Cops Assault Hindu Devotees : ಕೆನಡಾದಲ್ಲಿನ ಬ್ರಿಟಿಷ ಕೊಲಂಬಿಯಾ ಪೊಲೀಸರಿಂದ ಹಿಂದೂ ಭಕ್ತರ ಮೇಲೆ ದಾಳಿ !

ವಿಕ್ಟೋರಿಯಾ (ಬ್ರಿಟಿಷ ಕೊಲಂಬಿಯಾ) – ಕೆನಡಾದಲ್ಲಿನ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿನ ಸರೆಯಲ್ಲಿರುವ ಒಂದು ಹಿಂದೂ ದೇವಸ್ಥಾನದ ಪರಿಸರದಲ್ಲಿ ‘ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್’ (ಆರ್.ಸಿ.ಎಮ್.ಪಿ.) ಎಂಬ ಸಂಘಟನೆಯ ಪೊಲೀಸ ಅಧಿಕಾರಿಗಳು ಹಿಂದೂ ಭಾವಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ದೇವಸ್ಥಾನದ ಆವರಣದಲ್ಲಿ ದೀಪಾವಳಿ ಹಬ್ಬ ಆಚರಿಸಲು ನೆರೆದಿದ್ದ ಹಿಂದೂ ಭಾವಿಕರ ಮೇಲೆ ಹಲ್ಲೆ ನಡೆಸಲು ಬಂದಿದ್ದ ಖಲಿಸ್ತಾನಿಗಳಿಗೆ ರಕ್ಷಣೆ ನೀಡಿದ್ದಲ್ಲದೇ, ಪೊಲೀಸರು ಹಿಂದೂಗಳ ಮೇಲೆ ಹಿಗ್ಗಾಮುಗ್ಗಾ ಲಾಠಿ ಪ್ರಹಾರ ನಡೆಸಿದ್ದಾರೆ. ಇದರೊಂದಿಗೆ ಪೊಲೀಸರು ಯಾವುದೇ ಆರೋಪವಿಲ್ಲದೇ ಇಲ್ಲಿನ 3 ಹಿಂದೂ ಭಾವಿಕರನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ ದೇವಸ್ಥಾನದ ಪರಿಸರದಲ್ಲಿನ ವಾತಾವರಣವು ಉದ್ವಿಗ್ನಗೊಂಡಿದೆ.
ಹಿಂದೂ ಭಕ್ತರ ಬಂಧನಕ್ಕೆ ದೇವಸ್ಥಾನದ ವಕ್ತಾರರು ಕಳವಳ ವ್ಯಕ್ತಪಡಿಸಿದ್ದಾರೆ. ‘ನಾವು ಪೊಲೀಸ್ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದು ಹಿಂದೂ ಸಮುದಾಯವು ತಾಳ್ಮೆಯಿಂದಿರಬೇಕು’ ಎಂದು ವಕ್ತಾರರು ಹೇಳಿದ್ದಾರೆ. ತನಿಖೆಯ ಒಂದು ಭಾಗವಾಗಿ ಬಂಧಿಸಲಾಗಿದೆ ಎಂದು ಆರ್.ಸಿ.ಎಮ್.ಪಿ.’ಯು ಹೇಳಿದೆ.

ಸಂಪಾದಕೀಯ ನಿಲುವು

  • ಖಲಿಸ್ತಾನಿಗಳಿಗೆ ರಕ್ಷಣೆಯಾದರೆ ಹಿಂದೂಗಳಿಗೆ ಲಾಠಿಗಳಿಂದ ಥಳಿತ
  • ಈ ಬಗ್ಗೆ ಭಾರತ ಸರಕಾರ ಕೆನಡಾ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತದೆಯೇ ?