನಿರಾಕರಿಸುವಾಗ ಪ್ರಾಧಿಕಾರವು `ಶ್ರೀ ಗಣೇಶೋತ್ಸವವನ್ನು ಈ ಭೂಮಿಯ ಮೇಲೆ ಆಚರಿಸಲು ಸಾಧ್ಯವಿಲ್ಲ, ವಿಶೇಷವೆಂದರೆ ಈ ಭೂಮಿಯಲ್ಲಿ ನವರಾತ್ರಿಯಂದು ದುರ್ಗಾ ಪೂಜೆಯನ್ನು ಆಯೋಜಿಸಲಾಗುತ್ತದೆ ಹಾಗೆಯೆ ಇಲ್ಲಿ ಸರಕಾರಿ ಕಾರ್ಯಕ್ರಮಗಳೂ ನಡೆಯುತ್ತವೆ’ ಎಂದು ಹೇಳಿದೆ.
೨. ಅನುಮತಿಯನ್ನು ನಿರಾಕರಿಸಿದ್ದರಿಂದ ಆಯೋಜಕರು ನ್ಯಾಯಾಲಯದಲ್ಲಿ ಖಟ್ಲೆಯನ್ನು ದಾಖಲಿಸಿ ಅನುಮತಿಯನ್ನು ಕೋರಿದ್ದರು. ಇದರ ಆಲಿಕೆಯ ಸಮಯದಲ್ಲಿ ನ್ಯಾಯಾಲಯವು ಸರಕಾರದ ಅಭಿಪ್ರಾಯವನ್ನು ಕೇಳಿತ್ತು. ಸರಕಾರವು ಈ ಮನವಿಯ ಬಗ್ಗೆ ವಿಚಾರ ಮಾಡಬಹುದು ಎಂದು ಹೇಳಿತ್ತು.
೩. ಆಸನಸೋಲ-ದುರ್ಗಾಪುರ ವಿಕಾಸ ಪ್ರಾಧಿಕಾರವು `ಬಂಗಾಳದಲ್ಲಿ ಶ್ರೀಗಣೇಶೋತ್ಸವವನ್ನು ಆಚರಿಸುವ ಯಾವುದೇ ರೂಢಿಯಿಲ್ಲ. ಹಾಗೆಯೆ ಇದು ದುರ್ಗಾ ಪೂಜೆಯಂತಹ ಜಾತ್ಯತೀತ ಹಾಗೂ ಸಂಸ್ಕೃತಿಕ ಆಚರಣೆಯೂ ಅಲ್ಲ’ ಎಂದು ಹೇಳಿದೆ.
Calcutta High Court allows Ganesh Chaturthi celebrations on ground ‘earmarked for Durga Puja.’
Read more: https://t.co/WhBLJfdZcX#CalcuttaHighCourt #GaneshChaturthi #DurgaPuja #Article14 pic.twitter.com/pTFX9wLy9B
— Live Law (@LiveLawIndia) September 9, 2023
ಸಂಪಾದಕೀಯ ನಿಲುವುದುರ್ಗಾ ಪೂಜೆಗೆ ಅನುಮತಿ ನೀಡುವಾಗ ಹಿಂದೂಗಳ ಇತರ ದೇವತೆಗಳ ಪೂಜೆಗೆ ಅನುಮತಿ ಏಕೆ ನೀಡಲಾಗುವುದಿಲ್ಲ ? ಇಂತಹ ಪ್ರಾಧಿಕಾರಕ್ಕೆ ನ್ಯಾಯಾಲಯವು ಶಿಕ್ಷೆ ನೀಡಲೇಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ ! |