ಉತ್ತರಪ್ರದೇಶದಲ್ಲಿ ಕಡಿಮೆ ಹಾಜರಾತಿಯಿಂದ ೨೪೦ ಮದರಸಾಗಳ ಅನುಮತಿ ರದ್ದು !

ಅನೇಕ ಮದರಸಾಗಳ ಅನುಮತಿ ರದ್ದು ಮಾಡುವಂತೆ ಸ್ವತಃ ಕೇಳಿಕೊಂಡಿವೆ !

ಲಕ್ಷಣಪುರಿ (ಉತ್ತರಪ್ರದೇಶ) – ಸಾಕಷ್ಟು ಹಾಜರತಿಯ ಅಭಾವದಿಂದ ಉತ್ತರ ಪ್ರದೇಶ ರಾಜ್ಯದಲ್ಲಿ ೨೪೦ ಮದರಸಾಗಳ ಅನುಮತಿ ರದ್ದುಮಾಡುವ ನಿರ್ಣಯ ತೆಗೆದುಕೊಳ್ಳಲಾಗಿದೆ, ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ವಿಭಾಗದ ಅಧಿಕಾರಿಗಳು “ಉತ್ತರಪ್ರದೇಶಮದರಸಾ ಶಿಕ್ಷಣ ಮಂಡಳಿಗೆ“ ಈ ರೀತಿಯ ಮಸೀದಿಗಳ ಪಟ್ಟಿಯನ್ನು ಕಳುಹಿಸಿದ್ದಾರೆ. ಇದರಲ್ಲಿ ಅನೇಕ ಮದರಸಾಗಳು ಪ್ರಾರಂಭವೇ ಆಗಿಲ್ಲ. ೨೦೧೬ ರಿಂದ “ಮದರಸಾ ನಿಯಮಗಳ ಪ್ರಕಾರ “ಅನೇಕ ಮದರಸಾಗಳಲ್ಲಿ ಕಡಿಮೆ ಹಾಜರಾತಿಯ ಕಾರಣ ಮದರಸಾಗಳು ತಮ್ಮ ದಾಖಲೆಗಳನ್ನು ವೆಬ್ ಸೈಟ್ ಗಳಲ್ಲಿ ಪ್ರಕಟಿಸಿಲ್ಲ. ಅನೇಕ ಮದರಸಾಗಳು ಅವರ ಅನುಮತಿಯನ್ನು ತಾವೇ ರದ್ದು ಮಾಡುವಂತೆ “ಉತ್ತರಪ್ರದೇಶ ಮದರಸಾ ಶಿಕ್ಷಣ ಮಂಡಳಿಗೆ“ಗೆ ವಿನಂತಿಸಿಕೊಂಡಿವೆ.

ರಾಜ್ಯದಲ್ಲಿ ೧೬ ಸಾವಿರದ ೪೫೦ ಮದರಸಾಗಳು ಮಾನ್ಯತೆ ಪಡೆದಿವೆ, ಇದರಲ್ಲಿ ೫೬೦ ಮದರಸಾಗಳು ಅನುದಾನಗಳು ಪಡೆದಿವೆ. ಮದರಸಾ ಶಿಕ್ಷಣ ಮಂಡಳಿಯ ಪರೀಕ್ಷೆಗಳಲ್ಲಿ ಪ್ರತಿ ವರ್ಷ ಅಭ್ಯರ್ಥಿಗಳ ಸಂಖ್ಯೆ ವೇಗವಾಗಿ ಕಡಿಮೆಯಾಗುತ್ತಿದೆ. ಈ ವರ್ಷ ರಾಜ್ಯಾದ್ಯಂತ ಮದರಸಾಗಳ ಪೈಕಿ ಕೇವಲ ೧ ಲಕ್ಷ ೭೨ ಸಾವಿರ ಅರ್ಜಿಗಳು ಬಂದಿವೆ.

ಸಂಪಾದಕೀಯ ನಿಲುವು

ಜಾತ್ಯಾತೀತ ದೇಶದಲ್ಲಿ ಸರಕಾರದ ಹಣದಿಂದ ಮುಸಲ್ಮಾನರಿಗೆ ಧಾರ್ಮಿಕ ಶಿಕ್ಷಣಕೊಡುವುದು, ಇದು ದೇಶದಲ್ಲಿನ ಬಹುಸಂಖ್ಯಾತ ಹಿಂದೂಗಳಿಗೆ ಅನ್ಯಾಯವಾಗಿದ್ದು, ಸಂವಿಧಾನವು ಜನರಿಗೆ ನೀಡಿರುವ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ! ಆದರೆ ಸ್ವಾತಂತ್ರ್ಯಾನಂತರ ಇಲ್ಲಿಯವರೆಗೂ ಎಲ್ಲಾ ಸರಕಾರಗಳು ಕೇವಲ ಓಟಿಗಾಗಿ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದ್ದು ಮುಸಲ್ಮಾನರ ಓಲೈಕೆ ಮಾಡುತ್ತಿವೆ ! ಈ ಚಿತ್ರಣವನ್ನು ಬದಲಾಯಿಸುವುದು ಅವಶ್ಯಕವಾಗಿದೆ !