Himanta Biswa Sarma Jharkhand : ಯಾವಾಗ ಹಿಂದೂಗಳು ಒಗ್ಗೂಡುತ್ತಾರೆ, ಆಗ ಯಾವುದೇ ಅವ್ಯವಸ್ಥೆ ಅಥವಾ ಗಲಭೆಯಾಗುವುದಿಲ್ಲ ! – ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಜಾರ್ಖಂಡ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಜಪ ನಾಯಕ ಮತ್ತು ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಹೇಳಿಕೆ !

ರಾಂಚಿ (ಜಾರಖಂಡ) – ಹಿಂದೂಗಳು ಒಗ್ಗಟ್ಟಿನಿಂದ ಇದ್ದಾಗ ಯಾವುದೇ ಅವ್ಯವಸ್ಥೆ ಅಥವಾ ಗಲಭೆಗಳು ನಡೆಯುವುದಿಲ್ಲ ಎಂದು ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಜಾರ್ಖಂಡ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಹೇಳಿದರು. ಈ ಭಾಷಣದ ಬಗ್ಗೆ ‘ಇಂಡಿ’ ಒಕ್ಕೂಟವು ಆಕ್ಷೇಪಣೆ ವ್ಯಕ್ತಪಡಿಸಿ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಸರಮಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.

ಮುಖ್ಯಮಂತ್ರಿ ಸರಮಾ ಮಾತನಾಡಿ,

1. ಆಸ್ಸಾಂನಲ್ಲಿನ ಮದರಸಾಗಳನ್ನು ಮುಚ್ಚುವುದರಿಂದ ಹಿಡಿದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದವರೆಗೆ ಯಾವುದೇ ಅವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ !

ಆಸ್ಸಾಂನಲ್ಲಿ ಕೆಲವರು, ‘ನಾವು ಮದರಸಾವನ್ನು ಮುಚ್ಚಲು ಸಾಧ್ಯವಿಲ್ಲ’ ಎಂದು ಹೇಳುತ್ತಿದ್ದರು. ಅವರಿಗೆ ನಾನು ‘ಭಾರತಕ್ಕೆ ಸಧ್ಯ ಮುಸ್ಲಿಂ ಧರ್ಮಗುರುಗಳ ಅಗತ್ಯವಿಲ್ಲ, ಬದಲಾಗಿ ಡಾಕ್ಟರ-ಇಂಜಿನಿಯರ ಇವರ ಆವಶ್ಯಕತೆಯಿದೆ’ ಎಂದು ಹೇಳಿದ್ದೆನು, ಅದಕ್ಕೆ ಅವರು `ಹೀಗೆ ಮಾಡಿದರೆ ಅವ್ಯವಸ್ಥೆ ಅಥವಾ ಗಲಭೆಯಾಗಬಹುದು’ ಎಂದು ಹೇಳುತ್ತಿದ್ದರು. ನಾನು ಅವರಿಗೆ, `ನನಗೆ ಒಮ್ಮೆಯಾದರೂ ಅವ್ಯವಸ್ಥೆ ಅಥವಾ ಗಲಭೆಯನ್ನು ಮಾಡಿ ತೋರಿಸಿರಿ’, ನಾನು ನೋಡುತ್ತೇನೆ ಹೇಗೆ ಮಾಡುತ್ತಿರಿ ಎಂದು ಮದರಸಾಗಳನ್ನು ಮುಚ್ಚಲು ಪ್ರಾರಂಭಿಸಿದೆನು; ಆದರೆ ಯಾವುದೇ ಅವ್ಯವಸ್ಥೆಯಾಗಲಿಲ್ಲ. ಶ್ರೀರಾಮ ಮಂದಿರ ನಿರ್ಮಾಣದ ಸಮಯದಲ್ಲಿಯೂ ಜನರು ಹೀಗೆಯೇ ಅವ್ಯವಸ್ಥೆ ಆಗುತ್ತದೆ ಎಂದು ಹೇಳುತ್ತಿದ್ದರು. ಆದರೆ ಏನಾಯಿತು? ಹಿಂದೂಗಳು ಒಗ್ಗಟ್ಟಾಗಿ ಇದ್ದಾಗ ಯಾವುದೇ ಗಲಬೆ ಅಥವಾ ಅವ್ಯವಸ್ಥೆ ಆಗುವುದಿಲ್ಲ, ಎಂದು ಹೇಳಿದರು.

2. ಈ ಚುನಾವಣೆ ಹಿಂದೂಗಳ ಅಸ್ಮಿತೆಯ ಚುನಾವಣೆ !

ಕಾಂಗ್ರೆಸ್ಸಿನ ಉದ್ದೇಶ ಹಿಂದೂಗಳ ಮತಗಳನ್ನು ಜಾತಿಯ ಆಧಾರದ ಮೇಲೆ ವಿಭಜಿಸುವುದು ಮತ್ತು ಒಂದು ನಿರ್ದಿಷ್ಟ ಸಮುದಾಯದ ಶೇ. 100ರಷ್ಟು ಮತಗಳನ್ನು ಪಡೆಯುವುದಾಗಿದೆ. ಜಾರ್ಖಂಡ್‌ಲ್ಲಿ ಏನು ನಡೆಯುತ್ತಿದೆಯೋ, ಅದು ಹೀಗೆಯೇ ಮುಂದುವರಿದರೆ, ಭವಿಷ್ಯದಲ್ಲಿ ಹಿಂದೂಗಳ ಜನಸಂಖ್ಯೆಯು ಶೇ. 50 ರಷ್ಟು ಆಗುವುದು ಮತ್ತು ನುಸುಳುಕೋರರ ಜನಸಂಖ್ಯೆಯು ಬಹುತೇಕ ಒಂದೇ ಆಗಿರುತ್ತದೆ. ಅದಕ್ಕಾಗಿಯೇ ಈ ಚುನಾವಣೆ ನಮ್ಮ ಅಸ್ಮಿತೆಯ ಚುನಾವಣೆಯಾಗಿದೆ. ನುಸುಳುಕೋರರನ್ನು ಹೊರಗೆ ಕಳಿಸುವುದು ನಮಗೆ ಆವಶ್ಯಕವಾಗಿದೆ ಎಂದು ಹೇಳಿದರು.