VishvaMitra Goal For INDIA : ಕೆಲವು ದೇಶಗಳು ಹೆಚ್ಚು ಜಟಿಲವಾಗಿದ್ದರೂ ಭಾರತ ‘ವಿಶ್ವ ಮಿತ್ರ’ ಆಗಬೇಕಿದೆ ! – ಡಾ. ಎಸ್. ಜೈ ಶಂಕರ

ನವ ದೆಹಲಿ – ಕೆಲವು ಅಂತರಾಷ್ಟ್ರೀಯ ಪಾಲುದಾರ ದೇಶಗಳು ಜಗತ್ತಿನಲ್ಲಿ ಇತರರಗಿಂತಲೂ ಹೆಚ್ಚು ಜಟಿಲವಾಗಿರಬಹುದು; ಕಾರಣ ಅವು ಯಾವಾಗಲೂ ಪರಸ್ಪರ ಗೌರವದ ಸಂಸ್ಕೃತಿ ಅಥವಾ ರಾಜನೈತಿಕ ಸೌಜನ್ಯದ ಪರಂಪರೆ ಹಂಚಿಕೊಳ್ಳುವುದಿಲ್ಲ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರು ಯಾವುದೇ ದೇಶದ ಹೆಸರು ಹೇಳದೆ ಟೀಕಿಸಿದರು. ಈ ಟೀಕೆಯು ಅಮೇರಿಕಾ, ಕೆನಡಾ ಮತ್ತು ಚೀನಾ ಬಗ್ಗೆ ಮಾಡಲಾಗಿದೆ ಎಂದು ಚರ್ಚೆ ನಡೆಯುತ್ತಿದೆ. ಇದೇ ಸಮಯದಲ್ಲಿ ‘ಭಾರತದ ವಿಶ್ವ ಮಿತ್ರ (ಜಾಗತೀಕ ಮಿತ್ರ) ಆಗುವ ಜಗತ್ತಿನಲ್ಲಿ ಮೈತ್ರಿ ಹೆಚ್ಚಿಸುವುದೇ ಧ್ಯೆಯ್ಯವಾಗಿದೆ’, ಹೀಗೂ ಕೂಡ ಅವರು ಸ್ಪಷ್ಟಪಡಿಸಿದರು. ಡಾ. ಜೈಶಂಕರ ದೆಹಲಿಯಲ್ಲಿ ಒಂದು ಪುಸ್ತಕ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಡಾ. ಎಸ್. ಜೈ ಶಂಕರ್ ಇವರು ಮಾತು ಮುಂದುವರೆಸಿ,

೧. ಭಾರತ ತನ್ನನ್ನು ವಿಶ್ವ ಮಿತ್ರ ಎಂದು ಸ್ಥಾಪಿಸಲು ಬಯಸುತ್ತಿದೆ ಹಾಗೂ ಹೆಚ್ಚೆಚ್ಚು ದೇಶಗಳ ಜೊತೆಗೆ ಸ್ನೇಹ ಪ್ರಸ್ತಾಪಿಸಲು ಇಚ್ಚಿಸುತ್ತಿದೆ. ಪ್ರಸ್ತುತ ಉದಯೋನ್ಮುಖ ಬಹುಶಕ್ತಿಯ ಜಗತ್ತಿನಲ್ಲಿ ‘ವಿಶೇಷ ಮೈತ್ರಿ’ (ಕೆಲವು ದೇಶಗಳ ಜೊತೆಗೆ ಇರುವ ಮೈತ್ರಿ) ಎಂದು ಏಕಾಂಗಿಯಾಗಿ ಉಳಿದಿಲ್ಲ. ಅಂತಹ ಮೈತ್ರಿ ಅಭಿವೃದ್ಧಿಗೊಳಿಸುವುದರ ಹಿಂದೆ ಸಾಂಸ್ಕೃತಿಕ ಮತ್ತು ಐತಿಹಾಸಿಕ ಕಾರಣಗಳು ಇವೆ. ಜಗತ್ತಿನ ಜೊತೆಗೆ ಸಂಬಂಧ ಇರಿಸುವುದಕ್ಕಾಗಿ ಭಾರತದ ಕ್ಷಮತೆ ಅದರ ಆತ್ಮವಿಶ್ವಾಸಕ್ಕೆ ಕಾರಣವಾಗಿದೆ.

೨. ನಾವು ನಮ್ಮ ದೇಶದ ಆಂತರಿಕ ವಿಷಯಗಳು ಕುರಿತು ಆಯಾ ಸಮಯದಲ್ಲಿ ಪ್ರತಿಕ್ರಿಯೆ ನೋಡಿದ್ದೇವೆ. ಆದರೂ, ಇತರ ಪಕ್ಷಗಳಿಗೆ (ದೇಶಗಳಿಗೆ) ಸ್ವಲ್ಪವಾದರೂ ಸಮಾನ ಸೌಜನ್ಯ ನೀಡಲಾಗುತ್ತದೆ. ಒಬ್ಬರಿಗೆ ಸ್ವಾತಂತ್ರ್ಯ ಎಂದರೆ ಇನ್ನೊಬ್ಬರಿಗೆ ಹಸ್ತಕ್ಷೇಪ ಆಗಿರಬಹುದು. ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಅಖಂಡತೆ ಇಂತಹ ಸೂಕ್ಷ್ಮ ವಿಷಯ ಪಾಲುದಾರರ ಜೊತೆಗೆ ಇರುವ ಸಂಬಂಧದ ಮೌಲ್ಯಮಾಪನದ ಮಹತ್ವದ ಘಟಕವಾಗಿರುತ್ತವೆ ಇದು ವಸ್ತುಸ್ಥಿತಿ ಇದೆ, ಎಂದು ಅವರು ಹೇಳಿದರು.